
ರಾಮನಗರ: ‘ಏಸು ಪ್ರತಿಮೆ ಮಾಡಲು ಬಿಡಲ್ಲ, ಬಲಿದಾನವಾಗುತ್ತೆ’ ಎಂಬ ಆರ್‌ಎಸ್‌ಎಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ವಿರುದ್ಧ ಹರಿಹಾಯ್ದಿರುವ ಸಂಸದ ಡಿಕೆ ಸುರೇಶ್, “ಅವನಿಗೆ ತಾಕತ್ ಇದ್ರೆ ಬರೋಕೆ ಹೇಳ್ರಿ. ಬಲಿದಾನ ಅಂದ್ರೆ ನನ್ನ ಬಲಿದಾನ ಮಾಡ್ತಾನಂತಾ? ಎಲ್ಲಿಗೆ ಬರಬೇಕು ಅಂತಾ ಕೇಳ್ರಿ? ನನ್ನ ಬಲಿದಾನ ಏನು ಮಾಡ್ತಾನೆ, ನಿನ್ನ ಬಲಿದಾನ ಇದ್ರೆ ಮಾಡ್ತೀನಿ ಅಂತ ಹೇಳು,” ಎಂದು ಗುಡುಗಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಹರಿಹಾಯ್ದರು.
ಕನಕಪುರ ಚಲೋದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಭಾಷಣಕ್ಕೆ ಪ್ರತಿಕ್ರಿಯಿಸಿದ ಅವರು, “ಅವರು ಬಂದ್ರು, ಭಾಷಣ ಮಾಡಿ ಹೋದ್ರು. ಅವರದ್ದು ಒಂದು ರಾಜಕೀಯ ಪಕ್ಷ. ಆ ಪಕ್ಷದ ಹಿನ್ನಲೆ ಗಾಯಕರು ಯಾರೋ ಏನೋ ಹೇಳಿದ್ದನ್ನು ಬಂದು ಬೈದು ಹೋಗಿದ್ದಾರೆ. ಏನು ಮಾಡೋಕೆ ಆಗಲ್ಲ. ಕಾದು ನೋಡೋಣ ಎಲ್ಲೆಲ್ಲಿ ಏನೇನು ಆಗುತ್ತೆ ಅಂತ,” ಎಂದರು.
“ದೇಶದಲ್ಲಿ ಎಲ್ಲರಿಗೂ ಬದುಕುವ ಹಕ್ಕನ್ನು ಸಂವಿಧಾನದಲ್ಲಿ ನೀಡಲಾಗಿದೆ. ಎಲ್ಲರೂ ಬದುಕಬೇಕು, ಬಾಳಬೇಕು. ಒಬ್ಬರು ಮಾತ್ರ ಬದುಕಬೇಕು, ಇನ್ನೊಬ್ಬರು ಬದುಕಬಾರದು ಅಂತ ಇಲ್ಲ. ಸಂವಿಧಾನವನ್ನು ಉಳಿಸುವ ಕೆಲಸ ಖಂಡಿತಾ ಆಗುತ್ತದೆ,” ಎಂದು ವಿವರಿಸಿದರು.
Comments are closed.