ರಾಷ್ಟ್ರೀಯ

ಭಾರೀ ಮಳೆಗೆ ಸೇತುವೆ ಕುಸಿತ – 12 ಜನರು ಗಂಭೀರ, 4 ಕಾರು ಜಖಂ

Pinterest LinkedIn Tumblr

ನವದೆಹಲಿ: ಬೃಹತ್​ ಸೇತುವೆಯೊಂದು ಇದ್ದಕ್ಕಿದ್ದಂತೆ ಕುಸಿದು ನೀರಿನಲ್ಲಿ ಬಿದ್ದು, ಪ್ರಯಾಣಿಕರು ಹಾಗೂ 4 ಕಾರುಗಳು ಅವಶೇಷಗಳಡಿ ಸಿಲುಕಿಕೊಂಡಿರುವ ಘಟನೆ ಗುಜರಾತ್​ನ ಜುನಾಗಡ ಜಿಲ್ಲೆಯ ಮಲಂಕ ಗ್ರಾಮದ ಬಳಿ ನಡೆದಿದೆ.

ಘಟನೆಯಲ್ಲಿ 12ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನೆಲ್ಲ ಹೊರಗೆ ತೆಗೆಯಲಾಗಿದೆ. ಆದ್ರೆ, ಇನ್ನೂ ಹಲವು ಮಂದಿ ಸೇತುವೆಯ ಆವಶೇಷಗಳಡಿ ಸಿಲುಕಿದ್ದಾರೆ ಅಂತಾ ಸ್ಥಳೀಯರು ಹೇಳಿದ್ದಾರೆ. ಆದ್ದರಿಂದ ಸಿಲುಕಿಕೊಂಡ ಕಾರುಗಳನ್ನ ಮೇಲೆತ್ತುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬ್ರಿಡ್ಜ್​ ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಸುಮಾರು 500 ಮೀಟರ್​ವರೆಗೆ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದೆ.

ಜುನಗಾಡ ಜಿಲ್ಲೆಯಿಂದ ಮುಂದ್ರಾ ತಾಲೂಕಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಸೇತುವೆ ಕುಸಿದಿದೆ. ಇದರಿಂದ ಎರಡು ಕಡೆಯ ಸಂಪರ್ಕ ಕಡಿತಗೊಂಡಿದೆ.

ಕಳೆದ ಆಗಸ್ಟ್​ನಿಂದ ಇಲ್ಲಿವರೆಗೆ ಗುಜರಾತ್​ನಲ್ಲಿ ಗುಹೆ, ಸೇತುವೆ, ಬೆಟ್ಟ ಬಿದ್ದಿರುವ 17 ಘಟನೆಗಳು ನಡೆದಿವೆ ಅಂತಾ ತಿಳಿದು ಬಂದಿದೆ.

Comments are closed.