ರಾಷ್ಟ್ರೀಯ

ಭಾರತ 28 ರಾಜ್ಯ, 9 ಕೇಂದ್ರಾಡಳಿತ ಪ್ರದೇಶದ ಅಧಿಕೃತ ನಕ್ಷೆ ಪ್ರಕಟ

Pinterest LinkedIn Tumblr

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಸಂವಿಧಾನದ 370ನೇ ಪರಿಚ್ಛೇದ ರದ್ದುಗೊಳಿಸುವ ಮಹತ್ವ ನಿರ್ಧಾರ ಕೈಗೊಂಡ ಬಳಿಕ ಭಾರತ ಭೂಪಟ ಬದಲಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ, ರಾಜ್ಯ ಆಡಳಿತ ಅಧಿಕಾರ ರದ್ದಾಗಿದೆ. ಹೀಗಾಗಿ, ಭಾರತದಲ್ಲಿರುವ ಒಟ್ಟು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಹೊಸ ಲೆಕ್ಕಾಚಾರ ಬದಲಾಗಿದೆ. ಭಾರತದ ಅಧಿಕೃತ ನಕ್ಷೆಯನ್ನು ಭಾರತ ಸರ್ಕಾರ ಪ್ರಕಟಿಸಿದೆ.

ಒಂದು ರಾಷ್ಟ್ರ, ಒಂದು ಸಂವಿಧಾನ, ಒಂದು ರಾಷ್ಟ್ರಗೀತೆ ಹಾಗೂ ಒಂದು ರಾಷ್ಟ್ರಧ್ವಜ ಎಂಬ ಪರಿಕಲ್ಪನೆಗೆ ಅನುಗುಣವಾಗಿ ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕಿಸಿ, ಲಡಾಕ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ. ಲಡಾಖ್ ವಿಭಾಗಕ್ಕೆ ಕಾರ್ಗಿಲ್ ಹಾಗೂ ಲೆಹ್ ಜಿಲ್ಲೆ ಸೇರಲಿದೆ. ಮಿಕ್ಕ ಎಲ್ಲಾ ಭಾಗಗಳು ಅಂದರೆ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ), ಗಿಲ್ಗಿಟ್-ಬಾಲ್ಟಿಸ್ತಾನ ಎಲ್ಲವನ್ನು ಭಾರತದ ಗಡಿಯಲ್ಲಿ ಸೇರಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಒಕೆ ರಾಜಧಾನಿ ಮುಝಾಫರಬಾದ್ ಇದ್ದರೆ, ಲಡಾಖ್ ನೊಳಗೆ ಗಿಲ್ಬಿಟ್- ಬಾಲ್ಟಿಸ್ತಾನ ಸೇರಿದೆ.

ಭಾರತ ಸಂವಿಧಾನದ 370ನೇ ಪರಿಚ್ಛೇದ ಏನು? ಎತ್ತ?
ಕೇಂದ್ರಾಡಳಿತ ಪ್ರದೇಶ ಎಂಬುದು ಭಾರತ ಗಣರಾಜ್ಯದ ಅವಿಭಾಜ್ಯ ಅಂಗವಾಗಿದೆ. ಕೇಂದ್ರಾಡಳಿತ ಪ್ರದೇಶವು ಕೇಂದ್ರ ಸರ್ಕಾರದ ನೇರ ಆಡಳಿತಕ್ಕೆ ಒಳಪಡುತ್ತದೆ. ಭಾರತದ ಇತರೆ ರಾಜ್ಯಗಳು ಹೊಂದಿರುವಂತೆ ಇವುಗಳು ಪ್ರತ್ಯೇಕ ಸರ್ಕಾರಗಳನ್ನು ಹೊಂದಿರು ವುದಿಲ್ಲ. ಆದರೆ ಭಾರತದ ಸಂಸತ್ತು ಸಂವಿಧಾನ ತಿದ್ದುಪಡಿಯ ಮೂಲಕ ಕೇಂದ್ರಾಡಳಿತ ಪ್ರದೇಶಗಳಿಗೆ ಶಾಸನ ಸಭೆಯ ಸ್ಥಾನ ಕಲ್ಪಿಸಬಹುದು.

ಸಂವಿಧಾನದ 370ನೇ ಪರಿಚ್ಛೇದ ಜಾರಿ ಇದ್ದ ಕಾಶ್ಮೀರದಲ್ಲಿ ಪೌರತ್ವ, ನಿರ್ದಿಷ್ಟ ಆಸ್ತಿಯ ಮಾಲೀಕತ್ವ, ಮೂಲಭೂತ ಹಕ್ಕುಗಳ ಅನುಷ್ಠಾನ ಮುಂತಾದ ವಿಚಾರಗಳಲ್ಲಿ ವಿಶೇಷ ಕಾನೂನುಗಳು ಅನುಷ್ಠಾನಗೊಂಡಿತ್ತು. ಜಮ್ಮು ಮತ್ತು ಕಾಶ್ಮೀರ ಹೊಸ ಕೇಂದ್ರಾಡಳಿತ ಪ್ರದೇಶವಾಗಿದ್ದರೂ ವಿಧಾನಸಭೆ ಹೊಂದಲಿದೆ, ಲಡಾಖ್ ಹೊಸ ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಯಾವುದೇ ವಿಧಾನಸಭೆ ಹೊಂದಿರುವುದಿಲ್ಲ.

ಭಾರತದ ಹೊಸ ಭೂಪಟ ಪ್ರಕಟ, 28 ರಾಜ್ಯ, 9 ಕೇಂದ್ರಾಡಳಿತ ಪ್ರದೇಶ
ಇದರ ಜೊತೆಗೆ ಅರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗದಲ್ಲಿ ಶೇ10ರಷ್ಟು ಮೀಸಲಾತಿ ಒದಗಿಸುವ ವಿಧೇಯಕವನ್ನು ಅಮಿತ್ ಶಾ ಮಂಡಿಸಿ, ರಾಜ್ಯಸಭೆಯಲ್ಲಿ ಅನುಮೋದನೆ ಪಡೆದುಕೊಂಡರು. ಇದಕ್ಕೆ ಸರಳ ಬಹುಮತ ಸಾಕಾಗಿತ್ತು, ರಾಷ್ಟ್ರಪತಿ ಅಂಕಿತ ಬಿದ್ದಿರುವುದರಿಂದ ಹೊಸ ಸೌಲಭ್ಯವು ಅಕ್ಟೋಬರ್ 31, 2019ರಿಂದ ಜಾರಿಗೊಂಡಿದೆ.

ಭಾರತದ ಹೊಸ ಭೂಪಟ ಪ್ರಕಟ, 28 ರಾಜ್ಯ, 9 ಕೇಂದ್ರಾಡಳಿತ ಪ್ರದೇಶ
1947ರಲ್ಲಿ ಮ್ಯಾಪ್ ಹೇಗಿತ್ತು
1947ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 14 ಜಿಲ್ಲೆಗಳಿದ್ದವು, ಕಥುವಾ, ಜಮ್ಮು, ಉಧಂಪುರ್, ರೇಸಿ, ಅನಂತ್ ನಾಗ್, ಬಾರಾಮುಲ್ಲಾ, ಪೂಂಛ್, ಮೀರ್ ಪುರ್, ಮುಜಫರಾಬಾದ್, ಲೇಹ್, ಲಡಾಖ್, ಗಿಲ್ಗಿಟ್, ಗಿಲ್ಗಿಟ್ ವಜರತ್, ಚಿಲಾಸ್ ಹಾಗೂ ಬುಡಕಟ್ಟು ಪ್ರದೇಶ.

Comments are closed.