ಮನೋರಂಜನೆ

150 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಚಿತ್ರ ಕೆಜಿಎಫ್!

Pinterest LinkedIn Tumblr


ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರತದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇನ್ನು ಬಿಡುಗಡೆಯಾದ ಆರನೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ್ದ ಕೆಜಿಎಫ್ ಚಿತ್ರ ಇದೀಗ 10ನೇ ದಿನಕ್ಕೆ 150 ಕೋಟಿ ಕ್ಲಬ್ ಸೇರುವ ಮೂಲಕ ಹೊಸ ಇತಿಹಾಸ ಬರೆದಿದೆ.
ಹೌದು, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರ 150 ಕೋಟಿ ಗಳಿಸುವ ಮೂಲಕ ಕನ್ನಡ ಚಿತ್ರವೊಂದು ಈ ಕ್ಲಬ್ ಸೇರಿದ ಮೊದಲ ಚಿತ್ರವಾಗಿದೆ. ಚಿತ್ರ ಬಿಡುಗಡೆಯಾಗಿ 11 ದಿನ ಕಳೆದರೂ ಇನ್ನು ಚಿತ್ರವನ್ನು ನೋಡಲು ಥಿಯೇಟರ್ ಗಳತ್ತ ಪ್ರೇಕ್ಷಕರು ದಾಂಗುಡಿ ಹಿಡುತ್ತಿರುವುದರಿಂದ ಚಿತ್ರದ ಕಲೆಕ್ಷನ್ ಸಹ ಜೋರಾಗಿದೆ.
ಇನ್ನು ಕನ್ನಡದಲ್ಲಿ ಒಟ್ಟಾರೆ 87 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ. ಇದು ಕನ್ನಡದ ಮಟ್ಟಿಗೆ ಹೊಸ ದಾಖಲೆ. ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರ ಒಟ್ಟಾರೆ 75 ಕೋಟಿ ಗಳಿಸಿ ಮೊದಲ ಸ್ಥಾನದಲ್ಲಿತ್ತು. ಇದೀಗ ಈ ದಾಖಲೆಯನ್ನು ಕೆಜಿಎಫ್ ಮುರಿದಿದೆ.
ಇಲ್ಲಿಯವರೆಗೂ ಹಿಂದಿ ಆವೃತ್ತಿಯಲ್ಲಿ ಕೆಜಿಎಫ್ ಚಿತ್ರ ಒಟ್ಟಾರೆ 26.70 ಕೋಟಿ ರುಪಾಯಿ ಗಳಿಸಿರುವ ಕೆಜಿಎಫ್ ಹೊಸ ದಾಖಲೆ ನಿರ್ಮಿಸಿದೆ. ಒಟ್ಟಿನಲ್ಲಿ ಚಿತ್ರದ ಬಗ್ಗೆ ಪ್ರೇಕ್ಷಕರು ಸಹ ಒಳ್ಳೆಯ ಮಾತುಗಳನ್ನು ಆಡುತ್ತಿರುವುದರಿಂದ ಫ್ಯಾಮಿಲಿ ಆಡಿಯೇನ್ ಸಹ ಚಿತ್ರಮಂದಿರಗಳತ್ತ ಬರುತ್ತಿದ್ದಾರೆ.
#KGF biz at a glance…

Week 1: ₹ 21.45 cr
Weekend 2: ₹ 5.25 cr
Total: ₹ 26.70 cr
India biz.
Note: HINDI version.
— taran adarsh (@taran_adarsh) December 31, 2018
#KGF maintains well in Weekend 2… Decline in Weekend 2 [vis-à-vis Weekend 1]: 42.93%, which indicates a strong hold… Mumbai circuit continues to dominate… [Week 2] Fri 1.25 cr, Sat 1.75 cr, Sun 2.25 cr. Total: ₹ 26.70 cr. India biz. Note: HINDI version.

— taran adarsh (@taran_adarsh) December 31, 2018

Comments are closed.