ರಾಷ್ಟ್ರೀಯ

ಕುಟುಂಬದ 9 ಜನರೇ ತನಗೆ ಮತ ಹಾಕಿಲ್ಲವೆಂದು ಕಣ್ಣೀರು ಹಾಕಿದ ಪಕ್ಷೇತರ ಅಭ್ಯರ್ಥಿ

Pinterest LinkedIn Tumblr


ಹೊಸದಿಲ್ಲಿ: 17ನೇ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಪಂಜಾಬ್‌ನ ಪಕ್ಷೇತರ ಅಭ್ಯರ್ಥಿಯೊಬ್ಬರು ಕೇವಲ 5 ಮತಗಳನ್ನು ಪಡೆದ ಬಳಿಕ ಕಣ್ಣೀರು ಸುರಿಸಿದ್ದಾರೆ.

ಅಷ್ಟಕ್ಕೂ ಜಲಂಧರ್ ಕ್ಷೇತ್ರದ ಅಭ್ಯರ್ಥಿ ಕಣ್ಣೀರು ಸುರಿಸಿಅಷ್ಟಕ್ಕೂರುವುದಕ್ಕೆ ಕಾರಣವೇನು ಗೊತ್ತಾ?…

ಪಕ್ಷೇತರ ಅಭ್ಯರ್ಥಿ ಕಣ್ಣೀರು ಸುರಿಸಿದ್ದು, ಅವರು ಪಡೆದ ಕೇವಲ 5 ಮತಗಳಿಂದ ಅಲ್ವಂತೆ. ಅವರ ಮನೆಯಲ್ಲಿಯೇ 9 ಜನರಿದ್ದು, ಅವರೆಲ್ಲ ಮತ ನೀಡಿಲ್ಲ ಎಂದು ಬೇಸರದಿಂದ ಕಣ್ಣೀರು ಸುರಿಸಿದ್ದಾರಂತೆ.

ಫಲಿತಾಂಶದ ಬಳಿಕ ತನ್ನ ಕುಟುಂಬಸ್ಥರ ವಿರುದ್ಧ ಆರೋಪ ಮಾಡುತ್ತಲೇ ಕಣ್ಣೀರು ಒರೆಸಿಕೊಂಡ ಅವರು, ಇವಿಎಂ ಮೇಲೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.

ದೇಶದ 542 ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು, ಬಿಜೆಪಿ ಭರ್ಜರಿ ಬಹುಮತದೊಂದಿಗೆ ಸತತ ಎರಡನೇ ಬಾರಿ ಅಧಿಕಾರಕ್ಕೇರಲು ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ನೇತೃತ್ವದಲ್ಲಿ ಭಾರೀ ಜನಾದೇಶ ಪಡೆದ ಬಿಜೆಪಿ ನೇತೃತ್ವದ ಎನ್‌ಡಿಎ ಹೊಸ ಸರಕಾರ ರಚನೆಗೆ ಸಜ್ಜಾಗುತ್ತಿದೆ. ಪ್ರಧಾನಿ ಮೋದಿ ಅವರಿಗೆ ವಿಶ್ವದ ನಾಯಕರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

Comments are closed.