ರಾಷ್ಟ್ರೀಯ

9ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರದ ಅಸಲಿಯತ್ತು ಏನು?

Pinterest LinkedIn Tumblr


ಬಿಹಾರ: ಮುಜಫ್ಫರ್​ಪುರ್​ನಲ್ಲಿ ನಕಲಿ ಗ್ಯಾಂಗ್​ರೇಪ್​ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಲ್ಲೊಬ್ಬ ಯುವಕ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ ಹುಡುಗಿಯನ್ನು ತನ್ನ ನಾದಿನಿ ಎಂದು ಪರಿಚಯಿಸಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ದೂರು ದಾಖಲಿಸಿದ್ದ. ದಿಪೀಲ್​ ಹೆಸರಿನ ಈ ವ್ಯಕ್ತಿಯು ತನ್ನ ಬ್ಯುಸಿನೆಸ್​ ಪಾರ್ಟ್ನರ್ಸ್​ ಆಗಿದ್ದ ನಾಲ್ವರಿಗೆ ತಕ್ಕ ಪಾಠ ಕಲಿಸಬೇಕೆಂದಿದ್ದ. ಆದರೆ ಪೊಲೀಸರು ದೂರು ದಾಖಲಾದ ಕೇವಲ 5 ಗಂಟೆಗಳೊಳಗೆ ಸತ್ಯವನ್ನು ಬಹಿರಂಗಗೊಳಿಸಿದ್ದಾರೆ.

ಮಿಠನ್​ಪುರಾದ ಇಮ್ಲಿ ಚೌಕ್​ನ ನಿವಾಸಿ ದಿಪೀಲ್​ ಪೊಲೀಸ್​ ಠಾಣೆಯಲ್ಲಿ 16 ವರ್ಷದ ತನ್ನ ನಾದಿನಿಯ ಮೇಲೆ ನಾಲ್ವರು ಯುವಕರು ಅತ್ಯಾಚಾರ ನಡೆಸಿರುವುದಾಗಿ ದೂರು ದಾಖಲಿಸಿದ್ದ. ಠಾಣೆಗೆ ಬಂದಿದ್ದ ಸಂತ್ರಸ್ತೆ ಹಾಗೂ ಆಕೆಯ ಭಾವ ದಿಪೀಲ್​ನ ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆ ಕೂಡಲೇ ತನಿಖೆ ಪ್ರಾರಂಭಿಸಿದ್ದರು.

ಪೊಲೀಸರು ಆ ಕೂಡಲೇ ದಿಪೀಲ್​ನನ್ನು ತಮ್ಮೊಂದಿಗೆ ಕರೆದೊಯ್ದು ನಾಲ್ವರು ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ್ದರು. ಆದರೆ ಅಲ್ಲೆಲ್ಲೂ ಆರೋಪಿಗಳು ಕಂಡು ಬರಲಿಲ್ಲ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ದಿಪೀಲ್​ ತನ್ನ ಪರಿಚಯದ ನಾಲ್ವರು ವ್ಯಕ್ತಿಗಳೇ ತನ್ನ ಕಣ್ಣೆದುರೇ ನಾದಿನಿ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿಸಿದ್ದ.

ಈ ಅತಿ ಸೂಕ್ಷ್ಮ ಪ್ರಕರಣವನ್ನು ಹೇಗೆ ಬಗೆಹರಿಸುವುದು ಎಂದು ತಿಳಿಯದೆ ಚಿಂತಿತರಾಗಿದ್ದ ಪೊಲೀಸರು ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ ವೈದ್ಯರು ಬಾಲಕಿಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂಬ ವರದಿ ನೀಡಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ವಾಸ್ತವವಾಗಿ ದಿಪೀಲ್​ ಆಕೆಯ ಭಾವನೇ ಅಲ್ಲ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಆ ಬಾಲಕಿ ದಿಪೀಲ್​ನ ಹೆಂಡತಿಯೊಂದಿಗೆ ಒಂದು ಬ್ಯೂಟಿ ಪಾರ್ಲರ್​ನಲ್ಲಿ ಕೆಲಸ ಮಾಡುತ್ತಿದ್ದಳು. ದಿಪೀಲ್​ ಆಕೆಯನ್ನು ತನ್ನ ನಾದಿನಿ ಎಂದು ಪರಿಚಯಿಸಿ ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದ.

ಘಟನೆ ನಡೆದ ದಿನ ರಾತ್ರಿ ದಿಪೀಲ್​ ಹೆಂಡತಿ ಕೂಡಾಮನೆಯಲ್ಲಿ ಇರಲಿಲ್ಲ. ಪೊಲೀಸ್​ ತನಿಖೆಯಲ್ಲಿ ದಿಪೀಲ್​ ಈ ಹಿಂದೆ ಮದ್ಯ ಮಾರಾಟ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ ಎಂಬ ವಿಚಾರವೂ ಬಯಲಾಗಿದ್ದು, ಇದನ್ನು ಆತನೇ ಒಪ್ಪಿಕೊಂಡಿದ್ದಾನೆ. ಇದರೊಂದಿಗೆ ಉದ್ಯಮ ಮಾಡದೇ ಇದ್ದ ಕಾರಣದಿಂದ ಆರೋಪಿಗಳೆಂದು ದೂಷಿಸಲಾದ ನಾಲ್ವರೊಂದಿಗೆ ಆತನ ಸಂಬಂಧ ಹದಗೆಟ್ಟಿತ್ತು.

ವೈಯುಕ್ತಿಕ ವಿಚಾರವಾಗಿ ನಡೆದ ಹೊಡೆದಾಟದ ಸೇಡು ತೀರಿಸಿಕೊಳ್ಳಲು ದಿಪೀಲ್​ ತನ್ನ ಹಿಂದಿನ ಪಾರ್ಟ್ನರ್ಸ್​ ವಿರುದ್ಧ ಗ್ಯಾಂಗ್​ರೇಪ್​ ಷಡ್ಯಂತ್ರ ರೂಪಿಸಿದ್ದಾನೆ ಎಂಬ ವಿಚಾರವೂ ತನಿಖೆಯಿಂದ ಬಯಲಾಗಿದೆ. ಎಲ್ಲಾ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ದಿಪೀಲ್​ನನ್ನು ಬಂಧಿಸಿದ್ದು, ಬಾಲಕಿಯ ತಂದೆ- ತಾಯಿಯನ್ನು ಠಾಣೆಗೆ ಕರೆದಿದ್ದಾರೆ.

Comments are closed.