ರಾಷ್ಟ್ರೀಯ

ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ವಿಪಕ್ಷಗಳು ಪಾಕಿಸ್ತಾನ ಬಳಸುವಂತಹ ಭಾಷೆಗಳನ್ನು ಬಳಸುತ್ತಿವೆ: ಪ್ರಧಾನಿ ನರೇಂದ್ರ ಮೋದಿ

Pinterest LinkedIn Tumblr

ನವದೆಹಲಿ: ವಿವಾದಕ್ಕೆ ಒಳಗಾಗುತ್ತಿರುವ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಖಂಡಿಸುತ್ತಿರುವ ಕೆಲವು ಪಕ್ಷಗಳು ಪಾಕಿಸ್ತಾನ ಬಳಸುವಂತಹ ಫುಲ್​ಸ್ಟಾಪ್​, ಕಾಮಾದಂತಹ ಭಾಷೆ ಬಳಕೆ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಬಿಜೆಪಿಯ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ಈ ಮಸೂದೆ ಚಾರಿತ್ರಿಕ ಮಹತ್ವದ್ದಯ. ಬಂಗಾರದ ಪತ್ರದಲ್ಲಿ ಪೌರತ್ವ ಮಸೂದೆಯನ್ನು ಬರೆಯಲಾಗುತ್ತದೆ. ಧಾರ್ಮಿಕ ಕಿರುಕುಳದ ವಿರುದ್ಧ ಈ ಮಸೂದೆ ಶಾಶ್ವತ ಪರಿಹಾರ ಕಲ್ಪಿಸುತ್ತದೆ ಎಂದು ಬಣ್ಣಿಸಿದರು.

ಪಾಕಿಸ್ತಾನ ಬಳಸುವಂತಹ ಭಾಷೆಗಳನ್ನು ಕೆಲವು ಪಕ್ಷಗಳು ಈ ಮಸೂದೆ ವಿಚಾರದಲ್ಲಿ ಬಳಕೆ ಮಾಡುತ್ತಿವೆ. ನಮ್ಮ ಪಕ್ಷದ ಸಂಸದರು ಈ ಮಸೂದೆಯ ಪರಿಹಾರದ ಬಗ್ಗೆ ಜನರಿಗೆ ವಿವರಿಸಬೇಕು ಎಂದು ಮನವಿ ಮಾಡಿದರು.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದಿಂದ ಬರುವ ಮುಸ್ಲಿಂಮೇತರ ನಿರಾಶ್ರಿತರು ಎದುರಿಸುವ ಧಾರ್ಮಿಕ ಕಿರುಕುಳವನ್ನು ಎದುರಿಸಲು ಭಾರತದ ಪೌರತ್ವ ನೀಡಲು ಈ ಮಸೂದೆ ಯತ್ನಿಸುತ್ತಿದೆ.

ಸೋಮವಾರ ಲೋಕಸಭೆಯಲ್ಲಿ ಪಾಸ್​ ಆಗಿರುವ ಈ ಮಸೂದೆ ವಿರುದ್ಧ ಈಶಾನ್ಯ ರಾಜ್ಯಗಳು ಹಾಗೂ ವಿಪಕ್ಷಗಳು ಪ್ರತಿಭಟನೆ ನಡೆಸಿವೆ. ಇಂದು ಈ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗುತ್ತಿದೆ. ರಾಜ್ಯಸಭೆಯಲ್ಲಿ ಬಹುಮತ ಕೊರತೆ ಎದುರಿಸುತ್ತಿರುವ ಸರ್ಕಾರ ಇಲ್ಲಿ ಕೂಡ ಈ ಮಸೂದೆ ಪಾಸ್​ ಆಗುವ ಭರವಸೆಯಲ್ಲಿದೆ.

ಇನ್ನು ಮಸೂದೆ ಕುರಿತು ಟ್ವೀಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಕಿರುಕುಳ ಅನುಭವಿಸುತ್ತಿರುವ ನಿರಾಶ್ರಿತರು ಈ ಮಸೂದೆಯಿಂದ ಶಾಶ್ವತ ಪರಿಹಾರ ಕಂಡುಕೊಳ್ಳುತ್ತದೆ ಎಂದಿದ್ದಾರೆ.

Comments are closed.