ರಾಷ್ಟ್ರೀಯ

ವಯಸ್ಸಿನಲ್ಲಿ 20 ವರ್ಷ ಕಿರಿಯ ಯೋಗಿ ಕಾಲಿಗೆ ನಮಸ್ಕರಿಸಿದ ಛತ್ತೀಸ್​ಗಢ ಮುಖ್ಯಮಂತ್ರಿ

Pinterest LinkedIn Tumblr


ಛತ್ತೀಸ್​ಗಢ: ಛತ್ತೀಸ್​ಗಢದ ಮುಖ್ಯಮಂತ್ರಿ ರಮಣ​ ಸಿಂಗ್​ ತಮಗಿಂತ 20 ವರ್ಷ ಕಿರಿಯರಾದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜನಂದ್​ಗಾಂವ್​ ಕ್ಷೇತ್ರದಿಂದ ರಮಣ ಸಿಂಗ್​ ಇಂದು ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಯೋಗಿ ಆದಿತ್ಯನಾಥ ಅವರ ಕಾಲಿಗೆರಗಿ ಆಶೀರ್ವಾದ ಪಡೆದಿದ್ದಾರೆ.

ಕೇವಲ ವಯಸ್ಸಿನಲ್ಲಿ ಮಾತ್ರವಲ್ಲ… ರಾಜಕೀಯದಲ್ಲೂ ರಮಣ ಸಿಂಗ್​ ಯೋಗಿ ಆದಿತ್ಯನಾಥ ಅವರಿಗಿಂತಲೂ ಸಾಕಷ್ಟು ಅನುಭವಸ್ಥರು. ಅತ್ಯಂತ ಹೆಚ್ಚು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ನಾಲ್ಕನೇ ರಾಜಕಾರಣಿ ಎಂಬ ಹೆಗ್ಗಳಿಕೆಯೂ ಅವರಿಗಿದೆ. ಇದೇ ಮೊದಲ ಬಾರಿ ರಾಜಕಾರಣಕ್ಕಿಳಿದು ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ ಅವರ ಅನುಭವ ರಮಣ ಸಿಂಗ್​ ಅವರ ಅನುಭವದ ಮುಂದೆ ಏನೂ ಅಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.1970ರಲ್ಲೇ ಬಿಜೆಪಿ ಸೇರಿದ ರಮಣ ಸಿಂಗ್​ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ರಾಜನಂದಗಾಂವ್​ನಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರಮಣ ಸಿಂಗ್​ ಈ ಬಾರಿ ಅದೇ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಕಾಂಗ್ರೆಸ್​ನಿಂದ ಈ ಕ್ಷೇತ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಬಂಧಿ ಕರುಣ ಶುಕ್ಲ ಸ್ಪರ್ಧಿಸಲಿದ್ದಾರೆ. ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದರಿಂದ ಬಿಜೆಪಿ, ಕಾಂಗ್ರೆಸ್​, ಮತ್ತಿತರ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

Comments are closed.