ರಾಷ್ಟ್ರೀಯ

ದೆಹಲಿ ಬಿಜೆಪಿ ವೆಬ್​ಸೈಟ್​ನಲ್ಲಿ ಬೀಫ್ ಖಾದ್ಯಗಳ ಪಟ್ಟಿ..!

Pinterest LinkedIn Tumblr


ನವದೆಹಲಿ : ದೆಹಲಿ ಬಿಜೆಪಿ ಘಟಕದ ಅಧಿಕೃತ ವೆಬ್​ಸೈಟ್ ಹ್ಯಾಕ್ ಮಾಡಿರುವ ಘಟನೆ ನಡೆದಿದೆ. ದಿಲ್ಲಿ ಬಿಜೆಪಿ ಆರ್ಗನೈಸೇಷನ್ (delhi.bjp.org)​ವೆಬ್​ಸೈಟ್ ಅನ್ನು ಹ್ಯಾಕ್​ ಮಾಡಿರುವ ಕಿಡಿಗೇಡಿಗಳ ತಂಡವು ಪ್ರಮುಖ ಮಾಹಿತಿ ವಿಭಾಗಗಳ ಹೆಸರುಗಳನ್ನು ಬದಲಿಸಿದ್ದಾರೆ. ಹ್ಯಾಕರುಗಳು ಬಿಜೆಪಿ ಎಂದಿರುವ ಜಾಗದಲ್ಲಿ ಬೀಫ್ ಎಂದು ನಮೂದಿಸಿ ಒಂದಷ್ಟು ಖಾದ್ಯಗಳ ಮೆನುವನ್ನು ನೀಡಿದ್ದಾರೆ.

ಹೋಮ್ ಪೇಜ್​ನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದ ತಂಡವು, ಇತರೆ ವಿಭಾಗಗಳ ಮೇಲೆ ಕಣ್ಣಿಟ್ಟಿದ್ದಾರೆ. ಇಲ್ಲಿ ಬೀಫ್ ಹಿಸ್ಟರಿ, ಬೀಫ್ ಫ್ರೈ, ಬೀಫ್ ಕೀಮಾ ಸೇರಿದಂತೆ ಹಲವು ಭಕ್ಷ್ಯಗಳ ಹೆಸರುಗಳನ್ನು ನಮೂದಿಸಲಾಗಿದೆ. ಅಷ್ಟೇ ಅಲ್ಲದೆ ಬೀಫ್​ ಪಾಕ ವಿಧಾನಗಳ ವಿಡಿಯೋಗಳನ್ನು ಅಪ್​ಲೋಡ್ ಮಾಡಿದ್ದಾರೆ.

ಇಂದು ಎರಡನೇ ಬಾರಿ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದು, ಇದರ ಬೆನ್ನಲ್ಲೇ ಬಿಜೆಪಿ ವೆಬ್​ಸೈಟ್ ಮೇಲೆ ದಾಳಿ ಮಾಡಲಾಗಿದೆ. ‘Shadow_V1P3R’ ಹೆಸರಿನ ತಂಡವೊಂದು ಹ್ಯಾಕಿಂಗ್ ನಡೆಸಿದ್ದು, ಆದರೆ ಎಲ್ಲಿಂದ ಹ್ಯಾಕಿಂಗ್ ಮಾಡಲಾಗಿದೆ ಎಂಬುದರ ಮಾಹಿತಿ ತಿಳಿದು ಬಂದಿಲ್ಲ.

ಈ ಹಿಂದೆ ಕೂಡ ಬಿಜೆಪಿ ಅಧಿಕೃತ ವೆಬ್‌ಸೈಟ್‌ ಹ್ಯಾಕ್ ಮಾಡಲಾಗಿತ್ತು. ಕಳೆದ ಬಾರಿ ಹ್ಯಾಕ್ ಮಾಡಿದ ಬಿಜೆಪಿ ವೆಬ್​ಸೈಟ್​ನಲ್ಲಿ ‘ವಿ ವಿಲ್ ಬ್ಯಾಕ್​ ಸೂನ್​ (ನಾವು ಶೀಘ್ರದಲ್ಲೇ ಮತ್ತೆ ನಿಮ್ಮನ್ನು ಸಂಪರ್ಕಿಸುತ್ತೇವೆ)’ ಎಂಬ ಮೆಸೇಜ್​ ಹಾಕಿದ್ದರು. ಅದರ ಸ್ಕ್ರೀನ್​ಶಾಟ್​ ತೆಗೆದು ಕಾಂಗ್ರೆಸ್​ ಟ್ವೀಟ್​ ಮಾಡಿ ನಿಮಗೇನಾದರೂ ಬ್ಯಾಕಪ್ ಬೇಕಿದ್ದರೆ ನಾವು ಸಹಾಯ ಮಾಡುತ್ತೇವೆ ಎಂದು ಬಿಜೆಪಿಯ ಕಾಲೆದಿತ್ತು.

Comments are closed.