ಕರ್ನಾಟಕ

ಕರಣ್ ಜೋಹರ್ ಮೆಚ್ಚಿದ ತೆಲುಗು ಸಿನೆಮಾ ಡಿಯರ್ ಕಾಮ್ರೇಡ್

Pinterest LinkedIn Tumblr


ವ್ಯಾಪಕ ವಿರೋಧದ ನಡುವೆಯೂ ಕರ್ನಾಟಕದಲ್ಲಿ ರಶ್ಮಿಕಾ ಮಂದಣ್ಣ ನಟನೆಯ ಡಿಯರ್ ಕಾಮ್ರೇಡ್ ಗ್ರ್ಯಾಂಡ್ ರಿಲೀಸ್ ಆಗಿದೆ. ಕರಣ್ ಜೋಹರ್ ಮೆಚ್ಚಿದ ಕಾಮ್ರೇಡ್​ನಲ್ಲಿ ಅಂಥದ್ದೇನಿದೆ..? ಮೋಸ್ಟ್ ರೊಮ್ಯಾಂಟಿಕ್ ಜೋಡಿಯ ಈ ಬಾರಿಯ ಮೋಡಿ ಹೇಗಿದೆ ಅನ್ನೋದ್ರ ಕಂಪ್ಲೀಟ್ ರಿವ್ಯೂ ರಿಪೋರ್ಟ್​ ಇಲ್ಲಿದೆ.

ಡಿಯರ್ ಕಾಮ್ರೇಡ್.. ಇಂದು ತೆರೆಕಂಡ ರಶ್ಮಿಕಾ ಮಂದಣ್ಣ ಹಾಗೂ ಸೌತ್ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಜೋಡಿಯ ಸೌತ್​ನ ಮೋಸ್ಟ್ ಎಕ್ಸ್​ಪೆಕ್ಟೆಡ್ ಮೂವಿ. ಕನ್ನಡ ವಿರೋಧಿ ರಶ್ಮಿಕಾಗೆ ಕನ್ನಡವೇ ಬರಲ್ಲವಂತೆ ಅನ್ನೋ ಮಾತಿನಿಂದ ಕೆರಳಿದ್ದ ಒಂದಷ್ಟು ಕನ್ನಡಪರ ಸಂಘಟನೆಗಳು ಸಿನಿಮಾನ ಕರ್ನಾಟಕದಲ್ಲಿ ಬ್ಯಾನ್ ಮಾಡ್ಬೇಕು ಅಂದಿದ್ರು. ಅಷ್ಟೇ ಅಲ್ಲ, ಇಂದು ಥಿಯೇಟರ್ ಬಳಿಯೂ ಬಂದು ಪ್ರತಿಭಟಿಸೋಕ್ಕೆ ಮುಂದಾದ್ರು.

ಮೆಜೆಸ್ಟಿಕ್​ನ ಕೆಂಪೇಗೌಡ ರಸ್ತೆಯಲ್ಲಿರೋ ಮೇನಕ ಚಿತ್ರಮಂದಿರದಲ್ಲಿ ಡಿಯರ್ ಕಾಮ್ರೇಡ್​ಗೆ ವಿರೋಧ ವ್ಯಕ್ತವಾಗ್ತಿದ್ದಂತೆ, ಪೊಲೀಸರು ಕನ್ನಡಪರ ಹೋರಾಟಗಾರರನ್ನ ವಶಕ್ಕೆ ಪಡೆದರು. ಅಲ್ಲಿಗೆ ಸಿನಿಮಾ ನೋಡೋಕ್ಕೆ ಅಂತ ಬಂದಿದ್ದ ಸಿನಿಪ್ರಿಯರಿಗೆ ಸಿನಿಮಾ ನೋಡೋ ಯೋಗವೂ ಸಿಕ್ತು. ಸಿನಿಮಾ ನೋಡಿ ಖುಷಿಯೂ ಪಟ್ಟರು.

