ಮನೋರಂಜನೆ

ಬೆಂಗಾಲಿ ಹುಲಿಗಳನ್ನೇ ಕೇಂದ್ರ ಏಕೆ ಟಾರ್ಗೆಟ್ ಮಾಡುತ್ತಿದೆ?: ಶತೃಘ್ನ ಸಿನ್ಹಾ

Pinterest LinkedIn Tumblr


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟಾರ್ಗೆಟ್ ಮಾಡುವ ಮೂಲಕ ಬೆಂಕಿಯೊಂದಿಗೆ ಆಟವಾಡುತ್ತಿದ್ದಾರೆ ಎಂದು ಬಿಜೆಪಿ ಬಂಡಾಯ ನಾಯಕ ಶತೃಘ್ನ ಸಿನ್ಹಾ ಅವರು ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
ಸಿಬಿಐ ವಿಚಾರಕ್ಕೆ ಸಂಬಂಧಿಸಿದಂತೆ ದೀದಿ ಬೆಂಬಲಕ್ಕೆ ನಿಂತ ಶತೃಘ್ನ ಸಿನ್ಹಾ ಅವರು, ಕೇಂದ್ರ ಸರ್ಕಾರ ಬೆಂಗಾಲಿ ಹುಲಿಗಳನ್ನೇ ಏಕೆ ಟಾರ್ಗೆಟ್ ಮಾಡುತ್ತಿದೆ? ಎಂದು ಪ್ರಶ್ನಿಸಿದರು.

ಕೋಲ್ಕತಾ ಪೊಲೀಸ್ ಆಯುಕ್ತರನ್ನು ವಿಚಾರಣೆಗೆ ಒಳಪಡಿಸಲು ಬಂದ ಸಿಬಿಐ ನಿರ್ಧಾರ ಖಂಡಿಸಿ ಮಮತಾ ಬ್ಯಾನರ್ಜಿ ಧರಣಿ ನಡೆಸಿದ ಕೇಂದ್ರ ಸರ್ಕಾರ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿತು ಮತ್ತು ನೀವು ಹೇಳುವುದನ್ನು ಜನ ಒಪ್ಪಿಕೊಳ್ಳುವುದಿಲ್ಲ ಎಂದು ಸಿನ್ಹಾ ಹೇಳಿದ್ದಾರೆ.

ಸರ್ ಜಿ, ಏನು ನಡೆಯುತ್ತಿದೆ. ಅತಿ ಹೆಚ್ಚು ಟೀಕೆಗೊಳಗಾದ ಸರ್ಕಾರಿ ಸಂಸ್ಥೆಗಳ ಮೂಲಕ ಬೆಂಕಿಯೊಂದಿಗೆ ಏಕೆ ಆಟವಾಡುತ್ತಿದ್ದೀರಿ? ಅದು ಲೋಕಸಭೆ ಚುನಾವಣೆ ಹೊತ್ತಲ್ಲಿ ಎಂದು ಶತೃಘ್ನ ಸಿನ್ಹಾ ಅವರು ಟ್ವೀಟ್ ಮಾಡಿದ್ದಾರೆ.

Comments are closed.