ಕರ್ನಾಟಕ

ನನ್ನ ಪುತ್ರಿ ಪಿಯುಸಿಯಲ್ಲಿ ಫೇಲ್ ಆಗಲು ಕಾಂಗ್ರೆಸ್ಸಿಗರೇ ಕಾರಣ

Pinterest LinkedIn Tumblr


ಕಲಬುರಗಿ: ಕಲಬುರಗಿಯ ಚಿಂಚೋಳಿಯಲ್ಲಿ ಮಾತನಾಡಿದ ಡಾ.ಉಮೇಶ್ ಜಾಧವ್, ನನ್ನ ಮಗಳು ಪಿಯುಸಿಯಲ್ಲಿ ಫೇಲಾಗಲು ಕಾಂಗ್ರೆಸ್ಸಿಗರೇ ಕಾರಣ ಎಂದು ಹೇಳಿದ್ದಾರೆ.

ಉಮೇಶ್ ಜಾಧವ್ 50 ಕೋಟಿಗೆ ಸೇಲ್ ಆಗಿದ್ದಾರೆಂದು ಕಾಂಗ್ರೆಸ್ಸಿಗರು ನನ್ನ ಮೇಲೆ ಆರೋಪ ಮಾಡಿದ್ದಕ್ಕೆ, ನನ್ನ ಮಗಳು ಮಾನಸಿಕವಾಗಿ ನೊಂದಿದ್ದಾಳೆ. ಈ ಕಾರಣಕ್ಕೆ ನನ್ನ ಮಗಳು ಪಿಯು ಪರೀಕ್ಷೆಯಲ್ಲಿ ಫೇಲ್ ಆಗಿದ್ದಾಳೆ. ನನ್ನ ಮಗಳು ಫೇಲ್ ಆಗಲು ಕಾರಣ ಕಾಂಗ್ರೆಸ್ಸಿಗರು ಎಂದು ಉಮೇಶ್ ಜಾಧವ್ ಆರೋಪಿಸಿದ್ದಾರೆ.

Comments are closed.