ಅಂತರಾಷ್ಟ್ರೀಯ

ಜಾಗತಿಕವಾಗಿ ಹರಡುತ್ತಿರುವ ಕೊರೊನಾ ವೈರಸ್..!

Pinterest LinkedIn Tumblr


ಕೆನಡಾ ದೇಶದಲ್ಲಿ 5 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಅಮೆರಿಕದಲ್ಲಿ 15 ಮಂದಿಗೆ ಕೊರೊನಾ ತಲುಗಿದೆ. ಬೆಲ್ಜಿಯಂನಲ್ಲಿ 1 ಪ್ರಕರಣ, ಬ್ರಿಟನ್‌ನಲ್ಲಿ 2 ಪ್ರಕರಣ, ಫಿನ್ಲೆಂಡ್‌ನಲ್ಲಿ 1 ಪ್ರಕರಣ, ಫ್ರಾನ್ಸ್‌ನಲ್ಲಿ 6 ಪ್ರಕರಣ, ಸ್ಪೇನ್‌ನಲ್ಲಿ 1 ಪ್ರಕರಣ ಹಾಗೂ ಯುಎಇನಲ್ಲಿ 5 ಪ್ರಕರಣ ಪತ್ತೆಯಾಗಿದೆ. ಸೋಂಕಿತರನ್ನ ವಿಶೇಷ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಆಸ್ಪತ್ರೆಯಿಂದ ಹೊರಗೆ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಥಾಯ್ಲೆಂಡ್‌ನಲ್ಲಿ 25 ಪ್ರಕರಣಗಳು ಪತ್ತೆಯಾಗಿದ್ದರೆ, ಸಿಂಗಾಪುರದಲ್ಲಿ 28 ಪ್ರಕರಣಗಳು ವರದಿಯಾಗಿವೆ. ಜರ್ಮನಿಯಲ್ಲಿ 12 ಪ್ರಕರಣ, ನೇಪಾಳದಲ್ಲಿ 1 ಪ್ರಕರಣ ಹಾಗೂ ಭಾರತದಲ್ಲಿ ಈವರೆಗೆ 3 ಪ್ರಕರಣ ವರದಿಯಾಗಿಬವೆ. ಶ್ರೀಲಂಕಾದಲ್ಲಿ 1, ಮಲೇಷ್ಯಾದಲ್ಲಿ 14 ಕಾಂಬೋಡಿಯಾದಲ್ಲಿ 1 ಹಾಗೂ ವಿಯೆಟ್ನಾನಲ್ಲಿ 10 ಪ್ರಕರಣಗಳು ವರದಿಯಾಗಿವೆ.

ಇತ್ತ ಆಸ್ಪ್ರೇಲಿಯಾದಲ್ಲಿ 14 ಪ್ರಕರಣ, ಫಿಲಿಪ್ಪೀನ್ಸ್‌ನಲ್ಲಿ 3 ಪ್ರಕರಣ (1 ಸಾವು) ಮಕಾವೊದಲ್ಲಿ 10 ಪ್ರಕರಣ, ಹಾಂಗ್‌ಕಾಂಗ್‌ನಲ್ಲಿ 21 ಪ್ರಕರಣ (1 ಸಾವು) ತೈವಾನ್‌ನಲ್ಲಿ 11 ಪ್ರಕರಣ ಪತ್ತೆಯಾಗಿದ್ದರೆ, ಜಪಾನ್‌ ದೇಶದಲ್ಲಿ ಅತಿ ಹೆಚ್ಚು 45 ಪ್ರಕರಣಗಳು ಪತ್ತೆಯಾಗಿವೆ. ರಷ್ಯಾದಲ್ಲಿ 2, ದಕ್ಷಿಣ ಕೊರಿಯಾದಲ್ಲಿ 23 ಪ್ರಕರಣಗಳು ಪತ್ತೆಯಾಗಿವೆ.

ಜಾಗತಿಕವಾಗಿ ಈವರೆಗೆ ಒಟ್ಟು 28,346 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 565 ಮಂದಿ ಸಾವನ್ನಪ್ಪಿದ್ದಾರೆ. ಚೀನಾದ ಸ್ಥಿತಿಗತಿ ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ. ಸರಕಾರ ನೀಡಿರುವ ಮಾಹಿತಿಯಂತೆಯೇ ಈವರೆಗೆ 28,079 ಪ್ರಕರಣ ಪತ್ತೆಯಾಗಿದ್ರೆ, 563 ಮಂದಿ ಸಾವನ್ನಪ್ಪಿದ್ದಾರೆ.

Comments are closed.