ರಾಷ್ಟ್ರೀಯ

ವಾಯುಮಾಲಿನ್ಯ ನಂತರ ತಾಜ್ ಮಹಲ್ ಗೆ ಸೊಳ್ಳೆ ಕಾಟ! ಪರಿಹಾರಕ್ಕೆ ಪಾಕ್ ಮೊರೆ ಹೋದ ಪುರಾತತ್ವ ಇಲಾಖೆ!!

Pinterest LinkedIn Tumblr

ಪ್ರೇಮಿಗಳ ಸೌಧ ಎಂದೇ ಖ್ಯಾತಿ ಹೊಂದಿರುವ ತಾಜ್ ಮಹಲ್ ನನ್ನು ಮೊಘಲರ ದೊರೆ ಷಹಜಹಾನ್ ತನ್ನ ಪತ್ನಿ ಮುಮ್ತಾಜ್ ಸ್ಮರಣೆಯಲ್ಲಿ ನಿರ್ಮಿಸಿದ್ದನು. ಸದ್ಯ ಈ ತಾಜ್ ಮಹಲ್ ಪರಿಸರ ಮಾಲಿನ್ಯದಿಂದಾಗಿ ತನ್ನ ಸೌಂದರ್ಯದ ಹೊಳಪನ್ನು ಕಳೆದುಕೊಳ್ಳುತ್ತಿದೆ.
1653ರಲ್ಲಿ ಕಟ್ಟಲಾದ ಬಿಳಿ ಬಣ್ಣದ ಈ ತಾಜ್ ಮಹಲ್ ನ ಮಾರ್ಬಲ್ ಇದೀಗಾ ಬಿಳಿ ಬಣ್ಣದಿಂದ ಹಸಿರು, ಕಪ್ಪು ಬಣ್ಣಕ್ಕೆ ತಿರುಗಿಬಿಟ್ಟಿದ್ದು ವಿಪರೀತವಾಗಿರುವ ಸೊಳ್ಳೆಕಾಟ ಪ್ರೇಮಸೌಧದ ಅಂದ ಹಾಳುಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ಹೌದು ಪ್ರವಾಸಿಗರ ಹಾಗೂ ಪ್ರೇಮಿಗಳ ಮೆಚ್ಚಿಗೆಯ ಜಗತ್ ಪ್ರಸಿದ್ಧ ತಾಜ್ ಮಹಲ್ ಇದೀಗಾ ವಿಪರೀತ ವಾಯು ಮಾಲಿನ್ಯದ ಜೊತೆ ಜೊತೆಗೆ ಸೊಳ್ಳೆ ,ಸಣ್ಣ ಕೀಟಗಳ ಮಲಮೂತ್ರಗಳ ಕಲೆಯಿಂದ ತನ್ನ ನೈಜ ಬಣ್ಣ ಕಳೆದುಕೊಳ್ಳುತ್ತಿದೆ. ಅಲ್ಲದೆ ಯಮುನಾ ನದಿಯ ಮಾಲಿನ್ಯದಿಂದ ಹಾಗೂ ಸುತ್ತ ಮುತ್ತಲ ಕೈಗಾರಿಕಾರಣಗಳಿಂದ ಪರಿಸರ ತೀವ್ರ ಮಾಲಿನ್ಯದಿಂದಾಗಿ ಪವಿತ್ರವಾದ ತಾಜ್ ಮಹಲ್ ಹಾನಿಗೊಳಗಾಗಿದೆ.

ಈ ಹಿಂದೆ ತಾಜ್ ಮಹಲ್ ಸುತ್ತಮುತ್ತ ಮಾಲಿನ್ಯ ತಡೆಗಟ್ಟಲು ಹಾಗೂ ವಾತಾವರಣ ಶುದ್ಧಿಗೊಳಿಸಲು ಪವಿತ್ರ ಸಸ್ಯ ಎನಿಸಿರುವ ತುಳಸಿಯನ್ನು ಬಳಸಲಾಗಿತ್ತು. ಆದರೀಗಾ ಪಾಕಿಸ್ತಾನದ ಮುಲ್ತಾನ್ ಎಂಬ ಊರಿನಲ್ಲಿ ಸಿಗುವ ಮಣ್ಣಿನಲ್ಲಿ ತಾಜ್ ಮಹಲ್ ಒಳಪನ್ನಿ ಶುದ್ದಿಕರಿಸಲು ಯೋಚಿಸಲಾಗಿದೆ.

