ರಾಷ್ಟ್ರೀಯ

ಕೇಂದ್ರ ಬಜೆಟ್​ ಕುರಿತು ರಾಹುಲ್​ ಗಾಂಧಿ ಹೇಳಿದ್ದು ಹೀಗೆ…

Pinterest LinkedIn Tumblr


ನವದೆಹಲಿ: ಶನಿವಾರ ಮಂಡನೆಯಾದ ಕೇಂದ್ರ ಬಜೆಟ್​ ಕುರಿತು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಅಸಮಾಧಾನ ಹೊರಹಾಕಿದ್ದಾರೆ.

ಬಜೆಟ್​ ಮಂಡನೆ ಮುಗಿದು ಸದನವನ್ನು ಮುಂದೂಡಿದ ಬೆನ್ನಲ್ಲೇ ಸಂಸತ್​ ಹೊರಭಾಗದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ರಾಹುಲ್​, ಬಹುಶಃ ಬಜೆಟ್​ ಮಂಡನೆ ಇತಿಹಾಸದಲ್ಲೇ ಇದು ಸುದೀರ್ಘ ಸಮಯದ ಬಜೆಟ್​ ಮಂಡನೆಯಾಗಿರಬೇಕು. ಆದರೆ, ಬಜೆಟ್​ನಲ್ಲಿ ಏನೇನೂ ಇರಲಿಲ್ಲ. ಇದೊಂದು ಟೊಳ್ಳು ಬಜೆಟ್​ ಆಗಿತ್ತು ಎಂದಿದ್ದಾರೆ.

ಮುಂದುವರಿದು ಮಾತನಾಡಿ, ನಿರುದ್ಯೋಗವೇ ಪ್ರಮುಖ ಸಮಸ್ಯೆಯಾಗಿದೆ. ನಮ್ಮ ಯುವಕರು ಉದ್ಯೋಗ ಪಡೆಯಲು ನೆರವಾಗುವ ಯಾವುದೇ ಕಾರ್ಯತಂತ್ರ ಯೋಜನೆಯನ್ನು ಬಜೆಟ್​ನಲ್ಲಿ ನೋಡಲಿಲ್ಲ. ಸರ್ಕಾರ ಬಜೆಟ್​ ಅನ್ನು ಚೆನ್ನಾಗಿ ವಿವರಿಸಿದೆ. ಹಿಂದಿನ ಬಜೆಟ್​ ಅಂಶವನ್ನೇ ಮತ್ತೆ ಹೇಳಲಾಗಿದೆ. ಇದು ಸರ್ಕಾರದ ಮನಸ್ಥಿತಿಯನ್ನು ತೋರಿಸುತ್ತದೆ. ಎಲ್ಲವೂ ಕೂಡ ಕೇವಲ ಮಾತಾಗಿದ್ದು, ಯಾವುದು ಕೂಡ ನಡೆಯುವುದಿಲ್ಲ ಎಂದು ಟೀಕಿಸಿದ್ದಾರೆ.

Comments are closed.