ರಾಷ್ಟ್ರೀಯ

ಲೋಕಸಭೆ ಚುನಾವಣೆ ಜನತೆ – ಮಹಾಘಟಬಂಧನ್ ನಡುವಿನ ಸ್ಪರ್ಧೆ: ಮೋದಿ

Pinterest LinkedIn Tumblr


ನವದೆಹಲಿ: 2019 ಲೋಕಸಭೆ ಚುನಾವಣೆ ಜನರು ಹಾಗೂ ಮಹಾಘಟಬಂಧನದ ನಡುವಿನ ಸ್ಪರ್ಧೆಯಾಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎ ಎನ್ ಐ ಗೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ ಮೋದಿ ಮಾತನಾಡಿದ್ದಾರೆ
ಕೆಲವು ರಾಜಕೀಯ ಪಂಡಿತರು ನಿಜೆಪಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 543 ಸ್ಥಾನಗಳಲ್ಲಿ 180 ಕ್ಕಿಂತ ಹೆಚ್ಚಿನ ಸ್ಥಾನ ಗಳಿಸಲಾಗದು ಎಂದಿದ್ದಾರೆ, ಆದರೆ ಅವರೇ 2014ರ ಚುನಾವಣೆಗಳ ವೇಳೆ ಸಹ ಇದೇ ಮಾತನ್ನು ಹೇಳಿದ್ದರು ಎಂದು ಮೋದಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಹೇಳಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಮ್ಮ ಸರ್ಕಾರ ಮಾಡಿದ ಕೆಲಸಗಳನ್ನು ಪರಿಗಣಿಸಿ ಜನರು ಬಿಜೆಪಿಗೆ ಮತ ನೀಡುತ್ತಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಈ ಚುನಾವಣೆಜನರ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ಹೊರಟಿರುವವರು ಹಾಗೂ ಆ ಮಹತ್ವಾಕಾಂಕ್ಷೆಗಳನ್ನು ಹತ್ತಿಕ್ಕುವವರ ನಡುವಿನ ಸ್ಪರ್ಧೆ ಎನ್ನುವುದಾಗಿ ನಾನು ಭಾವಿಸಿದ್ದೇನೆ.ಕಳೆದ 70 ವರ್ಷಗಳಲ್ಲಿ ಜನರು ಈಗ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ” ಮೋದಿ ಹೇಳಿದರು.
ಮುಂದಿನ ಚುನಾವಣೆ ಮೋದಿ ಬದಲಿಗಾಗಿ ಬೇರೊಬ್ಬ ನಾಯಕ ಎಂಬ ದಿಕ್ಕಿನಲ್ಲಿರಲಿದೆಯೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ “ಈ ಚುನಾವಣೆ ಜನತೆ (ಸಾರ್ವಜನಿಕರು) ಹಾಗೂ ಮಹಾಘಟಬಂಧನ್(ವಿರೋಧಿಗಳ ಒಕ್ಕೂಟ) ದ ನಡುವಿನ ಸ್ಪರ್ಧೆಯಾಗಿರಲಿದೆ.ಮೋದಿ ಕೇವಲ ಜನರ ಪ್ರೀತಿ ಹಾಗೂ ಆಶೀರ್ವಾದದ ಫಲ” ಎಂದರು.
“ಭಾರತೀಯ ಜನತೆ ಚುನಾವಣೆಗಳ ಹಾದಿಯನ್ನು ನಿರ್ಧರಿಸುತ್ತಾರೆ. ಜನರ ಆಕಾಂಕ್ಷೆಗಳನ್ನು ಯಾರು ಪೂರೈಸಲು ಸಾಧ್ಯ, ಯಾರು ಅವುಗಳ ವಿರುದ್ಧ ಸಾಗುತ್ತಾರೆ ಎನ್ನುವುದು ಜನರಿಗೆ ಅರಿವಿದೆ, ಇದು ಚುನಾವಣೆಯಲ್ಲಿ ಬಹಿರಂಗವಾಗಲಿದೆ. ಬಿಜೆಪಿ ವಿರೋಧಿ ಒಕ್ಕೂಟ ಭ್ರಷ್ಟಾಚಾರ,ದ ವಿಕೇಂದ್ರೀಕರಣಕ್ಕೆ ಕೇಂದ್ರವಾಗಿದೆ ಎಂದು ಜನರು ಅರಿತಿದ್ದಾರೆ.ಅವರಲ್ಲಿ ಯಾರು ರಾಜ್ಯದ ಚುಕ್ಕಾಣಿ ಹಿಡಿದಿದ್ದರೋ ಅವರು ರಾಜ್ಯವನ್ನು ಲೂಟಿ ಹೊಡೆಇದ್ದರೆ ಕೇಂದ್ರದ ಅಧಿಕಾರ ಪಡೆದವರು ದೇಶವನ್ನು ಲೂಟಿ ಮಾಡಿದ್ದಾರೆ.ಈಗ ಅವರೆಲ್ಲರೂ ಒಟ್ಟಾಗಿ ಬರುತ್ತಿರುವಾಗ ಅವರನ್ನು ಅಧಿಕಾರಕ್ಕೆ ಏರಿಸಬೇಕೆ, ಬೇಡವೆ ಎಂದು ಜನ ನಿರ್ಧರಿಸಲಿದ್ದಾರೆ.
