ರಾಷ್ಟ್ರೀಯ

ಯಾವುದೇ ಏಜೆನ್ಸಿಗೆ ಕಂಪ್ಯೂಟರ್​ ಬೇಹುಗಾರಿಕೆಗೆ ಅವಕಾಶ ನೀಡಿಲ್ಲ: ಕೇಂದ್ರ

Pinterest LinkedIn Tumblr
Hacker Inside t

ನವದೆಹಲಿ: ತಮ್ಮ ಕಂಪ್ಯೂಟರ್‌ನಿಂದ ಮಾಹಿತಿ ಸಂಗ್ರಹಿಸುವ ಹಾಗೂ ತಡೆ ಹಿಡಿಯುವ ಯಾವುದೇ ರೀತಿಯ ಸಂಪೂರ್ಣ ಅಧಿಕಾರವನ್ನು ಏಜೆನ್ಸಿಗಳಿಗೆ ಕೇಂದ್ರ ಸರಕಾರ ನೀಡಿಲ್ಲ. ಇಂತಹ ಕ್ರಮವನ್ನು ಜಾರಿಗೊಳಿಸಲು ಮೊದಲು ಚರ್ಚೆ ನಡೆಸಬೇಕಾಗುತ್ತದೆ. ಒಂದು ವೇಳೆ ಜಾರಿಯಾದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಈ ರೀತಿಯ ಯಾವುದೇ ಕ್ರಮ ಜಾರಿ ಮಾಡುವ ಮುನ್ನ ಪೂರ್ವಾನುಮತಿ ಪಡೆದುಕೊಳ್ಳಬೇಕಾಗುತ್ತದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಈ ಮೂಲಕ ಕಂಪ್ಯೂಟರ್​​ ಬೇಹುಗಾರಿಕೆ ಮಾಡಲು ಯಾವುದೇ ಏಜೆನ್ಸಿಗೆ ತಾವು ಮುಕ್ತ ಅವಕಾಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಯಾವುದೇ ಕಂಪ್ಯೂಟರ್​ಗಳ ಮಾಹಿತಿಯನ್ನು ಪಡೆಯುವ ಮತ್ತು ತಡೆಹಿಡಿಯುವ ಅಧಿಕಾರವನ್ನು 10 ತನಿಖಾ ಸಂಸ್ಥೆಗಳಿಗೆ ನೀಡಲಾಗಿದೆ. ಈ ಬಗ್ಗೆ ಕೇಂದ್ರ ಗೃಹ ಇಲಾಖೆ ಹೊಸ ಆದೇಶ ಹೊರಡಿಸಿದೆ. ಕೇಂದ್ರ ಗುಪ್ತಚರ ಸಂಸ್ಥೆ (ಸಿಬಿಐ), ಜಾರಿ ನಿರ್ದೇಶನಾಲಯ(ಇಡಿ), ನೇರ ತೆರಿಗೆಯ ಕೇಂದ್ರ ಮಂಡಳಿ, ಮಾದಕ ವಸ್ತು ನಿಯಂತ್ರಣ ಸಂಸ್ಥೆ, ಕೇಂದ್ರ ತನಿಖಾ ಸಂಸ್ಥೆ,(ಸಿಬಿಐ) ರಾಷ್ಟ್ರೀಯ ತನಿಖಾ ಸಂಸ್ಥೆ, (ಎನ್​​ಐಎ) ಕಂದಾಯ ಗುಪ್ತಚರ ನಿರ್ದೇಶನಾಲಯ, ಕ್ಯಾಬಿನೆಟ್​ ಸಚಿವಾಲಯ, ದೆಹಲಿ ಪೊಲೀಸ್​ ಕಮೀಷನರ್​, ಸಾಂಕೇತಿಕ ಗುಪ್ತಚರ ನಿರ್ದೇಶನಾಲಯ (ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ಅಸ್ಸಾಂನಲ್ಲಿ ಮಾತ್ರ) ಸಂಸ್ಥೆಗಳಿಗೆ ಈ ಅಧಿಕಾರ ನೀಡಲಾಗಿದೆ ಎಂದು ಹೇಳಲಾಗಿತ್ತು.

ಇದೇ ಮೊದಲ ಬಾರಿಗೆ ದತ್ತಾಂಶವನ್ನು ಸ್ಕ್ಯಾನಿಂಗ್​ ಮಾಡುವ ಅಧಿಕಾರವನ್ನು ವಿವಿಧ ಸಂಸ್ಥೆಗಳಿಗೆ ನೀಡಲಾಗಿದೆ. ಈ ಮೊದಲು ಕೇವಲ ಚಲನಾ ದತ್ತಾಂಶವನ್ನಷ್ಟೇ ತಡೆಹಿಡಿಯಬಹುದಿತ್ತು. ಆದರೆ ಈಗ ಸ್ವೀಕೃತವಾದ ದತ್ತಾಂಶ, ಕಂಪ್ಯೂಟರ್​ನಲ್ಲಿ ಈಗಾಗಲೇ ಸ್ಟೋರ್​ ಆಗಿರುವ ಮತ್ತು ಜನರೇಟ್​ ಆಗಿರುವ ದತ್ತಾಂಶವನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಈ 10 ಸಂಸ್ಥೆಗಳು ಪಡೆದಿವೆ.

ಕರೆ ಮತ್ತು ಇ-ಮೇಲ್​ ಮಾತ್ರವಲ್ಲದೇ, ಕಂಪ್ಯೂಟರ್​ನಲ್ಲಿರುವ ಯಾವುದೇ ಮಾಹಿತಿಯನ್ನು ತಡೆಹಿಡಿಯಬಹುದಾಗಿದೆ. ಅಷ್ಟೇ ಅಲ್ಲದೇ ಈ ಸಂಸ್ಥೆಗಳು ಡಿವೈಸ್​ಗಳನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಹೊಂದಿವೆ. ಮೊದಲು ಗುಪ್ತಚರ ಸಂಸ್ಥೆಗೆ ವಶಪಡಿಸಿಕೊಳ್ಳುವ ಅಧಿಕಾರ ಇರಲಿಲ್ಲ. ಕೇವಲ ರಾಜ್ಯ ಪೊಲೀಸರಿಗೆ ಸಹಕರಿಸುತ್ತಿದ್ದರು. ಆದರೆ ಈಗ ಹೊಸ ಆದೇಶ ಜಾರಿಗೆ ಬಂದ ಮೇಲೆ ಬದಲಾವಣೆಯಾಗಿದೆ. ಈ ಹೊಸ ಆದೇಶದ ಪ್ರಕಾರ, ಚಂದಾದಾರರು/ ಸೇವೆ ಒದಗಿಸುವವರು/ ಕಂಪ್ಯೂಟರ್​ನ ಉಸ್ತುವಾರಿ ಹೊಂದಿರುವ ಯಾವುದೇ ವ್ಯಕ್ತಿ ಸಂಸ್ಥೆಗಳಿಗೆ ಎಲ್ಲಾ ಸೌಲಭ್ಯಗಳನ್ನು, ತಾಂತ್ರಿಕ ನೆರವನ್ನು ವಿಸ್ತರಿಸಬೇಕು. ಇಲ್ಲವಾದಲ್ಲಿ 7 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದಿದ್ದರು.

Comments are closed.