ರಾಷ್ಟ್ರೀಯ

ವಂದೇ ಮಾತರಂಗೆ ರಾಷ್ಟ್ರಗೀತೆ ಸ್ಥಾನಮಾನ; ದೆಹಲಿ ಹೈಕೋರ್ಟ್ ನಿಂದ ಅರ್ಜಿ ವಜಾ

Pinterest LinkedIn Tumblr


ನವದೆಹಲಿ: ವಂದೇ ಮಾತರಂಗೆ ರಾಷ್ಟ್ರಗೀತೆಯ ಸಮಾನ ಸ್ಥಾನಮಾನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

ವಂದೇ ಮಾತರಂಗೆ ರಾಷ್ಟ್ರಗೀತೆಯಾದ ಜನಗಣ ಮನಕ್ಕೆ ಸಮಾನವಾದ ಮನ್ನಣೆ ನೀಡಿ ಸೂಕ್ತ ಗೌರವ ನೀಡಬೇಕೆಂದು ಕೋರಿ ಬಿಜೆಪಿ ಮುಖಂಡ, ವಕೀಲ ಅಶ್ವಿನಿ ಕುಮಾರ್ ಪಾಂಡೇ ಉಪಾಧ್ಯಾಯ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಜನಗಣ ಮನ ರಾಷ್ಟ್ರಗೀತೆಯಷ್ಟೇ ಬಂಕೀಮ್ ಚಂದ್ರ ಚಟರ್ಜಿಯವರು ಬರೆದಿರುವ ವಂದೇ ಮಾತರಂಗೂ ಸಮಾನ ಸ್ಥಾನಮಾನ ನೀಡುವ ನಿಯಮಾವಳಿ ರೂಪಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು.

ಅಲ್ಲದೇ ಎಲ್ಲಾ ಶಾಲೆಗಳಲ್ಲಿಯೂ ವಂದೇ ಮಾತರಂ ಮತ್ತು ಜನಗಣ ಮನ ಹಾಡಲು ಕೇಂದ್ರ ಸರಕಾರ ನಿರ್ದೇಶನ ನೀಡುವಂತೆ ಸೂಚನೆ ನೀಡಬೇಕೆಂದು ಅರ್ಜಿಯಲ್ಲಿ ಉಪಾಧ್ಯಾಯ ಉಲ್ಲೇಖಿಸಿದ್ದರು ಎಂದು ವರದಿ ತಿಳಿಸಿದೆ.

Comments are closed.