ರಾಷ್ಟ್ರೀಯ

ಅಹಮದಾಬಾದ್​ ದಂಗ್​ ಜಿಲ್ಲೆಯ ಮಹಲ್​ ಬರ್ದಿಪದ ರಸ್ತೆ ಬಳಿ 200 ಅಡಿ ಆಳದ ಪ್ರಪಾತಕ್ಕೆ ಉರುಳಿದ ಬಸ್; 9 ಶಾಲಾ ಮಕ್ಕಳು ಸಾವು

Pinterest LinkedIn Tumblr

ಅಹಮದಾಬಾದ್: ಶಾಲಾ ಪ್ರವಾಸ ಮುಗಿಸಿ ಹಿಂದಿರುಗುತ್ತಿದ್ದ ಖಾಸಗಿ ಬಸ್ಸೊಂದು 200 ಅಡಿ ಆಳದ ಪ್ರಪಾತಕ್ಕೆ ಉರುಳಿ 9 ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ.

ಈ ಘಟನೆ ದಂಗ್​ ಜಿಲ್ಲೆಯ ಮಹಲ್​ ಬರ್ದಿಪದ ರಸ್ತೆ ಬಳಿ ಶನಿವಾರ ಸಂಜೆ ನಡೆದಿದೆ. ದುರಂತದಲ್ಲಿ ಸಾವನ್ನಪ್ಪಿದ ಮಕ್ಕಳನ್ನು 10 ವರ್ಷದ ವಯೋಮಾನದವರು ಎನ್ನಲಾಗಿದೆ. ಬಸ್​ನಲ್ಲಿ ವಿದ್ಯಾರ್ಥಿಗಳು, ಶಿಕ್ಷಕಕರು ಹಾಗೂ ಪೋಷಕರು ಸೇರಿದಂತೆ 85 ಜನ ಪ್ರಯಾಣಿಸುತ್ತಿದ್ದರು. ಅಮ್ರೋಲಿ ನಗರದ ಟ್ಯೂಶನ್​ ಕ್ಲಾಸ್​ನಿಂದ ಒಂದು ದಿನದ ಪ್ರವಾಸವನ್ನು ಆಯೋಜಿಸಿದ್ದರು. ಪ್ರವಾಸ​ ಮುಗಿಸಿಕೊಂಡು ಮನೆಗೆ ವಾಪಸ್​ ತೆರಳುವಾಗ ಈ ಘಟನೆ ಸಂಭವಿಸಿದೆ.

ಘಟನೆಯಲ್ಲಿ 9 ಮಕ್ಕಳು ಸಾವನ್ನಪ್ಪಿದ್ದು, ಗಾಯಗೊಂಡ 79 ಮಂದಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಸ್​ನಲ್ಲಿ 75 ವಿದ್ಯಾರ್ಥಿಗಳು, 10 ಜನ ಶಿಕ್ಷಕರು, ಮಕ್ಕಳ ಪೋಷಕರು ಪ್ರವಾಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ತಕ್ಷಣ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಗೆ ಇಳಿದು ಪ್ರಯಾಣಿಕರನ್ನು ಕಾಪಾಡಿದ್ದಾರೆ. ಗಾಯಗೊಂಡವರನ್ನು ಆ್ಯಂಬುಲೆನ್ಸ್​​ ಮತ್ತು ಬೇರೆ ವಾಹನಗಳಲ್ಲಿ ಪಕ್ಕದ ಆಸ್ಪತ್ರೆಗೆ ದಾಖಲಿಸಿದ್ದಾರೆ.

Comments are closed.