“ಬಿಜೆಪಿ 180ಕ್ಕಿಂತ ಹೆಚ್ಚು ಸ್ಥಾನ ಗಳಿಸದು ಎನ್ನುವ ಕುರಿತಂತೆ ಯಾವುದೇ ವೈಜ್ಞಾನಿಕ ಅಧ್ಯಯನದ ಅಡಿಯಲ್ಲಿ ಇದನ್ನು ನಿರ್ಧರಿಸಿದ್ದಿರಾ?013 ರಲ್ಲಿ ಕೂಡ ಅದೇ ವ್ಯಕ್ತಿಗಳು ಬಿಜೆಪಿ ಕುರಿತು ಇದೇ ಮಾತುಗಳನ್ನು ಆಡಿದ್ದರು.ಅವರು ಇಂತಹ ವಿಷಯಗಳನ್ನು ಗಟ್ಟಿಯಾಗಿ ಮಾತನಾಡದೆ ಹೋದರೆ ಜನರು ಅವರ “ಘಟಬಂಧನ”ಗಳತ್ತ ಗಮನ ಹರಿಸುವುದಿಲ್ಲ. ಹಾಗಾಗಿ ಅವರು ದೊಡ್ಡದಾಗಿ ಮಾತನಾಡುತ್ತಾರೆ.
“ಸಾಮಾನ್ಯ ಮನುಷ್ಯನ ಬುದ್ಧಿವಂತಿಕೆಯನ್ನು ಅಪಮಾನಿಸಲು ಬಿಜೆಪಿಗೆ ಯಾವ ಕಾರಣವಿಲ್ಲ. ನಾನು ಸಾಮಾನ್ಯ ಮನುಷ್ಯನ ಬುದ್ಧಿಮತ್ತೆಯನ್ನು ನಂಬುತ್ತೇನೆ ಹೊರತು ರಾಜಕೀಯ ಪಂಡಿತರ ವಿಶ್ಲೇಷಣೆಯನ್ನಲ್ಲ.”ಮೋದಿ ಹೇಳಿದ್ದಾರೆ.
ಮಹಾಘಟಬಂಧನ್ ರಚನೆಗೆ ಯತ್ನಿಸಿರುವ ವಿರೋಧಿ ಒಕ್ಕೂಟದ ಕುರಿತು ಟೀಕಿಸಿದ ಪ್ರಧಾನಿ ಮೈತ್ರಿ ಸ್ಥಾಪಿಸಲು ಪ್ರಯತ್ನಿಸುತ್ತಿರುವಪಕ್ಷಗಳಲ್ಲಿ ಯಾವುದೇ ಏಕತೆ ಇಲ್ಲ, ದೇಶಕ್ಕೆ ಅವರು ಏನು ಮಾಡಲಿದ್ದಾರೆ ಎನ್ನುವ ಕುರಿತು ಯಾವ ಒಮತದ ಚರ್ಚೆಗಳಿಲ್ಲ. ಕಳೆದ ಐದು ವರ್ಷಗಳಿಂದ ಮಾದ್ಯಮಗಳ ವರದಿ ಆಧಾರದಲ್ಲಿ ಮಹಾಘಟಬಂಧನ್ ಎಂದು ಕರೆಯಲಾಗುತ್ತಿದೆ, ಇದಕ್ಕೆ ಯಾವುದೇ ಅಡಿಪಾಯವಿಲ್ಲ. ಅವರು ಇನ್ನೂ ಭಿನ್ನ ದನಿಗಳಲ್ಲಿಯೇ ಮಾತನಾಡುತ್ತಿದ್ದಾರೆ.ಮ್ಮನ್ನು ಉಳಿಸಿಕೊಳ್ಳಲು ಪರಸ್ಪರರ ಬೆಂಬಲವನ್ನು ಹುಡುಕುತ್ತಿದ್ದಾರೆ ತಾವು ಉಳಿಯಲು ಪರಸ್ಪರ ಕೈ ಹಿಡಿದಿದ್ದಾರೆ ಎಂದರು.
