ರಾಷ್ಟ್ರೀಯ

ಜನರಿಲ್ಲದ ಶ್ರೀನಗರದ ದಾಲ್​ ನದಿ ಮೇಲೆ ನಿಂತು ಮೋದಿ ಕೈ ಬೀಸಿದ್ದು ಯಾರಿಗೆ?

Pinterest LinkedIn Tumblr


ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಶ್ರೀನಗರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಪೊಲೀಸ್​ ಮತ್ತು ರಕ್ಷಣಾ ಇಲಾಖೆ ಅವರಿಗೆ ಭಾರೀ ಬಿಗಿ ಭದ್ರತೆ ಕಲ್ಪಿಸಿತ್ತು. ಮೊಬೈಲ್​ ಮತ್ತು ಇಂಟರ್​ನೆಟ್​ ಸೇವೆಯನ್ನು ಕೂಡ ಪ್ರಧಾನಿ ಭೇಟಿ ಸಮಯದಲ್ಲಿ ಸ್ಥಗಿತಗೊಳಿಸಲಾಗಿತ್ತು.

ಪ್ರಧಾನಿ ಮೋದಿ ಅವರು ಜಮ್ಮು, ಶ್ರೀನಗರ ಮತ್ತು ಲೆಹ್​ಗೆ ಭೇಟಿ ನೀಡಿ, ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ತಮ್ಮ ಭೇಟಿಯ ವೇಳೆ ಶ್ರೀನಗರದ ಪ್ರಸಿದ್ಧ ದಾಲ್​ ಸರೋವರಕ್ಕೆ ತೆರಳಿದ್ದರು.

ನದಿಯ ಮೇಲೆ ಬೋಟ್​ನಲ್ಲಿ ಪ್ರಧಾನಿ ವಿಹರಿಸುತ್ತಿರುವ ವಿಡಿಯೋ ಒಂದನ್ನು ಬಿಜೆಪಿ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಪ್ರಕಟಿಸಿತ್ತು. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ಸಮಾವೇಶಗಳಲ್ಲಿ ಜನರತ್ತ ಕೈ ಬೀಸುವಂತೆ ಬೋಟ್​ ಮೇಲಿಂದಲೇ ತಮ್ಮ ಕೈಯನ್ನು ಬೀಸುತ್ತಿರುತ್ತಾರೆ. ಆದರೆ, ಆ ವಿಡಿಯೋದಲ್ಲಿ ಜನರು ಮಾತ್ರ ನಾಪತ್ತೆಯಾಗಿದ್ದಾರೆ!

ಈ ಸಣ್ಣ ವಿಡಿಯೋ ತುಣುಕಿನಲ್ಲಿ ಮೋದಿ ಅವರು ಯಾರಿಗೋ ಕೈ ಬೀಸುತ್ತಿರುತ್ತಾರೆ. ಆದರೆ, ಆ ವಿಡಿಯೋದಲ್ಲಿ ಮಾತ್ರ ಯಾರೊಬ್ಬರೂ ಕಾಣುವುದಿಲ್ಲ ಅಥವಾ ಈ ದೃಶ್ಯ ಬೇರೆ ಏನನ್ನಾದರೂ ಸಲಹೆ ಮಾಡುತ್ತಿದೆಯೇ ಎಂಬುದು ಗೊತ್ತಿಲ್ಲ.

ಈ ವಿಡಿಯೋ ಕಾಶ್ಮೀರಿಗಳನ್ನು ಗೊಂದಲಕ್ಕೆ ಈಡು ಮಾಡಿದೆ. ಏಕೆಂದರೆ ಮೋದಿ ಅವರ ಭೇಟಿ ವೇಳೆ ಆ ಪ್ರದೇಶದಲ್ಲಿ ಅತಿಯಾದ ಬಿಗಿ ಭದ್ರತೆ ಒದಗಿಸಲಾಗಿತ್ತು. ಅಲ್ಲಿ ಜನರು ಬರಲು ಯಾವುದೇ ಕಾರಣಕ್ಕೂ ಸಾಧ್ಯವೇ ಇರಲಿಲ್ಲ. ಆದರೂ ಮೋದಿ ಅವರು ಏಕೆ ಸಮಾವೇಶಗಳಲ್ಲಿ ಜನರತ್ತ ಕೈ ಬೀಸುವಂತೆ ಬೀಸಿದರು ಎಂಬುದೇ ತಿಳಿಯದಾಗಿದೆ.

ಈ ವಿಡಿಯೋ ಬಗ್ಗೆ ವ್ಯಂಗ್ಯವಾಡಿರುವ ಕಾಶ್ಮೀರದ ಮಾಜಿ ಸಿಎಂ ಒಮರ್​ ಅಬ್ದುಲ್ಲಾ ಅವರು, ಇದು ವಿಡಿಯೋ ಫ್ರೇಮ್​ನಲ್ಲಿ ಜನರನ್ನು ಸೆರೆಹಿಡಿಯಲು ಮರೆತ ಕ್ಯಾಮರಾಮನ್​ನ ತಪ್ಪು ಎಂದು ಟ್ವಿಟ್​ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್​ ಡೆಮಾಕ್ರಟಿಕ್​ ಪಕ್ಷದ ಅಧ್ಯಕ್ಷೆ ಮೆಹಬೂಬ್​ ಮಫ್ತಿ ಕೂಡ ಮೋದಿ ಅವರ ಈ ವಿಡಿಯೋ ಬಗ್ಗೆ ಟೀಕೆ ಮಾಡಿದ್ದಾರೆ.

Comments are closed.