ಡಿಯರ್ ಕಾಮ್ರೇಡ್ ಸ್ಟೋರಿಲೈನ್
ಕಾಕಿನಾಡದಲ್ಲಿ ಕಾಲೇಜು ದಿನಗಳಲ್ಲಿ ಅನ್ಯಾಯದ ವಿರುದ್ಧ, ತಮ್ಮ ಹಕ್ಕುಗಳಿಗಾಗಿ ಹೋರಾಡೋ ಮುಂಗೋಪಿ ಚಿಗುರುಮೀಸೆ ಯುವಕ ಚೈತನ್ಯ ಬಾಬಿ ಕೃಷ್ಣನ್. ಕಾಮ್ರೇಡ್ ಆಗಿದ್ದ ತಾತನೇ ಬಾಬಿ ಕಾಮ್ರೇಡ್ ಆಗೋಕ್ಕೆ ಸ್ಫೂರ್ತಿಯಾಗೋದಲ್ಲದೆ, ಸ್ನೇಹಿತರು ಮತ್ತು ವಿದ್ಯಾರ್ಥಿಗಳಿಗೆ ಅನ್ಯಾಯವಾದ್ರೆ ಅದನ್ನ ಪ್ರತಿಭಟಿಸೋ ಟೀಂ ಲೀಡರ್ ಇವರೇ. ಹೀಗಿರುವಾಗ್ಲೇ ಪಕ್ಕದ ಮನೆಯವರ ಸಂಬಂಧಿ, ಸ್ಟೇಟ್ ಕ್ರಿಕೆಟ್ ಪ್ಲೇಯರ್ ಲಿಲ್ಲಿ ಕಾಕಿನಾಡಕ್ಕೆ ಬರ್ತಾಳೆ. ಆಕೆಯೊಂದಿಗೆ ಪ್ರೀತಿಯಲ್ಲಿ ಬೀಳೋ ಕಾಮ್ರೇಡ್, ಜಗಳಗಳಲ್ಲಿ ಒಮ್ಮೆ ಜೀವ ಕಳೆದುಕೊಳ್ಳೋ ಸ್ಥಿತಿಗೆ ಬಂದು ಆಸ್ಪತ್ರೆ ಪಾಲಾಗ್ತಾನೆ. ಆಗ ನಾನು ಬೇಕು ಅಂದ್ರೆ ಜಗಳಗಳಿಗೆಲ್ಲಾ ಫುಲ್ ಸ್ಟಾಪ್ ಇಡು ಅನ್ನೋ ಲಿಲ್ಲಿ ಮಾತನ್ನ ಅಲ್ಲಗೆಳೆಯೋ ಕಾಮ್ರೇಡ್ ಆಕೆಯಿಂದ ಮೂರು ವರ್ಷ ದೂರವಾಗ್ತಾನೆ. ಅಷ್ಟಕ್ಕೆ ಮೊದಲಾರ್ಧ ಮುಕ್ತಾಯವಾಗುತ್ತೆ.

ಪ್ರೀತಿಯನ್ನ ಕಳೆದುಕೊಳ್ಳಲಾಗದೆ, ಪ್ರೀತಿಗಾಗಿ ಬದಲಾಗೋ ಕಾಮ್ರೇಡ್ ಹೊಸ ಜೀವನ ಶುರು ಮಾಡಿರ್ತಾನೆ. ಅಷ್ಟರಲ್ಲೇ ಲಿಲ್ಲಿಗೆ ಆ್ಯಕ್ಸಿಡೆಂಟ್ ಆಗಿರೋದು ಮನವರಿಕೆ ಆಗುತ್ತೆ. ಮೆಂಟಲ್ ಆಸ್ಪತ್ರೆಯಲ್ಲಿದ್ದ ಲಿಲ್ಲಿಯನ್ನ ಕಾಮ್ರೇಡ್ ಕಾಪಾಡ್ತಾನಾ..? ಇಷ್ಟಕ್ಕೂ ಆಕೆಗೆ ಆ್ಯಕ್ಸಿಡೆಂಟ್ ಆಗಿದ್ದಾದ್ರು ಯಾಕೆ..? ಕೊನೆಗೆ ಕಾಮ್ರೇಡ್ ಡಿಯರ್ ಕಾಮ್ರೇಡ್ ಹೇಗೆ ಆದ ಅನ್ನೋದೇ ಚಿತ್ರದ ಕಥಾಹಂದರ.

