ರಾಷ್ಟ್ರೀಯ

2002ರ ಗೋಧ್ರಾ ದಂಗೆ ಪ್ರಕರಣದಲ್ಲಿ ಗುಜರಾತ್​ನ ನರೇಂದ್ರ ಮೋದಿ ಸರ್ಕಾರಕ್ಕೆ ಕ್ಲೀನ್​ಚಿಟ್​ ನೀಡಿದ ನಾನಾವತಿ ಆಯೋಗ

Pinterest LinkedIn Tumblr

ಗಾಂಧಿನಗರ: 2002ರ ಗೋಧ್ರಾ ದಂಗೆ ಪ್ರಕರಣ ಸಂಬಂಧ ಗುಜರಾತ್​ನ ನರೇಂದ್ರ ಮೋದಿ ಸರ್ಕಾರಕ್ಕೆ ನಾನಾವತಿ ಆಯೋಗ ಕ್ಲೀನ್​ಚಿಟ್​ ನೀಡಿದೆ.

ದಂಗೆ ಕುರಿತು ನಾನಾವತಿ ಮೆಹ್ತಾ ಆಯೋಗ ಸಿದ್ದಪಡಿಸಿರುವ ವರದಿಯನ್ನು ರಾಜ್ಯ ಗೃಹ ಸಚಿವ ಪ್ರದೀಪ್​​ಸಿನ್ಹಾ ಜಡೇಜಾ ಬುಧವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

ದಂಗೆಯಲ್ಲಿ ಸರ್ಕಾರದ ಪಾತ್ರವಿಲ್ಲ. ದಂಗೆ ಕುರಿತು ಸಂಜೀವ್ ಭಟ್​ ಸುಳ್ಳು ಹೇಳಿದ್ದಾರೆ. ಇದು ಪೂರ್ವನಿಯೋಜಿತ ಗಲಭೆಯಲ್ಲ. ಈ ದಂಗೆ ನಿಯಂತ್ರಣಕ್ಕೆ ಮೋದಿ ಯತ್ನಿಸಿದ್ದರು ಎಂದು ಅಂದಿನ ಮೋದಿ ಸರ್ಕಾರಕ್ಕೆ ಕ್ಲೀನ್​ಚಿಟ್​ ನೀಡಲಾಗಿದೆ.

ಆಯೋಗದ ಮೊದಲ ವರದಿಯನ್ನು 2008ರಲ್ಲಿ ಮೊದಲ ಬಾರಿಗೆ ಮಂಡಿಸಲಾಗಿತ್ತು. ಮೊದಲ ವರದಿಯಲ್ಲಿ ರೈಲಿಗೆ ಬೆಂಕಿ ಹೊತ್ತಿಕೊಂಡಿದ್ದರ ಬಗ್ಗೆ ತಿಳಿಸಲಾಗಿತ್ತು, ಯೋಚಿತ ಪಿತೂರಿಯಿಂದಾಗಿ ಗೋಧ್ರಾ ರೈಲ್ವೆ ಸಮೀಪದಲ್ಲಿ ಸಬರಮತಿ ಎಕ್ಸ್​ಪ್ರೆಸ್​ ರೈಲಿನ 5-6 ಬೋಗಿಗಳಿಗೆ ಬೆಂಕಿ ಇಡಲಾಗಿತ್ತು ಎಂದು ಈ ವರದಿಯಲ್ಲಿ ತಿಳಿಸಲಾಗಿತ್ತು.

ಇದಾದ ಬಳಿಕ ಅಂತಿಮ ವರದಿಯನ್ನು 2014ರಲ್ಲಿ ಆನಂದಿ ಬೇನ್​ ನೇತೃತ್ವದ ಸರ್ಕಾರದ ಎದುರು ಮಂಡಿಸಲಾಗಿತ್ತು. ಅಧಿಕೃತ ಮಾಹಿತಿ ಪ್ರಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸುಮಾರು 1000ಕ್ಕೂ ಹೆಚ್ಚು ಜನರು ಈ ಗಲಭೆಯಲ್ಲಿ ಸಾವನ್ನಪ್ಪಿದ್ದರು. ಆದರೆ, ಅನಧಿಕೃತವಾಗಿ ಈ ಸಾವಿನ ಸಂಖ್ಯೆ ಇನ್ನು ಹೆಚ್ಚಿದೆ ಎನ್ನಲಾಗಿದೆ.

ಈ ಘಟನೆ ಕುರಿತು ತನಿಖೆಗೆ 2002ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಯೋಗವನ್ನು ರಚಿಸಿತ್ತು.

Comments are closed.