ರಾಷ್ಟ್ರೀಯ

ಹನಿಟ್ರ್ಯಾಪ್‌ ಮೂಲಕ ಯುವಕರ ಸೆಳೆಯಲು ಮಹಿಳೆಯರನ್ನು ಬಳಸಿಕೊಳ್ಳುತ್ತಿರುವ ಪಾಕ್ ಉಗ್ರ ಸಂಘಟನೆಗಳು

Pinterest LinkedIn Tumblr


ಶ್ರೀನಗರ: ಪಾಕ್‌ ಮೂಲದ ಭಯೋತ್ಪಾದಕ ಸಂಘಟನೆಗಳು ಕಾಶ್ಮೀರದ ಯುವಕರನ್ನು ಉಗ್ರಗಾಮಿಗಳನ್ನಾಗಿ ಮಾಡಲು ಹೊಸ ಹೊಸ ಮಾರ್ಗಗಳನ್ನು ಕಂಡುಹಿಡಿಯುತ್ತಿದ್ದಾರೆ. ಈ ಪೈಕಿ, ಹನಿ ಟ್ರ್ಯಾಪಿಂಗ್‌ ಮಾಡುವುದು ಸಹ ಒಂದು ಹೊಸ ವಿಧಾನವೆಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ಶಸ್ತ್ರಾಸ್ತ್ರಗಳನ್ನು ತಲುಪಿಸಲು ಅವರನ್ನು ಬಳಸಿಕೊಳ್ಳುತ್ತಿದ್ದು, ಭಯೋತ್ಪಾದಕರನ್ನು ಗಡಿಯಲ್ಲಿ ಒಳನುಸುಳಲು ಸಹಾಯ ಮಾಡುವ ಗೈಡ್‌ಗಳನ್ನಾಗಿಯೂ ಬಳಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಹದಿನೈದು ದಿನಗಳ ಹಿಂದೆ ಬಂಡಿಪೊರಾ ಮೂಲದ ಸೈಯದ್ ಶಾಝಿಯಾ ಎಂಬ 30ರ ಆಸುಪಾಸಿನ ಮಹಿಳೆ ಬಂಧನಕ್ಕೀಡಾಗಿದ್ದಳು. ಗುಪ್ತಚರದ ಕಾರ್ಯಾಚರಣೆಯಲ್ಲಿ ಆಕೆಯನ್ನು ಬಂಧಿಸಿದ್ದು, ಆ ವೇಳೆ ಆಕೆ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಸೇರಿ ಸಾಮಾಜಿಕ ಜಾಲತಾಣದಲ್ಲಿ ಹಲವು ಅಕೌಂಟ್‌ಗಳು ಹೊಂದಿರುವುದು ತಿಳಿದುಬಂದಿದೆ. ಅಲ್ಲದೆ, ಕಣಿವೆ ರಾಜ್ಯದ ಅನೇಕ ಯುವಕರು ಆಕೆಯನ್ನು ಫಾಲೋ ಮಾಡುತ್ತಿದ್ದರು ಎಂದೂ ಅವರು ತಿಳಿಸಿದ್ದಾರೆ.

ಇನ್ನು, ಆಕೆಯನ್ನು ಬಂಧಿಸುವ ಮುನ್ನ ಹಲವು ತಿಂಗಳು ಕಾಲ ಮಹಿಳೆ ಬಳಸುತ್ತಿದ್ದ ಐಪಿ ಅಡ್ರೆಸ್‌ ಮೇಲೆ ಕೇಂದ್ರೀಯ ಭದ್ರತಾ ಏಜೆನ್ಸಿಗಳು ಕಣ್ಣಿಟ್ಟಿದ್ದರು. ಆ ವೇಳೆ, ಅವಳು ಹಲವು ಯುವಕರ ಜತೆ ಮಾತನಾಡುತ್ತಿದ್ದು, ಕೆಲವು ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಜಾಗಕ್ಕೆ ತಲುಪಿಸಿದರೆ ಮಾತ್ರ ನಿಮ್ಮನ್ನು ಭೇಟಿ ಮಾಡುವುದಾಗಿ ಆಕೆ ಭರವಸೆ ನೀಡುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಪೊಲೀಸ್‌ ಇಲಾಖೆಯ ಕೆಲವು ಅಧಿಕಾರಿಗಳೊಂದಿಗೂ ಆಕೆ ಸಂಪರ್ಕದಲ್ಲಿದ್ದಳು ಎಮದು ಅವರು ತಿಳಿಸಿದ್ದಾರೆ.