ಡಿಯರ್ ಕಾಮ್ರೇಡ್ ಆರ್ಟಿಸ್ಟ್ ಪರ್ಫಾರ್ಮೆನ್ಸ್
ಇಲ್ಲಿಯವರೆಗೂ ಗ್ಲಾಮರ್ ರೋಲ್​ಗಳಲ್ಲಿ ಮಿಂಚ್ತಿದ್ದ ನಟಿ ರಶ್ಮಿಕಾ ಮಂದಣ್ಣ, ಇದೇ ಮೊದಲ ಬಾರಿ ಚಾಲೆಂಜಿಂಗ್ ಪಾತ್ರ ಕ್ರಿಕೆಟರ್ ಆಗಿ ಬಣ್ಣ ಹಚ್ಚಿದ್ದಾರೆ. ಅಲ್ಲದೆ, ನಾಯಕನಟನಷ್ಟೇ ಪ್ರಾಮುಖ್ಯತೆ ಇರೋ ಲಿಲ್ಲಿ ಪಾತ್ರಕ್ಕೆ ಜೀವ ತುಂಬೋದ್ರಲ್ಲಿ ಭೇಷ್ ಅನಿಸಿಕೊಂಡಿದ್ದಾರೆ. ಎಮೋಷನ್ಸ್​ನ ಕ್ಯಾರಿ ಮಾಡೋದ್ರಲ್ಲಿ ರಶ್ಮಿಕಾ ಮತ್ತೊಮ್ಮೆ ವಾವ್ ಅನಿಸ್ತಾರೆ.

ಇನ್ನು ಸಿನಿಮಾನ ಈಗಾಗ್ಲೇ ಹಿಂದಿಗೆ ರಿಮೇಕ್ ಮಾಡೋಕ್ಕೆ ಮುಂದಾಗಿರೋ ಕರಣ್ ಜೋಹರ್, ಸಿನಿಮಾ ನೋಡಿ ರಶ್ಮಿಕಾ ಆ್ಯಕ್ಟಿಂಗ್​ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಸದ್ಯದಲ್ಲೇ ರಶ್ಮಿಕಾನ ಬಾಲಿವುಡ್​ಗೆ ಇಂಟ್ರಡ್ಯೂಸ್ ಮಾಡ್ತಿದ್ದಾರೆ.

ಸಾಮಾನ್ಯವಾಗಿ ವಿಜಯ್ ದೇವರಕೊಂಡ- ರಶ್ಮಿಕಾ ಜೋಡಿ ಅಂದ್ರೆ ಅಲ್ಲಿ ರೊಮ್ಯಾನ್ಸ್​ಗೇನು ಕೊರತೆ ಇರಲ್ಲ ಅನ್ನೋ ಮಾತಿದೆ. ಅದ್ರಂತೆ ಇದ್ರಲ್ಲಿ ಒಂದೆರಡು ಕಡೆ ಲಿಪ್ ಲಾಕ್ ದೃಶ್ಯಗಳನ್ನ ಬಿಟ್ಟರೆ, ಇವ್ರ ನಡುವಿನ ಕೆಮಿಸ್ಟ್ರಿ ಇಂಟರೆಸ್ಟಿಂಗ್ ಅನಿಸಲಿದೆ. ಗೀತಾ ಗೋವಿಂದಂ ನಂತ್ರ ಮತ್ತೊಮ್ಮೆ ಈ ಜೋಡಿ ಮೋಡಿ ಮಾಡ್ತಿದೆ.

