ರಾಷ್ಟ್ರೀಯ

ಬಿಜೆಪಿ, ಎಐಎಡಿಎಂಕೆ ಮೈತ್ರಿ ಫೆ.10ರ ಬಳಿಕ ಘೋಷಣೆ?

Pinterest LinkedIn Tumblr


ಚೆನ್ನೈ: ಮುಂಬರುವ ಲೋಕಸಭೆ ಚುನಾವಣೆಗೆ ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವೆ ಮೈತ್ರಿ ಏರ್ಪಡುವುದು ಬಹುತೇಕ ಖಚಿತವಾಗಿದೆ.

ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರ ನಂಬಿಕಸ್ಥ ಸಚಿವರಾದ ಎಸ್‌.ಪಿ.ವೇಲುಮಣಿ ಮತ್ತು ಪಿ.ತಂಗಮಣಿ ಅವರು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಜತೆಗೆ ಸ್ಥಾನ ಹೊಂದಾಣಿಕೆ, ಪ್ರಚಾರದ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ತಮಿಳು ದುಭಾಷಿಯೊಬ್ಬರು ಮಾತುಕತೆಗೆ ನೆರವಾಗುತ್ತಿದ್ದಾರೆ ಎಂದು ಎಐಎಡಿಎಂಕೆ ಮೂಲಗಳು ತಿಳಿಸಿವೆ. ಪ್ರಾಥಮಿಕ ಹಂತದ ಮಾತುಕತೆ ನಡೆಯುತ್ತಿರುವುದು ನಿಜ ಎಂದು ಬಿಜೆಪಿ ಮೂಲಗಳೂ ಖಚಿತಪಡಿಸಿವೆ. ಫೆ.10ರ ಬಳಿಕ ಮೈತ್ರಿ ವಿಚಾರವನ್ನು ಉಭಯ ಪಕ್ಷಗಳು ಅಧಿಕೃತವಾಗಿ ಘೋಷಿಸುವ ನಿರೀಕ್ಷೆ ಇದೆ.

ಸದ್ಯದ ಮಾಹಿತಿ ಪ್ರಕಾರ, ರಾಜ್ಯದ 39 ಲೋಕಸಭಾ ಕ್ಷೇತ್ರಗಳ ಪೈಕಿ 24 ಕಡೆ ಸ್ಪರ್ಧಿಸಲು ಎಐಎಡಿಎಂಕೆ ಉತ್ಸುಕವಾಗಿದೆ. ಉಳಿದ 15 ಕ್ಷೇತ್ರಗಳನ್ನು ಬಿಜೆಪಿ, ರಾಮದಾಸ್‌ ಅವರ ಪಿಎಂಕೆ, ವಿಜಯಕಾಂತ್‌ ಅವರ ಡಿಎಂಡಿಕೆ, ಜಿ.ಕೆ.ವಾಸನ್‌ ಅವರ ತಮಿಳು ಮನಿಲಾ ಕಾಂಗ್ರೆಸ್‌ ಹಾಗೂ ಶಿಕ್ಷಣ ತಜ್ಞ ಟಿ.ಆರ್‌.ಪಚ್ಚಮುತ್ತು ಅವರ ಐಜೆಕೆಗೆ ಬಿಟ್ಟುಕೊಡಲು ಪಕ್ಷ ಮುಂದಾಗಿದೆ.

Comments are closed.