ಅಂತರಾಷ್ಟ್ರೀಯ

ಸಿಖ್ ಯಾತ್ರಾರ್ಥಿಗಳನ್ನು ಸ್ವಾಗತಿಸಲು ಕರ್ತರ್‌ಪುರ ಸಜ್ಜು

Pinterest LinkedIn Tumblr

ಇಸ್ಲಾಮಾಬಾದ್: ಕರ್ತರ್‌ಪುರ ಕಾಂಪ್ಲೆಕ್ಸ್ ಹಾಗೂ ಗುರುದ್ವಾರ ದರ್ಬಾರ್ ಸಾಹಿಬ್‌ಗಳ ಬೆರಗುಗೊಳಿಸುವ ಚಿತ್ರಗಳನ್ನು ರವಿವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್, ಗುರುನಾನಕ್ ದೇವ್ ಅವರ 550ನೇ ಜನ್ಮದಿನಾಚರಣೆ ವಾರ್ಷಿಕೋತ್ಸವ ಆಚರಣೆಗೆ ಆಗಮಿಸಲಿರುವ ಸಿಖ್ ಯಾತ್ರಾರ್ಥಿಗಳನ್ನು ಸ್ವಾಗತಿಸಲು ಕರ್ತರ್‌ಪುರ ಸಜ್ಜಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ನ.9ರಂದು ಕರ್ತರ್‌ಪುರ ಕಾರಿಡಾರ್ ಉದ್ಘಾಟಿಸುವ ಯೋಜನೆಯ ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಕೆಲವು ಚಿತ್ರಗಳನ್ನು ಖಾನ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ವರ್ಷ ಸಿಖ್ ಧರ್ಮದ ಸಂಸ್ಥಾಪಕ ಗುರು ನಾನಕ್ ಅವರ 550ನೇ ಜನ್ಮ ದಿನಾಚರಣೆ ನಡೆಯಲಿದ್ದು, ಗುರು ನಾನಕ್ ಅವರು ಪಾಕಿಸ್ತಾನದ ಶ್ರೀ ನಂಕಣ ಸಾಹಿಬ್‌ನಲ್ಲಿ ಜನಿಸಿದ್ದರು.

ಗುರುನಾನಕ್ 550ನೇ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಕರ್ತರ್‌ಪುರದ ಕಾಮಗಾರಿಯನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಿರುವುದಕ್ಕೆ ತನ್ನ ಸರಕಾರವನ್ನು ಇಮ್ರಾನ್ ಖಾನ್ ಅಭಿನಂದಿಸಿದರು.

Comments are closed.