
ಜಮ್ಮು: ಸಂವಿಧಾನದ 370ನೇ ವಿಧಿ ರದ್ದತಿ ಹಿನ್ನೆಲೆಯಲ್ಲಿಮುನ್ನೆಚ್ಚರಿಕೆ ಕ್ರಮವಾಗಿ 2019ರ ಆಗಸ್ಟ್‌ನಲ್ಲಿಕಡಿತಗೊಳಿಸಲಾಗಿದ್ದ ಪ್ರಿಪೇಯ್ಡ್ ಮೊಬೈಲ್ ಸೇವೆಗಳನ್ನು ಕಣಿವೆಯಲ್ಲಿಶನಿವಾರದಿಂದ ಪುನಾರಂಭಿಸಲಾಗಿದೆ.
ಉಳಿದಂತೆ 2ಜಿ ಅಂತರ್ಜಾಲ ಸೇವೆಗಳನ್ನು ಕೂಡ ಜಮ್ಮುವಿನ 10 ಜಿಲ್ಲೆಗಳು ಮತ್ತು ಉತ್ತರ ಕಾಶ್ಮೀರ ಕುಪ್ವಾರ ಹಾಗೂ ಬಂಡಿಪೊರ ಜಿಲ್ಲೆಗಳಲ್ಲಿಆರಂಭಿಸಲಾಗಿದೆ. ಇದರೊಂದಿಗೆ ಎಸ್‌ಎಂಎಸ್ ಹಾಗೂ ವಾಯ್ಸ್ ಸಂದೇಶದ ಸೇವೆಗಳನ್ನು ಕೂಡ ಕೇಂದ್ರಾಡಳಿತ ಪ್ರದೇಶದಾದ್ಯಂತ ಆರಂಭಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಹೇಳಿದ್ದಾರೆ.
ಕಣಿವೆಯ 80 ಸರಕಾರಿ ಆಸ್ಪತ್ರೆಗಳಲ್ಲಿಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸೇವೆಯನ್ನು ಜ.2ರಂದು ಮರುಕಲ್ಪಿಸಲಾಗಿತ್ತು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಕಳೆದ ಆಗಸ್ಟ್ 5ರಂದು ರದ್ದಗೊಳಿಸಲಾಗಿತ್ತು. ನಂತರ ಕಣಿವೆ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು, ವದಂತಿಗಳನ್ನು ಹಬ್ಬುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಇಂಟರ್‌ನೆಟ್ ಮತ್ತು ಎಲ್ಲ ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.
Comments are closed.