ರಾಷ್ಟ್ರೀಯ

ಯಾರೋ ಪ್ರಧಾನಿಯಾಗುವ ಆಸೆಯಿಂದ ನಮ್ಮ ದೇಶ ಇಬ್ಭಾಗವಾಯಿತು: ಮೋದಿ

Pinterest LinkedIn Tumblr


ನವದೆಹಲಿ: ಎನ್ ಡಿಎ ಸರ್ಕಾರ ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಮುಸ್ಲಿಮ್ ಧರ್ಮದವರ ಮೇಲೆ ತಾರತಮ್ಯವೆಸಗುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರಧಾನಿ ಮೋದಿ ಲೋಕಸಭೆಯಲ್ಲಿ ಗುರುವಾರ ತಿರುಗೇಟು ನೀಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಮಾತನಾಡುವ ಸಂದರ್ಭದಲ್ಲಿ ಮೋದಿ, ಜವಹರಲಾಲ್ ನೆಹರೂ, ಭಾರತ ವಿಭಜನೆ, ತುರ್ತು ಪರಿಸ್ಥಿತಿ ಮತ್ತು 1984ರ ಸಿಖ್ ವಿರೋಧಿ ದಂಗೆ ಬಗ್ಗೆ ಪ್ರಸ್ತಾಪಿಸಿದರು.

ಯಾರೋ ಒಬ್ಬರು ಪ್ರಧಾನಿಯಾಗಬೇಕೆಂದು ಆಸೆಯಿಂದ ಭಾರತವನ್ನು ವಿಭಜಿಸಿ ಎರಡು ದೇಶಗಳನ್ನಾಗಿ ಹೋಳು ಮಾಡಿದರು. ದೇಶ ಇಬ್ಭಾಗವಾದ ನಂತರ ಪಾಕಿಸ್ತಾನದಲ್ಲಿ ಹಿಂದೂ, ಸಿಖ್ಖರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರನ್ನು ಯಾವ ರೀತಿ ನೋಡಲಾಯಿತು, ಎಷ್ಟು ಕಿರುಕುಳ ನೀಡಲಾಯಿತು ಎಂದು ಊಹಿಸಲೂ ಅಸಾಧ್ಯ ಎಂದರು.

1950ರಲ್ಲಿ ನೆಹರೂ-ಲಿಲಿಯಾಕತ್ ಅಲಿ ಒಪ್ಪಂದ ವೇಳೆ ಪಾಕಿಸ್ತಾನದಲ್ಲಿ ಧರ್ಮ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವುದಿಲ್ಲ ಎಂದು ಒಪ್ಪಂದವಾಗಿತ್ತು. ನೆಹರೂರಂತಹ ಜಾತ್ಯತೀತವಾದಿಗಳು ದೂರದೃಷ್ಟಿ ಹೊಂದಿದ್ದವರು ಆಗ ಏಕೆ ಎಲ್ಲಾ ನಾಗರಿಕರನ್ನು ಒಪ್ಪಂದದಲ್ಲಿ ಪರಿಗಣಿಸಿರಲಿಲ್ಲ? ಇದಕ್ಕೆ ಆಗ ಏನಾದರೊಂದು ಕಾರಣ ಇದ್ದಿರಬಹುದಲ್ಲವೇ ಎಂದು ಕೇಳಿದರು.

Comments are closed.