ಹೌದು ಪಾಕಿಸ್ತಾನದಲ್ಲಿರುವ ಮುಲ್ತಾನ್ ಊರಿನಲ್ಲಿ ಸಿಗುವ ಮಣ್ಣಿನಲ್ಲಿ ಸುಣ್ಣದಂಶವಿದ್ದು ಇದು ಮುಖದ ಸೌಂದರ್ಯ ಕಾಪಾಡುತ್ತದೆ. ಭಾರತ ಸೇರಿದಂತೆ ಅನೇಕ ಕಡೆ ಮುಲ್ತಾನಿ ಮಿಟ್ಟಿಯನ್ನು ಮಹಿಳೆಯರು ಫೇಸ್ ಪ್ಯಾಕ್ ಪದಾರ್ಥವಾಗಿ ಬಳಸಲಾಗುತ್ತದೆ. ಇದೀಗಾ ತಾಜಮಹಲ್ ನ ಗೋಡೆಗಳಲ್ಲಿರುವ ಹಳದಿ ಬಣ್ಣವನ್ನು ಹೋಗಲಾಡಿಸಲು ಮುಲ್ತಾನಿ ಮಿಟ್ಟಿ ಹಚ್ಚಲು ಭಾರತೀಯ ಪುರಾತತ್ವ ಇಲಾಖೆ (ಎಸ್‌ಎಸ್‌ಐ) ನಿರ್ಧರಿಸಲಾಗಿದ್ದು, ನಂತರ ಡಿಸ್ಟಿಲ್ಡ್‌ ವಾಟರ್‌ನಿಂದ ಪ್ರೇಮಸೌಧದ ಗೋಡೆಯನ್ನು ತೊಳೆಯಲಾಗುವುದು ಎಂದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಹಿಂದೆ 1994, 2001 ಮತ್ತು 2008ರಲ್ಲೂ ತಾಜ್‌ಮಹಲ್‌ಗೆ ಇದೇ ಮಾದರಿಯ ಮಲ್ತಾನಿ ಮಿಟ್ಟಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಇದು ಶಾಶ್ವತ ಪರಿಹಾರವಾಗುವ ಸಾಧ್ಯತೆ ಕಡಿಮೆ. ಈ ಕುರಿತಾಗಿ ಸುಪ್ರೀಂಕೋರ್ಟ್ ಸುಮಾರು 200 ಕ್ಕೂ ಅಧಿಕ ಕೈಗರಿಕಾ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿ ಪರಿಸರ ಮಾಲಿನ್ಯ ಮಾಡದಂತೆ ಎಚ್ಚರಿಕೆ ನೀಡಿತ್ತು. ಆದರೆ ಮಾಲಿನ್ಯ ನಿಯಂತ್ರಣಗೊಳಿಸಲಾಗದೇ ತಾಜ್ ಮಹಲ್ ಮತ್ತೊಮ್ಮೆ ಮಾಲಿನ್ಯಗೊಂಡಿದೆ.

ಇನ್ನೂ ಇದೀಗಾ ತಾಜ್ ಮಹಲ್ ಗೆ ಮುಲ್ತಾನಿ ಮಟ್ಟಿ ಬಳಸಿ ಹೊಳಪು ಗೊಳಿಸಲು ಸುಮಾರು 10.4 ಲಕ್ಷ ರೂ ಖರ್ಚು ಮಾಡಲಾಗುತ್ತಿದೆ ಎಂದು ಹೇಳಾಲಾಗಿದೆ.12ಕ್ಕೂ ಅಧಿಕ ಆರ್ಕ್ಟಿಟೆಕ್ಟ್ ಗಳು ಸುಮಾರು ಆರು ತಿಂಗಳುಗಳ ಕಾಲ ಈ ಚಿಕಿತ್ಸೆ ನೀಡಲಿದ್ದಾರೆ. ಆದರೆ ಪ್ರವಾಸಿಗಳಿಗೆ ಮಾತ್ರ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಎಎಸ್ಐ ತಂಡ ತಿಳಿಸಿದೆ.

Comments are closed.