ಇನ್ನೇನು ಶುಕ್ರವಾರ ಬಿಎಸ್ವೈ ಅಧಿಕಾರದ ಗದ್ದುಗೆ ಏರಿದ್ರು ಅಂತ ಬಿಜೆಪಿ ಪಾಳಯ ಸಂಭ್ರಮದಲ್ಲಿರುವಾಗಲೇ ರಾಜ್ಯ ಬಿಜೆಪಿಗೆ ಹೈಕಮಾಂಡ್ ಮೂಗುದಾರ ಹಾಕಿದೆ. ಹೌದು ರಾಜ್ಯ ಬಿಜೆಪಿಕಲಿಗಳ ಅತಿವೇಗಕ್ಕೆ ಬ್ರೇಕ್ ಹಾಕಿರುವ ಹೈಕಮಾಂಡ್ ಮತ್ತು ಆರ್ಎಸ್ಎಸ್ ಒಂದಷ್ಟು ದಿನ ಕಾದು ನೋಡುವ ತಂತ್ರ ಅನುಸರಿಸಲು ಚಿಂತನೆ ನಡೆಸಿದೆ.
ಹೌದು ಸರ್ಕಾರ ರಚನೆಯ ಆತುರದಲ್ಲಿದ್ದ ಬಿಜೆಪಿಗೆ ಹೈಕಮಾಂಡ್ ಹಾಗೂ ಆರ್ಎಸ್ಎಸ್ ಬುದ್ಧಿ ಹೇಳಿದ್ದು, ಅತೃಪ್ತ ಶಾಸಕರ ರಾಜೀನಾಮೆ ವಿಚಾರ ತೀರ್ಮಾನವಾಗುವರೆಗೂ ಕಾದು ನೋಡುವ ತಂತ್ರ ಅನುಸರಿಸಲು ಮುಂದಾಗಿದೆ. ಹೀಗಾಗಿ ಬಿಜೆಪಿಯ ಶಾಸಕಾಂಗ ಸಭೆ, ರಾಜ್ಯಪಾಲರ ಭೇಟಿಯನ್ನು ಬಿಎಸ್ವೈ ಮುಂದೂಡಿದ್ದಾರೆ.
ಸಂಜೆ ದೆಹಲಿಯಲ್ಲಿ ನಡೆಯಲಿರುವ ಸಂಸದೀಯ ಮಂಡಳಿ ಸಭೆಯಲ್ಲಿ ಹೈಕಮಾಂಡ್ ರಾಜ್ಯದಲ್ಲಿ ಅಧಿಕಾರ ಸ್ಥಾಪಿಸುವ ಕುರಿತು ಅಂತಿಮ ತೀರ್ಮಾನಕೈಗೊಳ್ಳಲಿದ್ದು, ಈ ಸಭೆ ಬಳಿಕ ರಾಜ್ಯಕ್ಕೆ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸಲಿದ್ದು ಬಳಿಕ ರಾಜ್ಯದ ಪ್ರಮುಖ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.
ರಾಜೀನಾಮೆ ಸಲ್ಲಿಸಿರುವ ಅತೃಪ್ತರ ಪ್ರಕರಣದಲ್ಲಿ ಸ್ಪೀಕರ್ ತಾಂತ್ರಿಕ ಕಾರಣಗಳನ್ನು ಒಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಅಡ್ಡಿಪಡಿಸೋ ಸಾಧ್ಯತೆ ಇದೆ. ಕಾಂಗ್ರೆಸ್ ಈ ತಂತ್ರದಿಂದ ಒಂದೊಮ್ಮೆ ಸರ್ಕಾರ ರಚಿಸಿದ್ರೂ ಬಿಜೆಪಿ ಮುಂದೆ ಮುಜುಗರಕ್ಕೊಳಗಾಗುವ ಸಾಧ್ಯತೆ ಇದೆ. ಹೀಗಾಗಿ ಮುಜುಗರ ತಪ್ಪಿಸಿಕೊಳ್ಳಲು ಕಾದು ನೋಡುವ ತಂತ್ರಕ್ಕೆ ಬಿಜೆಪಿ ಮನಸ್ಸು ಮಾಡಿದ್ದು, ಹೀಗಾಗಿ ಸಧ್ಯ ಬಿಎಸ್ವೈ ಪಟ್ಟಾಭಿಷೇಕಕ್ಕೆ ಸಧ್ಯ ಬಿದ್ದಂತಾಗಿದೆ.
Comments are closed.