ರಾಷ್ಟ್ರೀಯ

ಲೋಕಸಭಾ ಚುನಾವಣೆ: ಬಿಜೆಪಿ ಸೋಲಿಸಲು ಮೈತ್ರಿ ಸೂತ್ರ ಬಿಟ್ಟುಕೊಡದ ತೇಜಸ್ವಿ ಯಾದವ್‌

Pinterest LinkedIn Tumblr


ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಸೋಲು ಖಚಿತ. ನಾವು ಈಗಲೇ ಮೈತ್ರಿ ಸೂತ್ರವನ್ನು ಬಹಿರಂಗಪಡಿಸುವುದಿಲ್ಲ. ಆದರೆ, ಬಿಹಾರ್​​ ಮತ್ತು ಜಾರ್ಖಾಂಡ್​​ನಿಂದ ಎನ್​​ಡಿಎ ಮೈತ್ರಿಕೂಟವನ್ನು ಹೊರ ಹಾಕಲಿದ್ದೇವೆ ಎಂದು ಭರವಸೆ ನೀಡುತ್ತೇವೆ. ಜೊತೆಗೆ 2019 ರಲ್ಲಿ ಮೋದಿ ಸರ್ಕಾರ ಪತನಗೊಳ್ಳಲಿದೆ. ನಮ್ಮ ಮೈತ್ರಿಯೇ ಮೋದಿ ಸರ್ಕಾರದ ಅಂತ್ಯಕ್ಕೆ ನಾಂದಿ ಹಾಡಲಿದೆ ಎಂದು ಆರ್​​ಜೆಡಿ ನಾಯಕ ತೇಜಸ್ವಿ ಯಾದವ್​​​ ಭವಿಷ್ಯ ನುಡಿದಿದ್ದಾರೆ.

ಮಧುಮೇಹ ಸೇರಿದಂತೆ ಕಿಡ್ನಿ ಸಂಬಂಧಿತ ಖಾಯಿಲೆಯಿಂದ ಅನಾರೋಗ್ಯಕ್ಕೀಡಾಗಿ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರ್‌ಜೆಡಿ ಮುಖ್ಯಸ್ಥ, ತಂದೆ ಲಾಲೂ ಪ್ರಸಾದ್​ ಯಾದವ್​​ರನ್ನು ಇಂದು ತೇಜಸ್ವಿ ಭೇಟಿ ಮಾಡಿದ್ದರು. ಈ ವೇಳೆ ಲೋಕ ಸಮತಾ ಪಕ್ಷದ ಮುಖ್ಯಸ್ಥ ಉಪೇಂದ್ರ ಕುಶ್ವಾಹ, ವಿಕಾಸಿಲ್‌ ಇನ್ಸಾನ್‌ ಪಕ್ಷದ ಮುಕೇಶ್‌ ಸಹನಿ ಅವರೊಂದಿಗೆ ಆಸ್ಪತ್ರೆಗೆ ತೆರಳಿದ್ದ ತೇಜಸ್ವಿ, ಮಾಜಿ ಸಿಎಂ ಲಾಲೂ ಪ್ರಸಾದ್​​ ಅವರ ಜೊತೆಗೆ ಚರ್ಚಿಸಿದ್ಧಾರೆ.

ನಂತರ ಮಾಧ್ಯಮದವರೊಂದಿಗೆ ಮಾತಾಡಿದ ಆರ್​ಜೆಡಿ ನಾಯಕ ತೇಜಸ್ವಿ ಯಾದವ್​​ ಅವರು, ದಯವಿಟ್ಟು ತಾಳ್ಮೆಯಿಂದಿರಿ. ಬಿಜೆಪಿಯನ್ನು ಸೋಲಿಸಲು ರಣತಂತ್ರಗಳನ್ನು ಹೆಣೆದಿದ್ದೇವೆ. ನಮ್ಮ ಕಾರ್ಯತಂತ್ರಗಳು ಏನೆಂದು? ನಿಮಗೆ ಹೇಳುವುದಿಲ್ಲ. ನಮ್ಮ ತಂದೆಯವರ ಆರೋಗ್ಯ ಸ್ಥಿತಿ ಬಗ್ಗೆ ನಿಗಾ ವಹಿಸಲಾಗಿದೆ. ಹಾಗೆಯೇ ನಮ್ಮ ಕುಟುಂಬದವರೂ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಹೀಗೆ ಮಾತು ಮುಂದುವರೆಸಿದ ಅವರು, ಬಿಹಾರದಲ್ಲಿ ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಮಾತುಕತೆ ನಡೆಸಲಾಗಿದೆ. ನಮ್ಮ ಮಿತ್ರ ಪಕ್ಷಗಳ ಜೊತೆಗೆ ಸೀಟು ಹಂಚಿಕೆ ಹೇಗೆ ಎಂದುಬರ ಬಗ್ಗೆಯೂ ಚರ್ಚಿಸಲಾಗಿದೆ. ಬಿಜೆಪಿಯನ್ನು ಸೋಲಿಸಿಯೇ ತೀರುತ್ತೇವೆ. ಈ ಸಲುವಾಗಿಯೇ ಕೇಂದ್ರ ವಿರೋಧ ಪಕ್ಷಗಳೆಲ್ಲಾ ಒಂದಾಗಿವೆ. ಆದರೆ, ಸೀಟು ಹಂಚಿಕೆ ಮಾಹಿತಿ ಈಗಲೇ ಬಹಿರಂಗಪಡಿಸುವುದಿಲ್ಲ ಎಂದರು.

2019ರ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿ ಕೂಟವನ್ನು ಎದುರಿಸಲು ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಕಾರ್ಯದಲ್ಲಿ ನಿರತವಾಗಿವೆ. ಸಿಎಂ ಚಂದ್ರಬಾಬು ನಾಯ್ಡು ಅವರು ಈಗಾಗಲೇ ದೇಶದ ಹಲವು ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ವಿರೋಧ ಪಕ್ಷಗಳನ್ನು ಒಂದೇ ವೇದಿಕೆಯಡಿ ತರಲು ಮುಂದಾಳತ್ವ ವಹಿಸಿಕೊಳ್ಳುವಂತೆ ಅವರು ಈಗಾಗಲೇ ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​​ ಗಾಂಧಿಯವರಿಗೆ ಹೇಳಲಾಗಿದೆ. ಅಲ್ಲದೇ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಬಿಎಸ್​​ಪಿ ಮಾಯಾವತಿಯವರಿಗೂ ನಾಯ್ಡು ಭೇಟಿಯಾಗಿ, ಮಹಾಘಟ್​ಬಂಧನ್​ನಲ್ಲಿ ಕೈ ಜೋಡಿಸುವಂತೆ ಮಾತುಕತೆ ನಡೆಸಿದ್ಧಾರೆ ಎನ್ನಲಾಗಿದೆ.

Comments are closed.