ಅಂತರಾಷ್ಟ್ರೀಯ

ಕೊರೋನಾ ವೈರಸ್: ಪುತ್ರಿಗೆ ಗಾಳಿಯಲ್ಲಿಯೇ ಅಪ್ಪುಗೆ ನೀಡಿದ ನರ್ಸ್

Pinterest LinkedIn Tumblr


ಚೀನಾ: ಕೊರೊನಾ ವೈರಸ್ ಪರಿಣಾಮ ಚೀನಾದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸ್ಥಳೀಯ ಮಾಧ್ಯಮ ಮನಕಲಕುವ ವಿಡಿಯೋ ಒಂದನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದೆ. ಈ ವಿಡಿಯೋದಲ್ಲಿ ಕೊರೋನಾ ವೈರಸ್ ನ ದಾರುಣತೆಯ ಸ್ಪಷ್ಟ ಅರಿವಾಗುತ್ತದೆ.
ವಿಡಿಯೋದಲ್ಲಿ ಕೊರೋನಾ ವೈರಸ್ ಪೀಡಿತರ ಶುಶ್ರೂಷೆ ಮಾಡುತ್ತಿದ್ದ ನರ್ಸ್ ಒಬ್ಬರು ತಮ್ಮ ಮಗಳಿಗೆ ದೂರದಲ್ಲೇ ನಿಂತು ಅಪ್ಪುಗೆ ಮಾಡುವ ದೃಶ್ಯ ಮನಕಲಕುವಂತಿದೆ.

ಚೀನಾದ ವುಹಾನ್ ನಲ್ಲಿ ಕೊರೋನಾ ವೈರಸ್ ತನ್ನ ಮರಣ ಮೃದಂಗವನ್ನು ಮುಂದುವರಿಸಿದ್ದು, ಬಲಿಯಾದವರ ಸಂಖ್ಯೆ 800ರ ಗಡಿ ದಾಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಒಬ್ಬರನ್ನು ಮತ್ತೊಬ್ಬರು ಸ್ಪರ್ಷಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.

ವಿಡಿಯೋದಲ್ಲಿ ತಾಯಿಗೆ ಮಗಳೊಬ್ಬಳು ಆಹಾರ ಪೊಟ್ಟಣವನ್ನು ತಂದಿದ್ದು, ಆದರೆ ಸಮೀಪ ತೆರಳಲಾಗದೆ ದೂರದಲ್ಲೆ ನಿಂತು ಗಾಳಿಯಲ್ಲಿ ಅಪ್ಪುಗೆ ನೀಡಿದ್ದಾರೆ. ಪರಿಸ್ಥಿತಿ ನೆನೆದು ಇಬ್ಬರೂ ಕಣ್ಣಿರು ಹಾಕಿದ್ದು, ತಾಯಿ ರಾಕ್ಷಸರೊಂದಿಗೆ ಹೋರಾಡುತ್ತಿದ್ದಾಳೆ. ಆದಷ್ಟು ಬೇಗ ಮನೆಗೆ ಮರಳುತ್ತೇನೆ ಎಂದು ಮಗಳಿಗೆ ಸಂದೇಶ ನೀಡಿದ್ದಾಳೆ.

ನಂತರದಲ್ಲಿ ಮಗಳು ಆಹಾರ ಪೊಟ್ಟಣವನ್ನು (ಟಿಫಿನ್ ಬಾಕ್ಸ್) ನೆಲದ ಮೇಲಿಟ್ಟು ದೂರಕ್ಕೆ ತೆರಳಿದ ನಂತರವಷ್ಟೆ ತಾಯಿ ಬಂದು ಅದನ್ನು ಕೈಗೆತ್ತಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ನೆಟ್ಟಿಗರ ಕಣ್ಣಲ್ಲಿ ಕಣ್ಣೀರಧಾರೆ ತರಿಸಿದೆ.

Comments are closed.