ರಾಷ್ಟ್ರೀಯ

ಮೇಲ್ಜಾತಿಯವರಿಗೆ ನೀಡಿದ ಶೇ. 10 ಮೀಸಲಾತಿ ಪಡೆದ ಮೊದಲ ರಾಜ್ಯ!

Pinterest LinkedIn Tumblr


ನವದೆಹಲಿ: ಸಾಮಾನ್ಯ ವರ್ಗದ ಬಡವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 10 ಮೀಸಲು ನೀಡುವ ಐತಿಹಾಸಿಕ ಮಸೂದೆ ಗುಜರಾತ್‌ನಲ್ಲಿ ಜನವರಿ 14ರಿಂದ ಜಾರಿಗೆ ಬರಲಿದೆ. ಐತಿಹಾಸಿಕ ಮಸೂದೆ ಹಲವು ಸುತ್ತಿನ ಚರ್ಚೆ ಬಳಿಕ ಸಂಸತ್‌ನ ಎರಡೂ ಸದನದಲ್ಲಿ ಪಾಸ್ ಆಗಿತ್ತು.

2016ರಲ್ಲಿಯೇ ಗುಜರಾತ್ ಸರಕಾರ ಮೇಲ್ವರ್ಗದ ಬಡವರಿಗೆ ಶೇ. 10 ಮೀಸಲು ನೀಡಲು ಮುಂದಾಗಿತ್ತು. ಗುಜರಾತ್‌ ಪಾಟಿದಾರ್ ಸಮುದಾಯಕ್ಕೆ ಇದು ದೊಡ್ಡ ಲಾಭ ತಂದುಕೊಡಲಿದೆ.

ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಬಡವರಿಗೆ ಮೀಸಲು ನೀಡಬೇಕು ಎಂಬ ಕೂಗು ಮೊದಲಿನಿಂದಲೂ ಇತ್ತು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಸೂದೆ ಪಾಸ್ ಮಾಡಿದ್ದು ಗುಜರಾತ್ ಮೊದಲ ಲಾಭ ಪಡೆದುಕೊಳ್ಳಲಿದೆ.

Comments are closed.