ರಾಷ್ಟ್ರೀಯ

107ರ ವೃದ್ಧನಿಗೆ ಕೃತಕ ಪೃಷ್ಠದ ಯಶಸ್ವಿ ಮೂಳೆ ಚಿಕಿತ್ಸೆ

Pinterest LinkedIn Tumblr


ಹೊಸದಿಲ್ಲಿ: ವಿಶ್ವದಲ್ಲೇ ಮೊದಲ ಬಾರಿಗೆ 107 ವರ್ಷದ ವೃದ್ಧರೋರ್ವರಿಗೆ ಪೃಷ್ಠದ ಮೂಳೆ ಶಸ್ತ್ರ ಚಿಕಿತ್ಸೆ ನಡೆಸುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ. ಈ ಸಾಧನೆ ಗಿನ್ನಿಸ್‌ ವಿಶ್ವದಾಖಲೆಯ ಪುಟ ಸೇರಿಸಲು ತಯಾರಿ ನಡೆಸಲಾಗಿದೆ.

ಗುರುಚರಣ್‌ ಸಿಂಗ್ ಸಂಧು ಎಂಬ ಶತಾಯುಷಿ ಈ ಹೆಮ್ಮೆಗೆ ಪಾತ್ರರಾದವರು. ಜ.17ರಂದು ಮನೆಯ ಬಾತ್‌ರೂಂನಲ್ಲಿ ಕಾಲು ಜಾರಿ ಬಿದ್ದ ಗುರುಚರಣ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಡ ಭಾಗದ ಪೃಷ್ಠದ ಮೂಳಗೆ ಪೆಟ್ಟಾಗಿರುವುದಾಗಿ ವೈದ್ಯರು ತಿಳಿಸಿದ್ದರು.

ಮಧುಮೇಹ, ರಕ್ತದೊತ್ತಡ ಇತ್ಯಾದಿ ಯಾವುದೇ ಸಮಸ್ಯೆಗಳಿರಲಿಲ್ಲ. ಅಷ್ಟು ಮಾತ್ರ ಅಲ್ಲ, ಅವರು ಯಾವುದೇ ಬಗೆಯ ಮದ್ದು ಮಾತ್ರೆಗಳನ್ನೂ ತೆಗೆದುಕೊಳ್ಳುವ ಅವಶ್ಯಕತೆ ಅವರಿಗಿರಲಿಲ್ಲ. ಈ ವಿಚಾರ ಕೇಳಿದ ವೈದ್ಯರು ಅಚ್ಚರಿಗೆ ಒಳಗಾಗಿದ್ದರು.

ಸಾಮಾನ್ಯವಾಗಿ ವಯಸ್ಸಾಗುತ್ತಾ ಎಲುಬುಗಳು ಶಕ್ತಿ ಕಳೆದುಕೊಳ್ಳುತ್ತವೆ. ಆದರೆ ಗುರುಚರಣ್‌ ಅವರ ಮೂಳೆಗಳು ಬಲಿಷ್ಠವಾಗಿದ್ದವು. ದುರ್ಬಲ ಮೂಳೆಗಳಿದ್ದಲ್ಲಿ, ಶಸ್ತ್ರಚಿಕಿತ್ಸೆ ವೇಳೆ ಹೃದಯಾಘಾತ ಉಂಟಾಗುವ ಸಾಧ್ಯತೆಗಳಿರುತ್ತದೆ ಎಂದು ವೈದ್ಯರು ತಿಳಿಸಿದ್ದರು. 40 ನಿಮಿಷ ಶಸ್ತ್ರಚಿಕಿತ್ಸೆ ನಡೆಸಿ, ಅವರಿಗೆ ಕೃತಕ ಪೃಷ್ಠದ ಮೂಳೆ ಅಳವಡಿಸಲಾಗಿದೆ. ಶನಿವಾರ ಶಸ್ತ್ರಕ್ರಿಯೆ ನಡೆಸಲಾಗಿದ್ದು, ಸೋಮವಾರ ಗುರುಚರಣ್‌ ಫಿಟ್‌ ಆಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಶಸ್ತ್ರಕ್ರಿಯೆಗೂ ಮುನ್ನ ಜೀವ ಇರುವ ವರೆಗೆ ಹಾಸಿಗೆಯಲ್ಲೇ ಕಳೆಯಲು ನಾ ಸಿದ್ಧನಿಲ್ಲ. ಹೀಗಾಗಿ ಚಿಕಿತ್ಸೆ ನೀಡುವಂತೆ ವೈದ್ಯರಲ್ಲಿ ಹೇಳಿದ್ದರು ಎಂದು ಕುಟುಂಬ ವರ್ಗ ತಿಳಿಸಿದೆ. 1913ರಲ್ಲಿ ಜನಿಸಿದ್ದ ಗುರುಚರಣ್‌, ರಕ್ಷಣಾ ಸಚಿವಾಲಯದಲ್ಲಿ ಹಿರಿಯ ರಿಸೆಪ್ಶನ್‌ ಆಫೀಸರ್ ಆಗಿದ್ದರು.

Comments are closed.