ಮನೋರಂಜನೆ

ಗಾಯಕ ಯೇಸುದಾಸ್ ಸಹೋದರನ ಶವ ಕೆರೆಯಲ್ಲಿ ಪತ್ತೆ!

Pinterest LinkedIn Tumblr


ಕೊಚ್ಚಿ: ಭಾರತದ ಖ್ಯಾತ ಗಾಯಕ ಯೇಸುದಾಸ್ ಅವರ ಸಹೋದರನ ಶವ ಕೆರೆಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳನ್ನು ಮೂಡಿಸಿದೆ.

ಕೇರಳದ ಕೊಚ್ಚಿಯ ಕರೆಯಲ್ಲಿ ಕೆಜೆ ಜಸ್ಟಿನ್ ಅವರ ಮುಳುಗಿ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿಯಿಂದ ಜಸ್ಟಿನ್ ಮನಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.

ಇನ್ನು ಅದೇ ದಿನ ಕೆರೆಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಜಸ್ಟಿನ್ ಅವರ ಕುಟುಂದವರನ್ನು ಆಸ್ಪತ್ರೆಗೆ ಕರೆದೊಯ್ದು ಶವ ತೋರಿಸಿದರು. ಈ ವೇಳೆ ಜಸ್ಟಿನ್ ಅವರ ಪತ್ನಿ ಮೃತದೇಹ ಅವರದ್ದೆ ಅಂತ ಗುರುತಿಸಿದರು.

ಜಸ್ಟಿನ್ ಆತ್ಮಹತ್ಯೆ ಮಾಡಿಕೊಂಡರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇನ್ನು ಕುಟುಂಬದ ಮೂಲಗಳ ಪ್ರಕಾರ ಜಸ್ಟಿನ್ ಅವರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು ಗಂಡ ಹೆಂಡತಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಹೇಳಿದ್ದಾರೆ.

Comments are closed.