ಜತೆಗೆ, ಯುವಕರನ್ನು ಬಂದೂಕು ಹಿಡಿಯುವಂತೆ ಮಾಡಲು ಇನ್ನೂ ಅನೇಕ ಮಹಿಳೆಯರಿಗೆ ಟಾಸ್ಕ್‌ ನೀಡಲಾಗಿದೆ ಎಂದು ಮಹಿಳೆಯನ್ನು ವಿಚಾರಣೆ ಮಾಡುವ ವೇಳೆ ತಿಳಿದುಬಂದಿದೆ. ಆಕೆಯ ಬಂಧನಕ್ಕೂ ಮುನ್ನ ನವೆಂಬರ್ 17 ರಂದು ಜಮ್ಮು ಕಾಶ್ಮೀರ ಪೊಲೀಸರು 20 ಗ್ರೆನೇಡ್‌ಗಳನ್ನು ಸಾಗಿಸುತ್ತಿದ್ದ 28 ವರ್ಷದ ಆಸಿಯಾ ಜಾನ್‌ ಎಂಬ ಮಹಿಳೆಯನ್ನು ಲವಾಯ್‌ಪೊರಾ ಬಳಿ ಬಂಧಿಸಿದ್ದರು. ನಗರಕ್ಕೆ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಉಗ್ರರು ಯತ್ನಿಸುತ್ತಿದ್ದರು ಎಂಬ ಮಾಹಿತಿ ಮೇರೆಗೆ ಆಕೆನನ್ನು ಬಂಧಿಸಿದ್ದು, ಮದ್ದು ಗುಂಡನ್ನು ಸಹ ಆಕೆ ಹೊಂದಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ, ಪೊಲೀಸರಿಂದ ಹತ್ಯೆಯಾಗಿದ್ದ ಕಣಿವೆ ರಾಜ್ಯದಲ್ಲಿ ಲಷ್ಕರ್ ಮುಖ್ಯಸ್ಥನಾಗಿದ್ದ ಉಗ್ರ ಅಬು ಇಸ್ಮಾಯಿಲ್‌ ಹಾಗೂ ಛೋಟಾ ಖಾಸಿಮ್‌ ಎಂಬ ಇಬ್ಬರು ಉಗ್ರರಿಗೆ ಉತ್ತರ ಕಾಶ್ಮೀರದಿಂದ ಮಹಿಳೆಯೊಬ್ಬರು ಶಸ್ತ್ರಾಸ್ತ್ರಗಳ ಸಾಗಣೆ ಮಾಡುತ್ತಿದ್ದರಳು ಎಂಬ ಅನುಮಾನದ ಮೇರೆಗೆ ಸೈಯದ್‌ ಶಾಝಿಯಾ ಮೇಲೆ ಕಣ್ಣಿಟ್ಟಿದ್ದರು. ಬಳಿಕ, ಗಡಿಯಿಂದಾಚೆಗಿನ ಜನರು ಆಕೆಗೆ ಯುವಕರನ್ನು ಬಂದೂಕು ಹಿಡಿಯುವಂತೆ ಮಾಡಲು, ಹನಿ ಟ್ರ್ಯಾಪಿಂಗ್ ಮಾಡಲು ಸಹಾಯ ಮಾಡುತ್ತಿದ್ದರು ಎಂಬ ಅಂಶ ಅಧಿಕಾರಿಗಳ ಗಮನಕ್ಕೆ ಬಂದಿದೆ.

ಆಕೆ, ಜೈಷ್‌ – ಇ – ಮೊಹಮ್ಮದ್‌ ಉಗ್ರ ಸಂಘಟನೆಯ ಶೇರ್ವಾನ್‌ ಅಲಿಯಾಸ್ ಅಲಿ ಎಂಬಾತನೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದಳು. ಬಳಿಕ, ಆಕೆಯನ್ನು ಸುಫಿಯಾನ್ ಹಾಗೂ ಖಾಸಿಮ್ ಖಾನ್‌ ಗೌರಿ ಎಂಬ ಇಬ್ಬರು ಪಾಕ್‌ ಉಗ್ರರ ಜತೆ ಪರಿಚಯ ಮಾಡಿಕೊಡಲಾಗಿತ್ತು. ನಂತರ, ಜೈಷ್ ಉಗ್ರ ಸಂಘಟನೆಯಲ್ಲಿದ್ದ ಆಕೆ ಕಣಿವೆ ರಾಜ್ಯದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಸ್ತು ಸಾಗಿಸಲು ಪ್ರಮುಖ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಳು. ಅಲ್ಲದೆ, ಇರ್ಫಾನ್ ಎಂಬ ವಿಶೇಷ ಪೊಲೀಸ್ ಅಧಿಕಾರಿ ಶಾಝಿಯಾಗೆ ಮಾಹಿತಿಗಳನ್ನು ನೀಡುತ್ತಿದ್ದ ಎಂಬುದು ಸಹ ಆಕೆಯ ಬಂಧನಕ್ಕೂ ಮುನ್ನ ತಿಳಿದುಬಂದಿದೆ.

ಈ ಹಿನ್ನೆಲೆ, ಆಕೆಯನ್ನು ಐಪಿಸಿಗೆ ಸಮನಾದ ಆರ್‌ಪಿಸಿ ಹಾಗೂ ಶಸ್ತ್ರಾಸ್ತ್ರ ಕಾಯಿದೆಯಡಿ ಬಂಧಿಸಲಾಗಿದೆ.

Comments are closed.