ಕರ್ನಾಟಕ

ಸಿದ್ದರಾಮಯ್ಯ ಮನೆಯಲ್ಲಿ ಕಾಂಗ್ರೆಸ್​ ಸಚಿವರಿಗೆ ಡ್ರಿಂಕ್ಸ್ ಇಲ್ಲದೇ ಔತಣಕೂಟ!

Pinterest LinkedIn Tumblr


ಬೆಂಗಳೂರು: ಬಜೆಟ್​ ಅಧಿವೇಶನ ಆರಂಭಕ್ಕೂ ಒಂದು ದಿನದ ಮುಂಚೆ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ನಿವಾಸ ಕಾವೇರಿಯಲ್ಲಿ ಎಲ್ಲ ಸಚಿವರಿಗೂ ರಾತ್ರಿ ಔತಣಕೂಟ ಏರ್ಪಡಿಸಿದ್ದರು.

ಔತಣಕೂಟಕ್ಕೆ ಡಿಸಿಎಂ ಪರಮೇಶ್ವರ್ ಆಗಮಿಸುತ್ತಿದ್ದಂತೆ ಆಪರೇಶನ್ ಕಮಲ‌ ವಿಚಾರವಾಗಿ ಸಚಿವರು ಚರ್ಚೆ ಆರಂಭಿಸಿದರು. ಈ ಬಗ್ಗೆ ಮಾತನಾಡಿದ ಪರಮೇಶ್ವರ್, ಯಾವ ಆಪರೇಶನ್ನು ಇಲ್ಲ ಎಂದು ಹೇಳಿದರೆ, ಆಪರೇಶನ್ ಇದ್ರೆ ತಾನೇ ಎಂದು ಡಿಕೆಶಿ ಹೇಳಿದರು. ಯಡಿಯೂರಪ್ಪ ಭ್ರಮೆಲಿದ್ದಾರೆ, ಬಿಜೆಪಿ ಶೇಮ್​ ಲೆಸ್ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಇನ್ನು ಗಣೇಶ್ ಹಾಗೂ ಆನಂದ್ ಸಿಂಗ್ ಪ್ರಕರಣ ಸರ್ಕಾರಕ್ಕಿಂಲೂ ಪಕ್ಷದ ಮೇಲೆ ಹೆಚ್ಚು ಮುಜುಗರ ತಂದಿತ್ತು. ಬಿಜೆಪಿ ನಾಯಕರು ಇದನ್ನೇ ಪ್ರಮುಖವಾಗಿ ಸದನದಲ್ಲಿ ಪ್ರಸ್ತಾಪ ಮಾಡುತ್ತಾರೆ. ಸದನದಲ್ಲಿ ಇದಕ್ಕೆ ಉತ್ತರ ಕೊಡುವುದು ಸಹ ಅಷ್ಟು ಸುಲಭದ ಕೆಲಸವಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯ ಹಂಚಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಇಬ್ಬರು ಒಳ್ಳೆಯ ಸ್ನೇಹಿತರು. ಕೆಟ್ಟ ಘಳಿಗೆ ಎಂದರು. ಇದಕ್ಕೆ ಸಿದ್ದರಾಮಯ್ಯ ಅವರು ಕೆಟ್ಟ ಘಳಿಗೆ ಅಂತ ಸದನದಲ್ಲಿ ಸಮರ್ಥನೆ ಮಾಡಿಕೊಳ್ಳುವುದಕ್ಕೆ ಆಗುತ್ತಾ ಡಿಕೆಶಿ ಎಂದು ಪ್ರಶ್ನಿಸಿದರು.

ಸಚಿವರಾದ ಸತೀಶ ಜಾರಕಿಹೊಳಿ, ಕೆ ಜೆ ಜಾರ್ಜ್, ಜಯಮಾಲಾ , ರಾಜಶೇಖರ ಪಾಟೀಲ್, ಪರಮೇಶ್ವರ್ ನಾಯ್ಕ್, ಆರ್​.ಬಿ.ತಿಮ್ಮಾಪುರ, ಜಮೀರ್ ಅಹಮ್ಮದ್, ಸಿ ಎಸ್ ಶಿವಳ್ಳಿ, ಪುಟ್ಟರಂಗಶೆಟ್ಟಿ, ಇ ತುಕಾರಾಂ, ಎಂ.ಬಿ.ಪಾಟೀಲ್, ಕೃಷ್ಣ ಬೈರೇಗೌಡ, ಆರ್​.ಬಿ.ತಿಮ್ಮಾಪುರ ವೆಂಕಟರಮಣಪ್ಪ, ಶಿವಾನಂದ ಪಾಟೀಲ್, ಎಂಟಿಬಿ ನಾಗರಾಜ್​, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿ ಹಲವರು ಔತಣಕೂಟದಲ್ಲಿ ಪಾಲ್ಗೊಂಡಿದ್ದರು.

ವೆಜ್ – ನಾನ್ ವೆಜ್ ಮೆನು:

ಭೋಜನಕೂಟಕ್ಕೆ ಆಗಮಿಸಿದ ಸಚಿವರು ವೆಜ್​ ಹಾಗೂ ನಾನ್​ವೆಜ್​ನಲ್ಲಿ ಹಲವು ವಿಧದ ಆಹಾರ ಖಾದ್ಯಗಳನ್ನು ತಯಾರಿಸಲಾಗಿತ್ತು. ನಾನ್ ವೆಜ್ ಮಂತ್ರಿಗಳಿಗೆ ಮುದ್ದೆ, ಮಟನ್, ನಾಟಿಕೋಳಿ‌ ಸಾರು ಹಾಗೂ ಕಾಲ್ ಸೂಪ್, ಮೊಟ್ಟೆ, ಆಮ್ಲೇಟ್ ಜೊತೆಗೆ ಚಿಕನ್ ಮತ್ತು ಮಟನ್ ಸ್ಟಾಟರ್ಸ್.

ವೆಜ್ ಮಂತ್ರಿಗಳಿಗೆ ಕಲ್ಲಂಗಡಿ ಜ್ಯೂಸ್, ಗೋಬಿ ಮಂಚೂರಿ, ಮಸಾಲಾ ವಡೆ, ಕೋಸಂಬರಿ, ಮುದ್ದೆ, ಸೊಪ್ಪು ಸಾರು, ಚಪಾತಿ ಹಾಗೂ ವಿವಿಧ ಬಗೆಯ ಪಕೋಡಾ ತಯಾರಿಸಲಾಗಿತ್ತು.

ಸಿದ್ದು ಪಾರ್ಟಿಯಲ್ಲಿ ನೋ ಡ್ರಿಂಕ್ಸ್

ಗಣೇಶ ಹಾಗೂ ಆನಂದಸಿಂಗ್ ಗುದ್ದಾಟ ಪ್ರಕರಣಕ್ಕೆ ಬೆಚ್ಚಿಬಿದ್ದ ಸಿದ್ದರಾಮಯ್ಯ ತಾವು ಕರೆದ ಔತಣಕೂಟದಲ್ಲಿ ಮದ್ಯಪಾನ ನಿಷೇಧಿಸಿದ್ದರು. ಗಂಭೀರ ವಿಚಾರಗಳ ಬಗ್ಗೆ ಚರ್ಚೆ ಮಾಡುವಾಗ ಮದ್ಯಪಾನ ಮಾಡಬಾರದು ಎಂದು ಡ್ರಿಂಕ್ಸ್​ ಅನ್ನು ನಿಷೇಧಿಸಿದ್ದರು.

Comments are closed.