ರಾಷ್ಟ್ರೀಯ

ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಹೆರಿಗೆ

Pinterest LinkedIn Tumblr


ರಾಂಚಿ: ಪ್ರತಿಷ್ಠಿತ ವ್ಯಕ್ತಿಗಳು ಹಾಗೂ ಗಣ್ಯರು ಹೈಟೆಕ್‌, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಸಾಮಾನ್ಯವಾಗಿದೆ. ಆದರೆ, ಇಲ್ಲಿನ ಐಎಎಸ್‌ ಮಹಿಳಾ ಅಧಿಕಾರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಮಗುವಿಗೆ ಜನ್ಮ ನೀಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಜಾರ್ಖಂಡ್‌ ಗೊಡ್ಡಾ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಕಿರಾಣ್‌ ಕುಮಾರ್‌ ಪಸಿ ಎರಡನೇ ಬಾರಿ ತುಂಬು ಗರ್ಭಿಣಿಯಾಗಿದ್ದರು. ಹೆರಿಗೆ ಸಮಯ ಸಮೀಪಿಸುತ್ತಿತ್ತು. ಯಾವ ಆಸ್ಪತ್ರೆಗೆ ದಾಖಲಾಗಬೇಕು ಎಂಬ ಚಿಂತನೆಯಲ್ಲಿದ್ದ ಅವರು ಕಡೆಗೆ ಇಲ್ಲಿನ ಗೊಡ್ಡಾ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಹೆರಿಗೆ ಮಾಡಿಸಿಕೊಂಡು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯ ಮೇಲೆ ಸಾರ್ವಜನಿಕರು ಹೆಚ್ಚಿನ ನಂಬಿಕೆ ಹಾಗೂ ಗೌರವ ಬರುವಂತೆ ಜಿಲ್ಲಾಧಿಕಾರಿ ಮಾಡಿದ್ದಾರೆ. ಇದು ಸ್ತುತ್ಯರ್ಹ ನಡೆ ಎಂದು ಮುಖ್ಯಮಂತ್ರಿ ಹೇಮಂತ್‌ ಸೋರೆನ್‌ ಸೇರಿದಂತೆ ಸಚಿವರು, ವೈದ್ಯಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮಹಿಳಾ ಅಧಿಕಾರಿಯ ನಡೆಗೆ ಸಾಮಾಜಿಕ ಜಾಲತಾಣಗಳಲ್ಲೂ ಶ್ಲಾಘನೆ ವ್ಯಕ್ತವಾಗಿದೆ.

ಕಿರಣ್‌ ಕುಮಾರಿ ಪಸಿ ನಾಲ್ಕು ವರ್ಷದ ಹಿಂದೆ ಉತ್ತರಪ್ರದೇಶದ ಲಕ್ನೋದ ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲು ಮಗುವಿಗೆ ಜನ್ಮ ನೀಡಿದ್ದರು.

Comments are closed.