ರಾಷ್ಟ್ರೀಯ

ಅರಣ್ಯದಲ್ಲಿ ಒಸಾಮಾ ಬಿನ್ ಲಾಡೆನ್‌ಗಾಗಿ ಹುಡುಕಾಟ…!

Pinterest LinkedIn Tumblr


ಒಸಾಮಾ ಬಿನ್ ಲಾಡೆನ್ ಬಂದಿದ್ದಾನಂತೆ… ಐದು ಜನರನ್ನು ಕೊಂದು ಹಾಕಿದ್ದಾನಂತೆ…! ಹೀಗಾಗಿ, ಈತನಿಗಾಗಿ ಕಾಡಿನಲ್ಲಿ ಹುಡುಕಾಟ ಶುರುವಾಗಿದೆಯಂತೆ…! ಅದೂ ಅಸ್ಸಾಂನಲ್ಲಿ…! ಅರೇ ಏನ್ ಹೇಳ್ತಿದ್ದಾರಾ…? ಒಸಾಮಾನನ್ನು ಅಮೇರಿಕಾ ಸೈನ್ಯ ಹೊಡೆದುರುಳಿಸಿದೆಯಲ್ವಾ…? ಆತನ ಶವ ಕೂಡಾ ಸಿಗದಂತೆ ಮಾಡಿದ್ದಾರೆ.. ಮತ್ತೆ ಅಸ್ಸಾಂನಲ್ಲಿ ಒಸಾಮಾ ಕಾಣಿಸಿಕೊಂಡಿದ್ದು ಹೇಗೆ ಅಂತೀರಾ…? ನಿಜ, ಇಂತಹ ಪ್ರಶ್ನೆಗಳು ಸಹಜವೇ ಬಿಡಿ. ಆದರೆ, ಇಲ್ಲೊಂದು ಸಣ್ಣ ಸಂಗತಿ ಇದೆ. ಅದೇನೆಂದರೆ, ಅಸ್ಸಾಂನಲ್ಲಿ ಹುಡುಕುತ್ತಿರುವುದು ಉಗ್ರ ಒಸಾಮಾನಿಗಾಗಿ ಅಲ್ಲ. ಬದಲಾಗಿ ಒಂದು ಆನೆಗಾಗಿ…!

ಕಾಡಾನೆಗೆ ಉಗ್ರನ ಹೆಸರಿಟ್ಟ ಜನ…!

ಒಸಾಮಾ ಬಿನ್ ಲಾಡೆನ್ ಎಂತಹ ರಕ್ಕಸ ಎಂದು ಎಲ್ಲರಿಗೂ ಗೊತ್ತಿದೆ. ಅಮೇರಿಕಾದ `ವರ್ಲ್ಡ್ ಟ್ರೇಡ್ ಸೆಂಟರ್‌’ರನ್ನು ವಿಮಾನದ ಮೂಲಕ ಹೊಡೆದುರುಳಿಸಿ ಈತನ ಮೆರೆದ ಕ್ರೌರ್ಯವನ್ನು ಇಂದಿಗೂ ಯಾರೂ ಮರೆತಿಲ್ಲ. ಇದಾದ ಬಳಿಕ ಅಮೇರಿಕಾ ಸೇನೆ ಒಸಾಮಾನನ್ನು ಹುಡುಕಿ ಹೊಸಕಿ ಹಾಕಿತ್ತು. ಹೀಗಾಗಿ, ಈತನ ಕ್ರೌರ್ಯವನ್ನು ಮರೆಯದ ಅಸ್ಸಾಂನ ಜನ ಇಲ್ಲಿ ದಾಂಧಲೆ ಎಬ್ಬಿಸುತ್ತಿರುವ ಆನೆಯೊಂದಕ್ಕೆ ಉಗ್ರನ ಹೆಸರನ್ನೇ ಇಟ್ಟಿದ್ದಾರೆ. ಅಸ್ಸಾಂನ ಗೋಲ್ಪಾರ ಜಿಲ್ಲೆ ಸುತ್ತಮುತ್ತ ಕಾಡಾನೆಯೊಂದು ಬಹಳ ದಿನಗಳಿಂದ ಭಾರೀ ಕಾಟ ಕೊಡುತ್ತಿದೆ. ಗ್ರಾಮಕ್ಕೆ ನುಗ್ಗಿದ್ದ ಈ ಆನೆ ಐವರನ್ನು ಕೊಂದಿದೆ. ಇದಾದ ಬಳಿಕ ಜನರೆಲ್ಲಾ ಸೇರಿ ಈ ಆನೆಗೆ ಒಸಾಮಾ ಎಂದು ಹೆಸರಿಟ್ಟಿದ್ದಾರೆ.

ಒಂಟಿ ಸಲಗಕ್ಕಾಗಿ `ಆಪರೇಷನ್’

ಯಾವಾಗ ಒಸಾಮಾನ ಕಾಟ ಹೆಚ್ಚಾಯಿತೋ ಜನ ಅರಣ್ಯಾಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ. ಜನರಿಂದ ಬಂದ ಸಾಲು ಸಾಲು ಮನವಿಯನ್ನು ಸ್ವೀಕರಿಸಿದ ಬಳಿಕ ಅರಣ್ಯಾಧಿಕಾರಿಗಳು ಕಾಡಿನಲ್ಲಿ ಆಪರೇಷನ್ ಶುರು ಮಾಡಿದ್ದಾನೆ. ಆನೆ ಸೆರೆಗೆ ಬೇಕಾದಂತಹ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡು ಅಧಿಕಾರಿಗಳು ಕಾಡಿಗಿಳಿದಿದ್ದಾರೆ. ಸದ್ಯ ಒಸಾಮಾನನ್ನು ಸೆರೆ ಹಿಡಿಯಲು ಸಾಕಾನೆ ಮತ್ತು ಡ್ರೋಣ್ ಕ್ಯಾಮೆರಾವನ್ನು ಬಳಸಲಾಗಿದೆ. ಕಾಡಿನಲ್ಲಿ ಒಂಟಿಯಾಗಿ ಓಡಾಡುವ ಒಸಾಮಾ ಕ್ಯಾಮೆರಾದಲ್ಲಿ ಕೂಡಾ ಸೆರೆಯಾಗಿದ್ದಾನೆ.

ಇತ್ತ, ಕಾಡುವ ಕಾಡಾನೆ ಯಾವಾಗ ಸೆರೆಯಾಗುತ್ತದೋ ಎಂದು ಜನ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. `ಬಹಳ ದಿನಗಳಿಂದಲೂ ಒಸಾಮಾ ಗ್ರಾಮಕ್ಕೆ ನುಗ್ಗುತ್ತಿದ್ದಾನೆ. ಭತ್ತ ಸೇರಿದಂತೆ ಎಲ್ಲಾ ಬೆಳೆಗಳನ್ನು ನಾಶ ಮಾಡುತ್ತಿದ್ದಾನೆ. ಐವರ ಜೀವವನ್ನೂ ತೆಗೆದಿದ್ದಾನೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

Comments are closed.