ರಾಷ್ಟ್ರೀಯ

ತನಗೆ ಕಚ್ಚಿದ ಹಾವನ್ನು ಕಚ್ಚಿ ಸಾಯಿಸಿ ಬಳಿಕ ತಾನೂ ಸತ್ತ !

Pinterest LinkedIn Tumblr

ಮಹಿಸಗರ್: ತನಗೆ ಕಚ್ಚಿದ ಹಾವನ್ನು ತಾನೂ ಕಚ್ಚಿ ಸಾಯಿಸಿ 70 ವರ್ಷದ ವೃದ್ಧ ವ್ಯಕ್ತಿ ಮೃತಪಟ್ಟಿರುವ ವಿಲಕ್ಷಣ ಘಟನೆ ಗುಜರಾತ್ ನಲ್ಲಿ ನಡೆದಿದೆ.

ಗುಜರಾತ್ ನ ಮಹಿಸಗರ್ ನಲ್ಲಿದ್ದ ರೈತ ಪರ್ವತ್ ಗಾಲಾ ಬರಿಯಾ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿದೆ. ಇದರಿಂದ ಆಕ್ರೋಶಗೊಂಡ ರೈತ ಹಾವಿನ ಮೇಲೆ ಸೇಡು ತೀರಿಸಿಕೊಳ್ಳಲು ಅದನ್ನು ತಾನೂ ಕಚ್ಚಿದ್ದಾನೆ. ಹತ್ತಿರದಲ್ಲೇ ಇದ್ದ ಸಂಬಂಧಿಕರು ಈ ಘಟನೆಯನ್ನು ನೋಡಿ ಹಾವನ್ನು ಅಲ್ಲೇ ದಹನ ಮಾಡಿದ್ದಾರೆ. ಹಾವು ಕಚ್ಚಿದ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಬದುಕಿ ಉಳಿಯಲಿಲ್ಲ.

ತಕ್ಷಣದಲ್ಲೇ ಆ ರೈತನಿಗೆ ವೈದ್ಯಕೀಯ ಸೌಲಭ್ಯವೂ ಸಿಗಲಿಲ್ಲ. ಮೂರು ಆಸ್ಪತ್ರೆಗಳು ಅಲೆದರೂ ಸಹ ಸೂಕ್ತ ವೈದ್ಯಕೀಯ ಸೌಲಭ್ಯ ದೊರೆಯದೇ ಆತ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.

Comments are closed.