ರಾಷ್ಟ್ರೀಯ

ಭಾರತದಲ್ಲಿ ಬಡತನಕ್ಕೆ ಮೊಘಲ್, ಬ್ರಿಟಿಷರೇ ಕಾರಣ ಎಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

Pinterest LinkedIn Tumblr

ಮುಂಬಯಿ: ಭಾರತದ ಆರ್ಥಿಕತೆ ದುರ್ಬಲವಾಗಲು ನಿಮ್ಮ ಪ್ರಕಾರ ಯಾರು ಹೊಣೆಗಾರರನ್ನೆತ್ತೀರ? ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಕಾರ ಇದಕ್ಕೆ ಕಾರಣ ಕಳೆದ 72 ವರ್ಷದ ಹಿಂದೆ ನಮ್ಮ ದೇಶದಿಂದ ಹೊರದೂಡಲ್ಪಟ್ಟ ಬ್ರಿಟಿಷರು ಮತ್ತು ಎರಡು ಶತಮಾನಕ್ಕಿಂತ ಹಿಂದೆ ಅಳಿದು ಹೋದ ಮೊಘಲರು.

ಮುಂಬಯಿಯಲ್ಲಿ ವಿಶ್ವ ಹಿಂದೂ ಆರ್ಥಿಕ ವೇದಿಕೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಮೊಘಲರ ಆಗಮನಕ್ಕು ಮುನ್ನ ಭಾರತವು ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿತ್ತು. ಮೊಘಲರು ಭಾರತಕ್ಕೆ ಬರುವ ಹೊತ್ತಿಗೆ ವಿಶ್ವದ ಆರ್ಥಿಕತೆಯ ಮೂರನೇ ಒಂದು ಭಾಗದಷ್ಟು ಪಾಲನ್ನು ಅಂದರೆ 36% ಸಂಪತ್ತನ್ನು ಹೊಂದಿತ್ತು. ಆದರೆ ಬ್ರಿಟಿಷರು ಬರುವ ಹೊತ್ತಿಗೆ ಇದು 20%ಕ್ಕೆ ಇಳಿಯಿತು, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಹೇಳಿದ್ದಾರೆ.

ದೇಶದಲ್ಲಿ ತಮ್ಮ 200 ವರ್ಷಗಳ ಆಳ್ವಿಕೆಯಲ್ಲಿ, ಬ್ರಿಟಿಷರು ಭಾರತೀಯ ಆರ್ಥಿಕತೆಯನ್ನು ದುರ್ಬಲಗೊಳಿಸಿದರು ಮತ್ತು ಅವರು ಹೊರಡುವ ಹೊತ್ತಿಗೆ ಅದನ್ನು ಕೇವಲ ನಾಲ್ಕು ಶೇಕಡಾಕ್ಕೆ ಇಳಿಸಿದರು ಎಂದು ಅವರು ಒತ್ತಿ ಹೇಳಿದರು.

ಮುಂಬರುವ ವರ್ಷಗಳಲ್ಲಿ ಉತ್ತರ ಪ್ರದೇಶವನ್ನು $1 ಟ್ರಿಲಿಯನ್ ಆರ್ಥಿಕತೆ ಸಾಧಿಸಿದ ರಾಜ್ಯ ಮಾಡುವುದಾಗಿ ಯೋಗಿ ಆದಿತ್ಯನಾಥ್ ಈ ತಿಂಗಳ ಆರಂಭದಲ್ಲಿ ಹೇಳಿಕೊಂಡಿದ್ದರು.

Comments are closed.