ರಾಷ್ಟ್ರೀಯ

 2 ವರ್ಷಗಳಿಂದ ನೌಕರರು ಹೆಲ್ಮೆಟ್‌ ಹಾಕಿಕೊಂಡು ಕೆಲಸ ಮಾಡುತ್ತಿರುವ ವೀಡಿಯೋ ವೈರಲ್‌, ಕಾರಣವೇನು ಗೋತ್ತೆ?

Pinterest LinkedIn Tumblr

ನವದೆಹಲಿ: ಉತ್ತರ ಪ್ರದೇಶದ ಬಾಂಡಾದಲ್ಲಿನ ವಿದ್ಯುತ್ ವಿಭಾಗದ ನೌಕರರು ತಮ್ಮ ಕಚೇರಿ ಕಟ್ಟಡದಲ್ಲಿ ಹೆಲ್ಮೆಟ್‌ ಹಾಕಿಕೊಂಡು ಕುಳಿತುಕೊಂಡು ಮಾಡುತ್ತಿರುವ ಕೆಲಸ ಈ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹೆಲ್ಮೆಟ್‌ಗಳು ಸುರಕ್ಷತಾ ಉದ್ದೇಶಗಳಿಗಾಗಿ ಅದರಲ್ಲೂ ವಾಹನ ಚಾಲನೆ ಮಾಡುವ ವೇಳೆಯಲ್ಲಿ ಬಳಕೆ ಮಾಡುವುದು ಹೆಚ್ಚು, ಆದರೆ ಇಲ್ಲಿ ತಮ್ಮ ಕಚೇರಿ ಕಟ್ಟಡದಲ್ಲಿ ಸುರಕ್ಷಿತವಾಗಿಲ್ಲ ಎನ್ನುವ ಕಾರಣಕ್ಕಾಗಿ ನೌಕರರು ಹೀಗೆ ಹೆಲ್ಮೆಟ್‌ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ನಾನು 2 ವರ್ಷಗಳ ಹಿಂದೆ ಸೇರಿದಾಗಿನಿಂದಲೂ ಇದೇ ಸ್ಥಿತಿಯಾಗಿದೆ. ನಾವು ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಆದರೆ ಯಾವುದೇ ಪ್ರತಿಕ್ರಿಯೆ ಇಲ್ಲ ಹೀಗಾಗಿ ಯಾವುದೇ ಅಹಿತಕರ ಘಟನೆಗಳಿಂದ ರಕ್ಷಿಸಿಕೊಳ್ಳಲು ಹೆಲ್ಮೆಟ್ ಧರಿಸುತ್ತೇವೆ ಅಂತ ಉದ್ಯೋಗಿಯೊಬ್ಬರು ಹೇಳುತ್ತಾರೆ.

ಕಚೇರಿಯ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಇದನ್ನು ದುರಸ್ತಿಗೊಳಿಸುವ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನಲಾಗಿದೆ. ಹೆಲ್ಮೆಟ್ ಧರಿಸುವುದು ಮತ್ತು ಅವರ ಸುರಕ್ಷತೆಗಾಗಿ ಕಟ್ಟಡದಲ್ಲಿ ಕುಳಿತುಕೊಳ್ಳುವುದು ಈ ಸರ್ಕಾರಿ ನೌಕರರು ಹೊಂದಿದ್ದ ಕೊನೆಯ ಉಪಾಯವಾಗಿದೆ ಎನ್ನಲಾಗಿದೆ.

Comments are closed.