ರಾಷ್ಟ್ರೀಯ

ವೆಸ್ಟರ್ನ್‌ ಟಾಯ್ಲೆಟ್‌ ಬಳಕೆ ಗೊತ್ತಿಲ್ಲದೇ ರೈಲಿನ ಟಾಯ್ಲೆಟ್‌ನಲ್ಲಿ ಕಾಲು ಸಿಕ್ಕಿಸಿಕೊಂಡ ಮಹಿಳೆ!

Pinterest LinkedIn Tumblr


ಚೆನ್ನೈ: ಆಂಧ್ರಪ್ರದೇಶದ 40 ವರ್ಷದ ಮಹಿಳೆ ಭಾರತಮ್ಮ, ಚಾರ್ಮಿನಾರ್‌ ಎಕ್ಸ್‌ಪ್ರೆಸ್‌ ರೈಲಿನ ಟಾಯ್ಲೆಟ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಪರಿಣಾಮ ಚೆನ್ನೈನ ಸೆಂಟ್ರಲ್‌ ರೈಲ್ವೆ ನಿಲ್ದಾಣದಿಂದ 35 ನಿಮಿಷ ತಡವಾಗಿ ತನ್ನ ಪ್ರಯಾಣ ಆರಂಭಿಸಿತು.

ವೆಸ್ಟರ್ನ್‌ ಟಾಯ್ಲೆಟ್‌ ಬಳಕೆ ಮಾಡುವ ವಿಧಾನ ತಿಳಿಯದ ಭಾರತಮ್ಮ ಅವರ ಕಾಲು, ಶೌಚಾಲಯದ ಗುಂಡಿಯ ಒಳಗೆ ಸಿಕ್ಕಿ ಹಾಕಿಕೊಂಡಿದೆ.
ಚಾರ್ಮಿನಾರ್‌ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಬೇಕಿದ್ದ ಅವರು, ರೈಲು ಹೊರಡುವ ಮುನ್ನ ಶೌಚಾಲಯ ಬಳಕೆ ಮಾಡಿದ್ದಾರೆ. ಈ ವೇಳೆ ಅವರ ಕಾಲು ಸಿಕ್ಕಿಹಾಕಿಕೊಂಡಿದ್ದಾರೆ. ಸ್ವ ಪ್ರಯತ್ನ ಕೆಲಸ ಮಾಡದ ವೇಳೆ, ಸಹಾಯಕ್ಕಾಗಿ ಕೂಗಾಡಿದ್ದಾರೆ.

ಶೌಚಾಲಯದ ಬಳಿಕ ಧಾವಿಸಿದ ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾರತಮ್ಮ ರಕ್ಷಣೆಗೆ ಸತತ 1.30 ಗಂಟೆಗಳ ಕಾಲ ಪ್ರಯತ್ನಿಸಿದ್ದಾರೆ.
ವಿಷಯ ತಿಳಿದ ತಕ್ಷಣ ರೈಲ್ವೆ ನಿಯಂತ್ರಣ ಅಧಿಕಾರಿ ಹಾಗೂ ವೈದ್ಯಕೀಯ ವಿಭಾಗಕ್ಕೆ ಮಾಹಿತಿ ನೀಡಿದ್ದಾರೆ. ವೈದ್ಯಕೀಯ ವಿಭಾಗದ ಅಧಿಕಾರಿಗಳು ಭಾರತಮ್ಮ ಅವರ ಕಾಲನ್ನು ಹೊರತೆಗೆಯಲು ಸಾಕಷ್ಟು ಪ್ರಯತ್ನ ಪಟ್ಟರೂ ಸಫಲವಾಗಿಲ್ಲ. ಈ ವೇಳೆ ಸಿಬ್ಬಂದಿ ಶೌಚಾಲಯದ ಕಬ್ಬಿಣದ ಭಾಗವನ್ನೇ ಹೊರ ತೆಗೆದು, ಮಹಿಳೆಯನ್ನು ಬಂಧ ಮುಕ್ತಗೊಳಿಸಿದ್ದಾರೆ.

ವೈದ್ಯಕೀಯ ತಪಾಸಣೆ ಬಳಿಕ ಆಕೆಯನ್ನು ಅದೇ ರೈಲಿನಲ್ಲಿ ಪ್ರಯಾಣಿಸಲು ಅಧಿಕಾರಿಗಳು ಅನುವು ಮಾಡಿಕೊಟ್ಟಿದ್ದಾರೆ. ಘಟನೆ ರೈಲ್ವೆ ನಿಲ್ದಾಣದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ರೈಲು ಸುಮಾರು 35 ನಿಮಿಷ ತಡವಾಗಿ ಪ್ರಯಾಣ ಆರಂಭಿಸುವಂತಾಗಿದೆ.

Comments are closed.