“ನಾವು ಮೋದಿಗೆ ಹಾಗೆ ಮಾಡುತ್ತೇವೆ, ನಾವು ಹೀಗೆ ಮಾಡುತ್ತೇವೆ ಎಂದು ಪ್ರತಿಯೊಬ್ಬರೂ ಮೋದಿಯನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದಾರೆ ಹೊರತಾಗಿ ದೇಶಕ್ಕೆ ಣಾವೇನು ಮಾಡುತ್ತೇವೆ ಎಂದು ಯಾರೂ ಹೇಳುವುದಿಲ್ಲ. ಏಕೆಂದರೆ ಅವರ ಏಕೈಕ ಅಜೆಂಡಾ ಮೋದಿಯನ್ನು ಕೆಳಗಿಳಿಸುವುದಷ್ಟೇ ಆಗಿದೆ.”
ತೆಲಂಗಾಣ ಅಸೆಂಬ್ಲಿ ಚುನಾವಣೆ ಮತ್ತು ಅಸ್ಸಾಂ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ಸ್ಥಳೀಯ ಚುನಾವಣೆಗಳ ವಿಚಾರದಲ್ಲಿಬಿಜೆಪಿ ವೊರೋಧಿಗಳ ಒಕ್ಕೂಟ ಇದಾಗಲೇ ವೈಫಲ್ಯ ಕಂಡಿದೆ.ಈ ನಾಯಕರೆಲ್ಲಾ ತಮ್ಮ ಸುರಕ್ಷತೆಗಾಗಿ ಒಟ್ಟಾಗಿ ಹೋಗಬಹುದು ಆದರೆ ಜನರೂ ಅವರೊಡನೆ ಇದ್ದಾರೆಂದು ಅರ್ಥವಲ್ಲ.
ತೆಲಂಗಾಣ ಹಾಗೂ ಆಂಧ್ರ ಪ್ರದೇಶ ರಾಜಕೀಯದ ಕುರಿತಂತೆ ಮಾತನಾಡಿದ್ದ ಮೋದಿ ಚಂದ್ರಬಾಬು ನಾಯ್ಡು ಅವರ ರಾಜಕೀಯ ನಡೆಯನ್ನು ಟೀಕಿಸಿದ್ದಲ್ಲದೆ ತೆಲಂಗಾಣ ಮುಖ್ಯನ್ಮ್ಮಂತ್ರಿ ಕೆಸಿಆರ್ ನಡೆಯನ್ನು ಸೂಕ್ಷ್ಮವಾಗಿ ಶ್ಲಾಘಿಸಿದ್ದಾರೆ.
ಇದೇ ವೇಳೆ ಬಿಜೆಪಿ ಮೈತ್ರಿಪಕ್ಷ ಶಿವಸೇನೆ ಬಗ್ಗೆ ಮಾತನಾಡಿದ ಪ್ರಧಾನಿ ಶಿವಸೇನೆ ಕಾಲ ಕಾಲಕ್ಕೆ ತನ್ನ ಧೋರಣೆಗಳಲ್ಲಿ ಬದಲಾವಣೆ ಮಾಡಿಕೊಳ್ಳುತ್ತದೆ ಎಂದರು. ರಾಹು ಟೀಕೆಯಾಗಿದ್ದ “ಚೌಕಿದಾರ್ ಚೋರ್ ಹೇ” ಎಂಬ ಮಾತಿಗೆ ಶಿವಸೇನಾ ಮುಖ್ಯಸ್ಥ ಉದ್ಭವ್ ಠಾಕ್ರೆ ಹೇಳಿಕೆಯನ್ನು ಉದ್ದರಿಸಿ ಮಾತನಾಡಿದಾರೆ. ನಾವು ಪ್ರಾದೇಶಿಕ ಅಸ್ಮಿತೆಯನ್ನು ಕಾಯ್ದುಕೊಳ್ಳುವುದಕ್ಕೆ ಬದ್ದರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

Comments are closed.