ರಾಷ್ಟ್ರೀಯ

ಯುವಕನ ಮರ್ಮಾಂಗ ಕತ್ತರಿಸಿದ ಮೂವರು ಮಂಗಳಮುಖಿಯರು!

Pinterest LinkedIn Tumblr


ಲಕ್ನೋ: ಮೂವರು ಮಂಗಳಮುಖಿಯರು ಸೇರಿ ಯುವಕನ ಮರ್ಮಾಂಗ ಕತ್ತರಿಸಿದ ಘಟನೆ ಉತ್ತರ ಪ್ರದೇಶದ ಶಾಹಜಹಾನ್‍ಪುರದಲ್ಲಿ ನಡೆದಿದೆ.

20 ವರ್ಷದ ಯುವಕ ಮದುವೆ ಮನೆಗೆ ಹೋಗಿ ಅಲ್ಲಿ ಡ್ಯಾನ್ಸ್ ಮಾಡಿದ್ದನು. ಇದು ಮಂಗಳಮುಖಿಯರಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು ಯುವಕನ ಮರ್ಮಾಂಗವನ್ನೇ ಕತ್ತರಿಸಿದ್ದಾರೆ. ಈ ಹಿಂದೆ ಯುವಕನನ್ನು ಮಂಗಳಮುಖಿಯಂತೆ ಮಾಡಲು ಮೂವರು ಪ್ರಯತ್ನಿಸಿದ್ದರು. ಆ ಬಳಿಕ ಯುವಕ ಮಂಗಳಮುಖಿಯರಿಂದ ದೂರವಾಗಿದ್ದನು.

ಈ ಘಟನೆ ನಡೆಯುವ ಹಿಂದಿನ ದಿನ ಮಂಗಳಮುಖಿಯರು ಫರೂಕಬಾದ್‍ನಲ್ಲಿ ಇದ್ದ ಯುವಕನ ಮನೆಗೆ ಹೋಗಿದ್ದಾರೆ. ಮದುವೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಮಂಗಳಮುಖಿಯರು ಯುವಕನನ್ನು ಕೊಠಡಿವೊಂದರಲ್ಲಿ ಕೂಡಿ ಹಾಕಿದ್ದಾರೆ. ಕೂಡಿ ಹಾಕಿದಲ್ಲದೇ ಯುವಕನ ಮೇಲೆ ಹಲ್ಲೆ ನಡೆಸಿ ಮರ್ಮಾಂಗವನ್ನು ಕತ್ತರಿಸಿದ್ದಾರೆ.

ಮಂಗಳಮುಖಿಯರು ಯುವಕನನ್ನು 10 ದಿನ ಕೊಠಡಿಯಲ್ಲಿ ಕೂಡಿ ಹಾಕಿ, ರೂಮಿನ ಹೊರಗೆ ಮಂಗಳಮುಖಿಯರು ಕಾದು ನಿಂತಿದ್ದರು. ಸಮಯ ಸಿಕ್ಕಿದ ತಕ್ಷಣ ಯುವಕ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಯುವಕ ರಾತ್ರಿ ತನ್ನ ಮನೆಗೆ ತಲುಪಿ ಪೋಷಕರ ಜೊತೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾನೆ.

ಯುವಕ ದೂರು ನೀಡಿದ ಬಳಿಕ ಪೊಲೀಸರು ಆತನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕಳುಹಿಸಿದ್ದರು. ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Comments are closed.