ರಾಷ್ಟ್ರೀಯ

ಭಾರತದ ರಕ್ಷಣಾ ವ್ಯವಸ್ಥೆಗೆ ಮತ್ತೊಂದು ಶಕ್ತಿ; ನೌಕಾಪಡೆಗೆ ಸೇರ್ಪಡೆಗೊಂಡ ಶಕ್ತಿಶಾಲಿ ಖಂಡೇರಿ ಜಲಾಂತರ್ಗಾಮಿ

Pinterest LinkedIn Tumblr

ಮುಂಬಯಿ: ಭಾರತದ ರಕ್ಷಣಾ ವ್ಯವಸ್ಥೆಗೆ ಮತ್ತೊಂದು ಶಕ್ತಿ ಇದೀಗ ನೌಕಾಪಡೆಗೆ ಸೇರಿದೆ. ನೌಕಾಪಡೆಗೆ ಕಲ್ವಾರಿ ಕ್ಲಾಸ್‌ ಜಲಾಂತರ್ಗಾಮಿಯನ್ನು ಸೇರ್ಪಡೆಗೊಳಿಸಲಾಗಿದೆ.

ಕಲ್ವರಿ ವಿಭಾಗದ 2ನೇ ಜಲಾಂತರ್ಗಾಮಿ ಇದಾಗಿದೆ. ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಮುಂಬಯಿನ ಮಜಾಗನ್ ಡಾಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೌಕಾಪಡೆಗೆ ಅಧಿಕೃತವಾಗಿ ದೇಶ ಸೇವೆಗೆ ಸಮರ್ಪಿಸಿದರು.

ಡೀಸಲ್‌ ಎಲೆಕ್ಟ್ರಿಲ್‌ ಶಕ್ತಿಶಾಲಿಯಾದ ಖಂಡೇರಿ ಸಬ್‌ಮರೀನ್‌ ಸ್ವದೇಶಿ ನಿರ್ಮಿತವಾಗಿದ್ದು, ಆರನೇ ಬಾರಿಗೆ ಭಾರತದಲ್ಲೇ ನಿರ್ಮಾಣ ಮಾಡಲಾಗಿದೆ. ಅತ್ಯಾಧುನಿಕ ಸ್ಕಾರ್ಪಿಯನ್‌ ಶ್ರೇಣಿಯ ಐಎನ್‌ಎಸ್‌ ಖಂಡೇರಿ, ಶಕ್ತಿಶಾಲಿ ಯುದ್ಧ ನೌಕೆಗಳನ್ನು ಉರುಳಿಸಬಲ್ಲ ಸಾಮರ್ಥ್ಯ ಹೊಂದಿದೆ. ಸಮುದ್ರದ 350 ಮೀಟರ್‌ ಆಳದಲ್ಲಿ ಸುಮಾರು 50 ದಿನಗಳ ಕಾಲ ಕಾರ್ಯಾಚರಣೆ ನಡೆಸಬಲ್ಲದು. 67.5 ಮೀಟರ್ ಉದ್ದವಿರುವ ಜಲಾಂತರ್ಗಾಮಿಯು ಪ್ರತಿ ಗಂಟೆಗೆ 20 ನಾಟಿಕಲ್‌ ಮೈಲಿಯ ವೇಗದಲ್ಲಿ ಸಾಗರದಡಿಯಲ್ಲಿ ಚಲಿಸಬಲ್ಲದು.

ಶಬ್ಧ ರಹಿತ ಜಲಾಂತರ್ಗಾಮಿ!
ಸಾಮಾನ್ಯವಾಗಿ ಸಾಗರದಾಳದಲ್ಲಿ ಜಲಾಂರ್ಗಾಮಿಯ ಶಬ್ಧಗಳನ್ನು ಗುರುತಿಸಿ ಯುದ್ಧ ನೌಕೆಗಳು ಸಬ್‌ಮರೀನ್‌ ಮೇಲೆ ದಾಳಿ ನಡೆಸುತ್ತದೆ. ಆದರೆ ಖಂಡೇರಿ ಜಲಾಂರ್ಗಾಮಿ ಶಬ್ಧರಹಿತ ನೌಕೆಯಾಗಿದ್ದು ಶತ್ರುಪಾಳಯಕ್ಕೆ ಸುಲಭವಾಗಿ ಗುರಿಯಾಗದು ಎನ್ನಲಾಗಿದೆ.

ಫ್ರಾನ್ಸ್‌ ಜತೆಗೆ 2005ರಲ್ಲಿ ತಂತ್ರಜ್ಞಾನ ವರ್ಗಾವಣೆ ಒಪ್ಪಂದದ ಬಳಿಕ ಭಾರತ ಆರನೇ ಸ್ಕಾರ್ಪಿಯನ್‌ ದರ್ಜೆಯ ಜಲಾಂತರ್ಗಾಮಿಯನ್ನು ನಿರ್ಮಾಣ ಮಾಡಿದೆ. ಈ ಪೈಕಿ ಖಂಡೇರಿ ಸಬ್‌ಮರೀನ್‌ ಸಹ ಒಂದಾಗಿದೆ. 2017ರಲ್ಲಿ ಕಲ್ವರಿ ಸ್ಕಾರ್ಪಿಯನ್‌ ದರ್ಜೆಯ ಮೊದಲ ಸಬ್‌ಮರೀನ್‌ ನೌಕಾಪಡೆಗೆ ಸೇರಿಸಲಾಗಿತ್ತು.

ಸಾಗರದಡಿಯಲ್ಲಿನ ದಾಳಿಗೆ ಪ್ರತಿದಾಳಿ, ಟೋರ್ಪಿಡೋ, ಅತ್ಯಾಧುನಿಕ ಸಂವಹನ ವ್ಯವಸ್ಥೆ ಹಾಗೂ ಶತ್ರುಪಡೆಗಳ ಸ್ಥಳವನ್ನು ನಿಖರವಾಗಿ ಕಂಡುಹಿಡಿಯುವ ಸಾಮರ್ಥ್ಯ ಐಎನ್‌ಎಸ್‌ ಖಂಡೇರಿ ಜಲಾಂತರ್ಗಾಮಿಯಲ್ಲಿದೆ.

ಫ್ರೆಂಚ್‌ ಜತೆಗಿನ ಒಪ್ಪಂದದಿಂದ ಭಾರತದ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಲು ಸಹಕಾರಿಯಾಗಿದೆ. ಸಬ್‌ಮರೀನ್‌ ಭಾರತದಲ್ಲೇ ತಯಾರಾಗುತ್ತಿರುವುದು ಪರೋಕ್ಷವಾಗಿ ಕೈಗಾರಿಕೋದ್ಯಮಗಳಿಗೆ ಅನುಕೂಲವಾಗುತ್ತಿದೆ. ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ಸಬ್‌ಮರೀನ್‌ ನಿರ್ಮಾಣವಾಗುತ್ತಿದೆ. ದೇಶದ ಸುರಕ್ಷತೆಗೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತಿದ್ದು, ಈ ವಿಚಾರದಲ್ಲಿ ಎಂದೂ ರಾಜಿ ಮಾಡಿಕೊಳ್ಳಲಾಗದು. ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಸರಕಾರ ತನ್ನ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿದೆ ಎಂದು ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ತಿಳಿಸಿದ್ದಾರೆ.

Comments are closed.