ರಾಷ್ಟ್ರೀಯ

ತ್ರಿವಳಿ ತಲಾಖ್​​​ ಹೊಸ ಮಸೂದೆ: ಕೇಂದ್ರ ಸಂಪುಟ ಅನುಮೋದನೆ

Pinterest LinkedIn Tumblr


ನವದೆಹಲಿ(ಜೂನ್​​.12): ತ್ರಿವಳಿ ತಲಾಖ್ ನಿಷೇಧಕ್ಕೆ ಸಂಬಂಧಿಸಿದಂತೆ ಹೊಸ ಮಸೂದೆ ಜಾರಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. 17ನೇ ಲೋಕಸಭೆಯ ಮೊದಲ ಮುಂಗಾರು ಅಧಿವೇಶನ ಜೂನ್​​ 17 ರಿಂದ ಆರಂಭವಾಗಲಿದೆ. ಈ ವೇಳೆ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ನಿಷೇಧದ ಕುರಿತಾದ ಹೊಸ ಮಸೂದೆಯನ್ನು ಮಂಡಿಸಲಿದೆ.

ಕೇಂದ್ರ ಸರ್ಕಾರ ಈ ಹಿಂದೆಯೇ ತ್ರಿವಳಿ ತಲಾಖ್​​ ನಿಷೇಧದ ಹೊಸ ಮಸೂದೆ ಜಾರಿಗೆ ತರಬೇಕಿತ್ತು. ಈ ಮುನ್ನವೇ 16ನೇ ಲೋಕಸಭೆ ಅವಧಿ ಮುಕ್ತಾಯ ಮತ್ತು ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ಸಿಗದ ಕಾರಣ ಅದು ಮಂಡನೆಯಾಗಿರಲಿಲ್ಲ.

16ನೇ ಲೋಕಸಭೆಯಲ್ಲಿ ಅನುಮೋದನೆ ಪಡೆದ ಬಳಿಕ ತ್ರಿವಳಿ ತಲಾಖ್ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗಿತ್ತು. ಆದರೆ, ಮಸೂದೆಯನ್ನು ಸೆಲೆಕ್ಟ್ ಕಮಿಟಿಯ ಪರಿಶೀಲನೆಗೆ ಕೊಡಬೇಕೆಂದು ವಿಪಕ್ಷಗಳು ಆಗ್ರಹ ಮಾಡಿದ್ದವು. ಬಳಿಕ ರಾಜ್ಯಸಭೆಯಲ್ಲಿ ಕೂಡ ವಿಪಕ್ಷಗಳ ಗದ್ದಲದ ನುಡವೇ ಇತ್ಯರ್ಥವಾಗದೇ ಹೋದರು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು.

ತ್ರಿವಳಿ ತಲಾಖ್​​ನಂತಹ ಅಮಾನವೀಯ ವಿಚಾರಗಳ ಕಡೆ ತುರ್ತಾಗಿ ಗಮನ ಹರಿಸಬೇಕಾಗುತ್ತದೆ. ಈ ಮಸೂದೆಯನ್ನು ಸೆಲೆಕ್ಟ್ ಕಮಿಟಿಯ ಪರಿಶೀಲನೆಗೆ ಕಳುಹಿಸುವ ಅಗತ್ಯವಿಲ್ಲ. ತ್ರಿವಳಿ ತಲಾಖ್ ವಿಚಾರದಲ್ಲಿ ಇಬ್ಬರು ಸುಪ್ರೀಂಕೋರ್ಟ್ ನ್ಯಾಯಾಧೀಶರು ತಮ್ ವಿಶೇಷಾಧಿಕಾರ ಬಳಸಿ ಆರು ತಿಂಗಳ ಕಾಲ ಈ ಕಾನೂನನ್ನು ರದ್ದುಗೊಳಿಸಿದ್ದಾರೆ. ಕೆಲ ಜನರು ನ್ಯಾಯಾಲಯದ ತೀರ್ಪನ್ನು ಮುರಿಯುವ ಕೆಲಸ ಮಾಡುತ್ತಿದ್ದಾರೆ. ಈ ಅಸಾಂವಿಧಾನಿಕ ಆಚರಣೆಯನ್ನು ನಿಲ್ಲಿಸುವ ಹೊಣೆಗಾರಿಕೆ ರಾಜ್ಯಸಭೆಗೆ ಸಿಕ್ಕಿದೆ ಎಂದು ಅಂದಿನ ಕೇಂದ್ರ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದರು.

ಮುಸ್ಲಿಮರ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಆ ಸಮುದಾಯದಲ್ಲಿ ತ್ರಿವಳಿ ತಲಾಖ್ ಅಸ್ತಿತ್ವದಲ್ಲಿದೆ. ಇಲ್ಲಿ ಸತತವಾಗಿ ಮೂರು ಬಾರಿ ತಲಾಖ್ ಎಂದು ಉಚ್ಚರಿಸಿ ವಿಚ್ಛೇದನ ಪಡೆಯುವ ಅಕ್ರಮ ಪದ್ಧತಿಯೂ ರೂಢಿಯಲ್ಲಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ತ್ರಿವಳಿ ತಲಾಖ್ ಕಾನೂನನ್ನು ರದ್ದುಪಡಿಸಬೇಕೆಂಬ ಕೂಗು ಸಾಕಷ್ಟು ಕೇಳಿಬರುತ್ತಿತ್ತು.

ಸುಪ್ರೀಂಕೋರ್ಟ್ ಕೂಡ ಕೆಲ ತಿಂಗಳ ಹಿಂದೆ ತ್ರಿವಳಿ ಕಾನೂನಿನ ವಿರುದ್ಧ ತೀರ್ಪು ನೀಡಿತ್ತು. ಬಳಿಕ, ಕೇಂದ್ರ ಸರಕಾರವು ತ್ರಿವಳಿ ತಲಾಖ್ ಕಾನೂನು ರದ್ದುಗೊಳಿಸಲು ಮಸೂದೆ ರೂಪಿಸಿ ಲೋಕಸಭೆಯಲ್ಲಿ ಮಂಡನೆ ಮಾಡಿ ಅನುಮೋದನೆಯನ್ನೂ ಪಡೆಯಿತು. ಈ ಬೆನ್ನಲ್ಲೇ ಈ ಮಸೂದೆಯು ರಾಜ್ಯಸಭೆಯ ಪರಿಶೀಲಿಸಲಾಯ್ತು. ನಂತರ ರಾಜ್ಯಸಭೆಯಲ್ಲಿ ಅಂಗೀಕಾರವಾಗಿ ರಾಷ್ಟ್ರಪತಿಗಳ ಅಂಕಿತದೊಂದಿಗೆ ಮಸೂದೆಯು ಕಾನೂನಾಗಿ ಬಂದಿದೆ. ಈಗ ತ್ರಿವಳಿ ತಲಾಖ್ ಆಚರಣೆಯು ಅಧಿಕೃತವಾಗಿ ನಿಷೇಧಗೊಳ್ಳುತ್ತದೆ. ಇದನ್ನು ಪ್ರಶ್ನಿಸಿ ಕೆಲ ಮುಸ್ಲಿಂ ಸಂಘಟನೆಗಳು ಈಗಾಗಲೇ ಸುಪ್ರೀಂಕೋರ್ಟ್​​ನಲ್ಲಿ ಪ್ರಶ್ನಿಸಿ ಹೋರಾಟ ಮಾಡುತ್ತಿವೆ.

Comments are closed.