ರಾಷ್ಟ್ರೀಯ

ಕಾಂಗ್ರೆಸ್ಸಿನವರು ನನ್ನನ್ನು ರಾವಣ, ದಾವೂದ್​​, ಹುಚ್ಚು ನಾಯಿ ಎನ್ನುತ್ತಾರೆ: ಮೋದಿ

Pinterest LinkedIn Tumblr


ನವದೆಹಲಿ: ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್​​ ವಿರುದ್ಧ ಗಂಭೀರ ಆರೋಪ ಮಾಡಿದರು. “ಕಾಂಗ್ರೆಸ್​​ನವರು ನನ್ನನ್ನು ಮಂಗ, ಹುಚ್ಚು ನಾಯಿ, ಕೊಳಚೆ ನೀರಿನ ಹುಳ, ಭಸಾಸ್ಮುರ ಹೀಗೆ ಹಲವು ರೀತಿ ಕರೆದಿದ್ದರು. ಈ ಪಕ್ಷದ ಕೆಲಸವೇ ನಿಘಂಟುವಿನಲ್ಲಿ ಇರುವ ತಮ್ಮ ಪ್ರೀತಿಯ ಕೆಟ್ಟ ಪದಗಳನ್ನು ಹುಡುಕಿ ಬಳಸುವುದು” ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು. ರಾಜೀವ್ ಗಾಂಧಿ ಅವರನ್ನು ಭ್ರಷ್ಟಾಚಾರಿ ನಂಬರ್ ಒನ್ ಎಂದು ಕರೆದ ತಮ್ಮ ವಿರುದ್ಧ ವ್ಯಕ್ತವಾದ ಟೀಕೆಗಗಳಿಗೆ ಪ್ರಧಾನಿ ಮೋದಿ ಅವರು ಉದಾಹರಣೆಗಳ ಸಮೇತ ಈ ರೀತಿ ತಿರುಗೇಟು ನೀಡಿದರು.

ಇಂದು ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದರು. ಇಲ್ಲಿನ ಸಾರ್ವಜನಿಕರನ್ನು ಉದ್ದೇಶಿಸಿ ಮಾತಾಡಿದ ಪ್ರಧಾನಿ, ಕಾಂಗ್ರೆಸ್​​ ನನ್ನನ್ನು ಕೆಟ್ಟ ಪದಗಳಿಂದ ನಿಂದಿಸುತ್ತದೆ.. ಎಲ್ಲಿಯೇ ಕಾರ್ಯಕ್ರಮ ನಡೆದರೂ ನನ್ನನ್ನೇ ಟಾರ್ಗೆಟ್​​ ಮಾಡಿ ಮಾತಾಡುತ್ತಾರೆ. ನಿಘಂಟುವಿನಲ್ಲಿ ಇರುವ ತಮ್ಮ ಪ್ರೀತಿಯ ಪದಗಳನ್ನು ಹುಡುಕಿ ಬೈಯುತ್ತಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ಸಿನ ನಾಯಕನೋರ್ವ ನನ್ನನ್ನು ಗಂದೀ ನಾಲೀ ಕಾ ಕೀಡಾ (ಕೊಳಚೆ ನೀರಿನ ಹುಳು) ಎಂದಿದ್ದರು. ಮತ್ತೋರ್ವ ಹುಚ್ಚು ನಾಯಿ ಎಂದರೇ, ಇನ್ನೂ ಹಲವರು ಭಸ್ಮಾಸುರ ಎಂದರು. ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಕಾಂಗ್ರೆಸ್ ಇನ್ನೊಬ್ಬ ನಾಯಕ ನನ್ನನ್ನು ಮಂಗಾ ಎಂದು ಕರೆದಿದ್ದ. ಹಾಗೆಯೇ ನನ್ನನ್ನು ದಾವೂದ್ ಇಬ್ರಾಹಿಂಗೆ ಕೂಡ ಹೋಲಿಕೆ ಮಾಡಿದರು ಎಂದು ಕುಟುಕಿದ್ದಾರೆ.

ನಾನು ಕಾಂಗ್ರೆಸ್​​ ಕುಟುಂಬ ರಾಜಕಾರಣವನ್ನು ಪ್ರಶ್ನೆ ಮಾಡಿದ್ದೇ. ಇಲ್ಲಿನ ನಡೆಯುತ್ತಿರುವ ಭ್ರಷ್ಟಚಾರಕ್ಕೆ ಅಂತ್ಯವಾಡಿದೆ. ಹಾಗಾಗಿ ನನ್ನನ್ನು ವೈಯಕ್ತಿಕವಾಗಿ ನಿಂದಿಸಲಾಗುತ್ತಿದೆ. ಕೊನೆಗೂ ನನ್ನ ಅಪ್ಪ ಮತ್ತು ಅಮ್ಮನನ್ನು ಕೂಡ ಬಿಡದೇ ಅಣಕಿಸಿದ್ದಾರೆ. ಇವರ ನೀಚ ರಾಜಕಾರಣ ಕೇಳಿದ್ದಕ್ಕೆ ಇಷ್ಟೆಲ್ಲಾ ಕೇಳಬೇಕಾಯ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್​​ ಪ್ರೀತಿಯ ಮುಖವಾಡ ಧರಿಸಿದೆ. ನನ್ನನ್ನು ಹಿಟ್ಲರ್​​​, ದಾವೂದ್​​ ಇಬ್ರಾಹಿಂ, ಮುಸೋಲಿನ್​​ಗೆ ಹೋಲಿಕೆ ಮಾಡಲಾಗುತ್ತಿದೆ. ಚೇಳು, ರೇಬೀಸ್ ಬಂದ ನಾಯಿ, ಹಾವು, ವಿಷ ಕಕ್ಕುವ ವ್ಯಕ್ತಿ, ವೈರಸ್, ಇಲಿ ಇತ್ಯಾದಿ ಹೇಳಿ ನನ್ನನ್ನು ಜರೆದಿದ್ದಾರೆ. ದೇಶಕ್ಕಾಗಿ ಎಷ್ಟು ಕಷ್ಟಗಳನ್ನು ಬೇಕಾದರೂ ಅನುಭವಿಸಲು ಸಿದ್ದನಿದ್ದೇನೆ ಎಂದು ಮೋದಿ ಹೇಳಿದರು.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು, ರಾಜೀವ್​​ ಗಾಂಧಿ ಬದುಕು ಭ್ರಷ್ಟಾಚಾರಿ ನಂಬರ್​​ 1 ಹಣೆಪಟ್ಟಿಯೊಂದಿಗೆ ಅಂತ್ಯವಾಯಿತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯಿಸಿದ್ದ ರಾಹುಲ್​​, ನಿಮ್ಮ ಬಗ್ಗೆ ನನ್ನ ಹೃದಯದಲ್ಲಿ ಮಾತ್ರ ಮಾತ್ರ ಇದೆ. ಪ್ರೀತಿಯ ಅಪ್ಪುಗೆ ಎನ್ನುವ ಮೂಲಕ ಪ್ರಧಾನಿ ಮೋದಿಯವರಿಗೆ ತಪರಾಕಿ ಬಾರಿಸಿದರು.

Comments are closed.