ರಾಷ್ಟ್ರೀಯ

ಜನವರಿ 20 ರಿಂದ ನೂತನ 12 ತಡೆರಹಿತ​ ವಿಮಾನಗಳು ಹಾರಾಟ ಆರಂಭಿಸಲಿರುವ ಸ್ಪೈಸ್​ ಜೆಟ್

Pinterest LinkedIn Tumblr

ನವದೆಹಲಿ: ಜನವರಿ 20 ರಿಂದ ನೂತನ 12 ತಡೆರಹಿತ(ನಾನ್​ಸ್ಟಾಪ್​​)​ ವಿಮಾನಗಳು ಹಾರಾಟ ನಡೆಸಲಿವೆ ಎಂದು ಸ್ಪೈಸ್​ ಜೆಟ್​ ವಿಮಾನ ಸಂಸ್ಥೆ ಗುರುವಾರ ತಿಳಿಸಿದೆ. ಇಡೀ ದೇಶದಾದ್ಯಂತ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು ಈ ಹೊಸ ಚಿಂತನೆ ನಡೆಸಲಾಗಿದೆ.

ಈ ಹೊಸ ವಿಮಾನಗಳ ಮೂಲಕ ಪ್ರಯಾಣಿಕರು ಡೆಹ್ರಾಡೂನ್​, ಜಮ್ಮು, ಜೈಪುರ, ಅಮೃತಸರ, ವಾರಣಾಸಿ, ಮಧುರೈ ಮತ್ತು ವಿಜಯವಾಡ ಮತ್ತಿತರ ನಗರಗಳಿಗೆ ಸುಲಭವಾಗಿ ಪ್ರಯಾಣಿಸಬಹುದಾಗಿದೆ.

ಡೆಹ್ರಾಡೂನ್​-ಜಮ್ಮು, ಡೆಹ್ರಾಡೂನ್​-ಜೈಪುರ ಮತ್ತು ಡೆಹ್ರಾಡೂನ್​-ಅಮೃತಸರ ಮಾರ್ಗಗಳಲ್ಲಿ ದಿನನಿತ್ಯ ನೇರ ಹಾರಾಟವನ್ನು ಪರಿಚಯಿಸುವ ಮೊದಲ ಭಾರತೀಯ ವಿಮಾನಯಾನ ಸಂಸ್ಥೆ ಸ್ಪೈಸ್​ ಜೆಟ್​ ಆಗಿರುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಮಾನಯಾನ ಸಂಸ್ಥೆಯು ಜೈಪುರ್-ವಾರಣಾಸಿ, ಚೆನ್ನೈ-ಮಧುರೈ ಮತ್ತು ಹೈದರಾಬಾದ್-ವಿಜಯವಾಡ ಮಾರ್ಗಗಳಲ್ಲಿ ಹಾರಾಟವನ್ನು ಪುನರಾವರ್ತನೆಗೊಳಿಸಲು ಚಿಂತಿಸಿದೆ. ಚೆನ್ನೈ-ಮಧುರೈ ಮಾರ್ಗ ಹೊರತುಪಡಿಸಿ, ಎಲ್ಲಾ ಮಾರ್ಗಗಳಲ್ಲಿ ವಿಮಾನಗಳು ದಿನನಿತ್ಯ ಹಾರಾಟ ನಡೆಸುತ್ತದೆ. ಆದರೆ ಮಂಗಳವಾರ ಕಾರ್ಯನಿರ್ವಹಿಸುವುದಿಲ್ಲ. ಈ ಎಲ್ಲಾ ಮಾರ್ಗಗಳಲ್ಲಿ ಸ್ಪೈಸ್ ಜೆಟ್ ಅದರ ಬೋಂಬಾರ್ಡಿಯರ್ Q400 ವಿಮಾನವನ್ನು ನಿಯೋಜಿಸುತ್ತದೆ.

Comments are closed.