
ದಿಲ್ಲಿ: ಶೀಘ್ರವೇ 100 ರೂ. ಮುಖಬೆಲೆಯ ಹೊಸ ನೋಟು ಇರಲಿದೆ. ಇದರ ವಿಶೇಷತೆ ಎಂದರೆ ಎಷ್ಟು ಮಡಿಕೆ ಬಿದ್ದರೂ ಈ ನೋಟು ತುಂಡಾಗುವುದಿಲ್ಲ. ಈಗಿರುವ 100 ರೂ. ನೋಟನ್ನು ಹೋಲುತ್ತಿದ್ದು, ಶೀಘ್ರದಲ್ಲಿಯೇ ಜನರ ಕೈಗಳಿಗೆ ಬರಲಿದೆ. ಆರ್‌ಬಿಐ ಇಂತಹ 1 ಕೋಟಿ ನೋಟುಗಳನ್ನು ಮುದ್ರಿಸಲಿದೆ.
ಸದ್ಯ ಮಾರುಕಟ್ಟೆಯಲ್ಲಿ ಬದನೆ ಬಣ್ಣದ 100 ರೂ. ಮುಖಬೆಲೆಯ ನೋಟು ಚಾಲ್ತಿಯಲ್ಲಿದೆ. ಹೊಸ ನೋಟುಗಳನ್ನು ದೇಶದ ಒಟ್ಟು ಐದು ನಗರಗಳಲ್ಲಿ ಪೈಲಟ್ ಪ್ರಾಜೆಕ್ಟ್ ರೂಪದಲ್ಲಿ ಬಿಡುಗಡೆಗೊಳಿಸಲಾಗುತ್ತದೆ.
ನೋ ಡ್ಯಾಮೇಜ್
ಹೊಸ ನೋಟನ್ನು ನೀರಿನಲ್ಲಿ ನೆನೆದರೂ ಯಾವುದೇ ಸಮಸ್ಯೆಯಾಗುವುದಿಲ್ಲ. ಏಕೆಂದರೆ ಈ ನೋಟಿಗೆ ತಯಾರಿಗೆ ವಾರ್ನಿಸ್ ಪೇಂಟ್ ಬಳಸಲಾಗಿದೆ. ಈ ನೋಟು ಕೂಡ ಗಾಂಧಿ ಸೀರಿಸ್ ನೋಟು ಆಗಿರಲಿದೆ. ಈ ನೋಟುಗಳು ಸದ್ಯ ಚಾಲ್ತಿಯಲ್ಲಿರುವ ನೋಟುಗಳಿಗಿಂತ ದುಪ್ಪಟ್ಟು ಬಾಳಿಕೆಗೆ ಬರಲಿವೆ. ಸದ್ಯ ಚಾಲ್ತಿಯಲ್ಲಿರುವ 100 ರೂ.ಮುಖಬೆಲೆಯ 1000 ನೋಟುಗಳ ಮುದ್ರಣಕ್ಕೆ 1,570 ರೂ. ವೆಚ್ಚ ತಗುಲುತ್ತದೆ. ಅಂದರೆ ಶೇ.20ರಷ್ಟು ದುಬಾರಿಯಾಗಲಿದೆ.
Comments are closed.