ರಾಷ್ಟ್ರೀಯ

ಸಿಖ್ಖರ ಪವಿತ್ರ ಗೋಲ್ಡನ್ ಟೆಂಪಲ್ ಆವರಣದಲ್ಲಿ ಟಿಕ್ ಟಾಕ್ ವಿಡಿಯೋ ನಿಷೇಧ

Pinterest LinkedIn Tumblr


ಅಮೃತಸರ: ಈಗ ಟಿಕ್ ಟಾಕ್ ವಿಡಿಯೋಗಳ ಕಾಲ. ಯುವಜನರಿಗೆ ಟಿಕ್ ಟಾಕ್ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದೆಂದರೆ ಅಚ್ಚುಮೆಚ್ಚು. ಆದರೆ ಈಗ ಸಿಖ್ಖರ ಪವಿತ್ರ ಗೋಲ್ಡನ್ ಟೆಂಪಲ್ ಆವರಣದಲ್ಲಿ ಟಿಕ್ ಟಾಕ್ ವಿಡಿಯೋಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.

ಇಲ್ಲಿನ ಶಿರೋಮಣಿ ಗುರುದ್ವಾರ ಪರ್ಬಂದಕ್ ಸಮಿತಿ ಈ ಆದೇಶ ಹೊರಡಿಸಿದೆ. ಶನಿವಾರ ಈ ಆದೇಶ ಹೊರಡಿಸಿದ್ದು, ಪವಿತ್ರ ಸ್ಥಳದ ಬಳಿ ಯಾರು ಕೂಡ ಟಿಕ್ ಟಾಕ್ ವಿಡಿಯೋ ಮಾಡುವಂತಿಲ್ಲ ಎಂದು ನೊಟೀಸ್ ಅಂಟಿಸಲಾಗಿದೆ.

ಯಾರಾದರೂ ಟಿಕ್ ಟಾಕ್ ವಿಡಿಯೋ ಮಾಡಿದರೆ ಅದನ್ನು ತಡೆಯಲು ಕಾರ್ಯಕರ್ತರನ್ನು ಕೂಡಾ ನೇಮಿಸಲಾಗಿದೆ.

ಈ ಪವಿತ್ರ ಸ್ಥಳದ ಮಹತ್ವ ಅರಿಯದವರು ಇಲ್ಲಿ ಬಂದು ಟಿಕ್ ಟಾಕ್ ವಿಡಿಯೋಗಳನ್ನು ಮಾಡುತ್ತಾರೆ. ಅದಕ್ಕಾಗಿ ನಾವು ಅವರನ್ನು ತಡೆಯತ್ತೇವೆ ಎಂದು ಸಮಿತಿಯ ಸಿಬ್ಬಂದಿಯೊಬ್ಬರು ಹೇಳಿಕೆ ನೀಡಿದ್ಧಾರೆ.

ಇತ್ತೀಚೆಗೆ ರೋಮ್ಯಾಂಟಿಕ್ ಮತ್ತು ಮಾದಕ ಹಾಡುಗಳಿಗೆ ಗುರುದ್ವಾರದ ಬಳಿ ಟಿಕ್ ಟಾಕ್ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.

Comments are closed.