ಲಖನೌ: ತನ್ನ ಮೂರು ತಿಂಗಳ ಹಸುಗೂಸಿಗೆ ಆರೋಗ್ಯ ಸರಿಯಿಲ್ಲದಿದ್ದರಿಂದ ನೊಂದ ತಾಯಿಯೊಬ್ಬಳು ಆಸ್ಪತ್ರೆಯ ನಾಲ್ಕನೇ ಮಹಡಿಯಿಂದಲೇ ಮಗುವನ್ನು ಕೆಳಗೆ ಎಸೆದಿರುವ ಘಟನೆ ಲಖನೌನಲ್ಲಿ ನಡೆದಿದೆ.
ಪತಿಯ ದೂರಿನ ಆಧಾರದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ. ಮಹಿಳೆಯ ಪತಿ ದೂರಿನಲ್ಲಿ ತಿಳಿಸಿರುವಂತೆ, ಆರೋಪಿ ಪತ್ನಿಯು ತನ್ನ ಮಗುವನ್ನು ಲಖನೌನ ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿಯ ಟ್ರಾಮಾ ಸೆಂಟರ್ ನಾಲ್ಕನೇ ಮಹಡಿಯಿಂದ ಕೆಳಗೆ ಎಸೆದಿದ್ದಾಳೆ.
ಪಿತ್ತಜನಕಾಂಗದ ಕಾಯಿಲೆ ಮತ್ತು ಕಾಮಾಲೆಗೆ ಮಗನಿಗೆ ನಿರಂತರ ವೈದ್ಯಕೀಯ ಚಿಕಿತ್ಸೆ ನೀಡಿದ್ದರಿಂದ ಅವರ ಪತ್ನಿ ತೊಂದರೆಗೀಡಾಗಿದ್ದರು. ಇದರಿಂದಾಗಿ ಮಗುವನ್ನು ಕೆಳಗೆ ಎಸೆದಿದ್ದು, ಸ್ಥಳದಲ್ಲೇ ಮೃತಪಟ್ಟಿದೆ.
ಈ ಕುರಿತು ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Comments are closed.