ಕರ್ನಾಟಕ

ರಮೇಶ್ ಜಾರಕಿಹೊಳಿ ‘ಆಪರೇಷನ್’ ಪ್ಲಾನ್ ವಿಫಲಕ್ಕೆ ಕಾರಣವೇನು?

Pinterest LinkedIn Tumblr


ರಮೇಶ್​ ಜಾರಕಿಹೊಳಿ, ಮತ್ತೆ ಮತ್ತೆ ಆಪರೇಷನ್​ಗೆ ಕೈ ಹಾಕುತ್ತಲೇ ಇರ್ತಾರೆ. ಲೋಕಸಭಾ ಚುನಾವಣೆಯ ಮತದಾನದ ಬಳಿಕ ಬಿಜೆಪಿ ಸೇರುವ ಮುನ್ಸೂಚನೆ ನೀಡಿದ್ದ ಅವರು, ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿಗೆ ಬಂದಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತಾರೆ ಅಂತಲೇ ಹೇಳಲಾಗಿತ್ತು. ಜೊತೆಗೆ ಕಾಂಗ್ರೆಸ್​ಅತೃಪ್ತರ ಬಣದ ಸಪೋರ್ಟ್​ ಪಡೆದು, ಸರ್ಕಾರ ಉರುಳಿಸುವ ಸಾಹಸಕ್ಕೆ ಕೈ ಹಾಕಿದರು. ಈ ಬಾರಿಯೂ ರಮೇಶ್​ ಜಾರಕಿಹೊಳಿಯ ಪ್ಲಾನ್ ವರ್ಕೌಟ್​ ಆಗಿಲ್ಲ. ಇವರು ಸಂಪರ್ಕಿಸಿದ್ದ ಅತೃಪ್ತರು ಕೂಡ ಇವರ ಮಾತಿಗೆ ಸೊಪ್ಪು ಹಾಕಿಲ್ಲ. ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಅಂತ ಗೋಕಾಕ್​ಗೆ ವಾಪಸ್ಸಾಗಿದ್ದಾರೆ.

ರಮೇಶ್​ ಜಾರಕಿಹೊಳಿ ಆಪರೇಷನ್​ ಕೈ ಬಿಟ್ಟು ವಾಪಸ್ಸಾಗಲು ಕಾಂಗ್ರೆಸ್​ನಲ್ಲಿ ನಡೀತಿರೋ ಬೆಳವಣಿಗೆಗಳು ಕೂಡ ಕಾರಣ ಎನ್ನಲಾಗ್ತಿದೆ. ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಅನ್ನೋ ಕೂಗು ಪ್ರಬಲವಾಗಿ ಕೇಳಿ ಬರ್ತಿದೆ. ಸಚಿವರು, ಶಾಸಕರು ಸಿದ್ದರಾಮಯ್ಯ ಮಂತ್ರ ಜಪಿಸ್ತಿದ್ದಾರೆ. ಜೊತೆಗೆ ಫ್ರೆಶ್​ ಎಲೆಕ್ಷನ್​ ಹೋಗೋಣ ಅನ್ನೋ ವಿಷಯ ಕೂಡ ಚರ್ಚೆಯಾಗ್ತಿದೆ. ಇದೆಲ್ಲದರ ಮಧ್ಯೆ ಏನೇ ಅತೃಪ್ತಿ ಇದ್ರೂ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಕೂಗಿನಲ್ಲಿ ಕರಗಿ ಹೋಗ್ತಿದೆ. ಇದರಿಂದಲೇ ರಮೇಶ್​ ಜಾರಕಿಹೊಳಿ ಆಪರೇಷನ್​ ಠುಸ್ಸಾಗಲು ಪ್ರಮುಖ ಕಾರಣ. ಇಷ್ಟೆಲ್ಲ ಬೆಳವಣಿಗೆಗಳಿಂದಲೂ ರಮೇಶ್ ಸ್ವಲ್ಪ ಸುಮ್ಮನಾಗಿದ್ದಾರೆ. ಕಾದು ನೋಡಿ ತೀರ್ಮಾನ ತೆಗೆದುಕೊಂಡಾಯ್ತು ಅಂತ ವಾಪಸ್ ಊರಿಗೆ ಮರಳಿದ್ದಾರೆ.

ಕಾಂಗ್ರೆಸ್-ಜೆಡಿಎಸ್​ ದೋಸ್ತಿ ಸರ್ಕಾರಕ್ಕೆ ಕಂಟಕವಾಗಿರುವ ರಮೇಶ್​ ಜಾರಕಿಹೊಳಿ, ಸದ್ಯ ಸೈಲೆಂಟ್​ ಆಗಿದ್ದಾರೆ. ಅತೃಪ್ತರ ಬಲ ಸಿಗಲಿಲ್ಲ ಅನ್ನೋ ಕೊರಗು ಕೂಡ ಇದೆ. ಎಲ್ಲವೂ ಲೋಕಸಭೆ ಎಲೆಕ್ಷನ್​ ರಿಸಲ್ಟ್​ ಬಂದ ನಂತರ ಕ್ಲಿಯರ್​ ಆಗಲಿದೆ. ಲೋಕಸಭೆ ಫಲಿತಾಂಶ ಮೈತ್ರಿ ಸರ್ಕಾರದ ಅಳಿವು ಉಳಿವನ್ನು ನಿರ್ಧರಿಸುತ್ತದೆ. ಜೊತೆ-ಜೊತೆಗೆ ಬಂಡಾಯಗಾರರ ಬಂಡಾಯಕ್ಕೂ ವೇದಿಕೆ ಆಗೋದು ನಿಶ್ಚಿತ.

Comments are closed.