ಅಂತರಾಷ್ಟ್ರೀಯ

ಅಮೆರಿಕದಲ್ಲಿ ಭಾರತೀಯ ಮೂಲದ ಸಿಖ್ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿ

Pinterest LinkedIn Tumblr

ಟೆಕ್ಸಾಸ್: ಅಮೆರಿಕಾದ ಟೆಕ್ಸಾಸ್ ಪ್ರಾಂತ್ಯದ ಟ್ರಾಫಿಕ್ ಒಂದರಲ್ಲಿ ವಾಹನವನ್ನು ತಡೆದಿದ್ದಕ್ಕೆ ವ್ಯಕ್ತಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ ಪರಿಣಾಮ ಭಾರತೀಯ ಮೂಲದ ಸಿಖ್ ಪೋಲಿಸ್ ಅಧಿಕಾರಿಯೊಬ್ಬರಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.

ಭಾರತೀಯ ಮೂಲದ ಸಂದೀಪ್ ಸಿಂಗ್ ದಾಲಿವಾಲ್ (40) ಮೃತ ದುರ್ದೈವಿಯಾಗಿದ್ದು, ಇವರು ಅಮೆರಿಕಾದ ಹ್ಯಾರಿಸ್ ಕೌಂಟಿ ಶೆರಿಫ್ ನ ಉಪ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಶೆರಿಫ್ ಇಡಿ ಗೊನ್ಜಾಲೆಜ್ ಮಾಹಿತಿ ನೀಡಿದ್ದಾರೆ.

ಕರ್ತವ್ಯದಲ್ಲಿ ಇದ್ದ ಸಂದೀಪ್ ಸಿಂಗ್ , ಪುರುಷ ಮತ್ತು ಮಹಿಳೆ ಇದ್ದ ವಾಹನವನ್ನು ಚೆಕ್ ಮಾಡಲೆಂದು ತಡೆದಾಗ, ಆಕ್ರೋಶಗೊಂಡ ವ್ಯಕ್ತಿ ಕಾರಿನಿಂದ ಇಳಿದು ಮನ ಬಂದತೆ ಸಿಂಗ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ. ಇದಾದ ಬಳಿಕ ವ್ಯಕ್ತಿ ಸಮೀದಲ್ಲಿದ್ದ ಶಾಪಿಂಗ್ ಮಾಲ್ ನತ್ತ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಹಂತಕನಿಗಾಗಿ ಬಲೆ ಬೀಸಿದ ತನಿಖಾಧಿಕಾರಿಗಳು ಆತನ ಗುರುತು ಪತ್ತೆ ಹಚ್ಚಿದ್ದು, ಆತನ ಜೊತೆಯಿದ್ದ ಗನ್ ಮತ್ತು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

ಸಂದೀಪ್ ಸಿಂಗ್ 2015 ರಿಂದ ಇತಿಹಾಸ ನಿರ್ಮಿಸುವ ಪೊಲೀಸ್ ಅಧಿಕಾರಿಯಾಗಿದ್ದರು. ಸಿಖ್ ರೀತಿ ನೀತಿಗಳಲ್ಲಿ ಅಪಾರ ನಂಬಿಕೆ ಇರಿಸಿದ್ದ ಅವರು ಪೇಟ ಮತ್ತು ಗಡ್ಡವನ್ನು ಇರಿಸಿಕೊಂಡಿದ್ದರು. ಅವರ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೆಚ್ಚಿಸುವ ಸಲುವಾಗಿ ಬೀದಿಗಳಲ್ಲಿ ಕರ್ತವ್ಯ ನಿರತರಾಗಿ ಗಸ್ತು ತಿರುತ್ತಿದ್ದಾಗ ಪೇಟ ಧರಿಸಲು ಅವಕಾಶ ಕೊಡಲಾಗಿತ್ತು ಎಂದು ಶೆರಿಫ್ ತಿಳಿಸಿದ್ದಾರೆ.

ಸಂದೀಪ್ ಸಿಂಗ್ ಗೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಪರೋಪಕಾರದ ಗುಣದಿಂದ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಯುನೈಟೆಡ್ ಸಿಖ್ ರ ಜೊತೆ, ಜಾಗತಿಕ ಮಾನವೀಯ ಪರಿಹಾರ ಸಂಸ್ಥೆ, ಸೇರಿದಂತೆ ಹಲವಾರು ದೇಣಿಗೆ ಸಂಸ್ಥೆಗಳಲ್ಲಿ ಸಿಂಗ್ ನಿಸ್ವಾರ್ಥ ಕೆಲಸ ಮಾಡಿದ್ದರು ಎಂದು ಶೆರಿಫ್ ಇಡಿ ಗೊನ್ಜಾಲೆಜ್ ನೆನಪಿಸಿಕೊಂಡಿದ್ದಾರೆ.

Comments are closed.