ಅಂದಹಾಗೆ ವಿಜಯ್ ದೇವರಕೊಂಡ ಆ್ಯಂಗ್ರಿ ಯಂಗ್​ಮ್ಯಾನ್ ಆಗಿ ಕಾಮ್ರೇಡ್ ಪಾತ್ರದಲ್ಲಿ ಧೂಳೆಬ್ಬಿಸ್ತಿದ್ದಾರೆ. ಈ ಚಿತ್ರದಿಂದ ವಿಜಯ್​ರಲ್ಲಿರೋ ಮಾಸ್​ನೆಸ್ ಹೊರಬಂದಂತಿದೆ. ಕಾಮ್ರೇಡ್​ಗೆ ಬೇಕಾಗೋ ಹಾವ, ಭಾವ, ಆ ರೋಷ, ಧೈರ್ಯ ಎಲ್ಲವೂ ವಿಜಯ್ ಅಭಿನಯದಲ್ಲಿ ಕಣ್ಣಿಗೆ ಹಬ್ಬ ನೀಡಲಿದೆ. ಉಳಿದಂತೆ ಎಲ್ಲಾ ಕಲಾವಿದರು ಅವರವರ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಡಿಯರ್ ಕಾಮ್ರೇಡ್ ಮೈನಸ್ ಪಾಯಿಂಟ್ಸ್
ಕಥೆ ತುಂಬಾ ಲೆಂಥ್ ಆಯ್ತು ಅನ್ನೋದನ್ನ ಬಿಟ್ಟರೆ, ಪ್ರೇಕ್ಷಕರಿಗೆ ಎಲ್ಲಿಯೂ ಬೋರ್ ಹೊಡೆಯೋ ರೀತಿ ಇಲ್ಲ. ಟೈಟಲ್​ಗೆ ತಕ್ಕನಾಗಿ ಸಿನಿಮಾ ತುಂಬಾ ಅಚ್ಚುಕಟ್ಟಾಗಿದೆ. ಅದ್ರಲ್ಲೂ ಮಲಯಾಳಂ ದುಲ್ಕರ್ ಸಲ್ಮಾನ್ ಸಿನಿಮಾಗಳನ್ನ ನೆನಪಿಸುತ್ತೆ ಡಿಯರ್ ಕಾಮ್ರೇಡ್. ಇನ್ನು ಹಾಸ್ಯ ಎಕ್ಸ್​ಪೆಕ್ಟ್ ಮಾಡೋರಿಗೆ ಇಲ್ಲಿ ಹಾಸ್ಯಕಲಾವಿದರಿಲ್ಲದಿರೋದ್ರಿಂದ ಸೀರಿಯಸ್​ನೆಸ್ ಹೆಚ್ಚಾಗಿದೆ ಅನಿಸುತ್ತೆ.

ಡಿಯರ್ ಕಾಮ್ರೇಡ್ ಫೈನಲ್ ಸ್ಟೇಟ್​ಮೆಂಟ್
ಮನರಂಜನೆಯ ಜೊತೆಗೆ ಬ್ಯೂಟಿಫುಲ್ ಮೆಸೇಜ್ ಮೂಲಕ ಸಿನಿಮಾನ ನೋಡುಗರಿಗೆ ಉಣಬಡಿಸಿರೋದು ನಿರ್ದೇಶಕ ಭರತ್ ಕಮ್ಮ ಜಾಣತನವನ್ನ ತೋರಿಸುತ್ತೆ. ಲವ್, ರೊಮ್ಯಾನ್ಸ್, ಆ್ಯಕ್ಷನ್, ಎಮೋಷನ್ಸ್ ಇದ್ದೇ ಇರುತ್ತೆ. ಆದ್ರೆ ಅವುಗಳ ಮಧ್ಯೆ ಒಂದು ಬಲವಾದ ಸಂದೇಶವನ್ನ ನೀಡೋದ್ರಲ್ಲಿ ಡಿಯರ್ ಕಾಮ್ರೇಡ್ ಮೆಚ್ಚುವಂತಹ ಕೆಲಸ ಮಾಡಿದೆ. ವಿಜಯ್ ದೇವರಕೊಂಡರನ್ನ ಬೇರೆಯದ್ದೇ ಇಮೇಜ್​ನಲ್ಲಿ ನೋಡಬಹುದು. ರಶ್ಮಿಕಾ ಕೂಡ ಇಲ್ಲಿ ಫ್ರೆಶ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಬ್ಬ ಹೆಣ್ಣಿಗೆ ಆಕೆಯ ಜೀವನದಲ್ಲಿ ಯಾರಾದ್ರು ಒಬ್ಬ ಡಿಯರ್ ಕಾಮ್ರೇಡ್ ಇದ್ದೇ ಇರ್ತಾನೆ ಅನ್ನೋದಕ್ಕೆ ಇದು ಬೆಸ್ಟ್ ಎಕ್ಸಾಂಪಲ್. ವಾರಾಂತ್ಯಕ್ಕೆ ಥಿಯೇಟರ್ ಕಡೆ ಹೋಗೋರಿಗೆ ಇದೊಂದು ಬೆಸ್ಟ್ ಚಾಯ್ಸ್ ಆಗೋದ್ರಲ್ಲಿ ಡೌಟೇ ಇಲ್ಲ.

Comments are closed.