ಮನೋರಂಜನೆ

ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಬಂಧನ

Pinterest LinkedIn Tumblr


ಮುಂಬೈ: ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಬಿಗ್‌ ಬಾಸ್‌ನ ಮಾಜಿ ಸ್ಪರ್ಧಿಯನ್ನು ಬಂಧಿಸಲಾಗಿದ್ದು, ಆರೋಪಿಯಿಂದ 8 ಎಂ.ಡಿ. ಡ್ರಗ್‌ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಆಧಾರದ ಮೇಲೆ ನವಿ ಮುಂಬೈನ ಪ್ರಸಿದ್ಧ ಹೋಟೆಲ್‌ ಮೇಲೆ ಮಾದಕ ದ್ರವ್ಯ ನಿಯಂತ್ರಣ ದಳದ ಅಧಿಕಾರಿಗಳು ದಾಳಿ ನಡೆಸಿ ಇಂದು ಅಜಾಜ್‌ ಖಾನ್‌ನನ್ನು ಬಂಧಿಸಿದ್ದಾರೆ.

ಅಮಲು ತರುವ 2.3 ಗ್ರಾಂ ಇರುವ ನಿಷೇಧಿತ ಎಂಡಿ ಡ್ರಗ್ಸ್‌ ಮಾತ್ರೆಗಳು ಸ್ಥಳದಲ್ಲಿ ಲಭ್ಯವಾಗಿವೆ. ಮೂಲಗಳ ಪ್ರಕಾರ ಪೊಲೀಸರು ಸ್ಥಳಕ್ಕೆ ತಲುಪಿದಾಗ ಅಜಾಜ್‌ ಮತ್ತಿನಲ್ಲಿದ್ದ ಮತ್ತು ಪ್ರಜ್ಞೆಯೇ ಇರಲಿಲ್ಲ.

ಸದ್ಯ ಆತನನ್ನು ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದ್ದು, ಆತನ ಎರಡು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾದಕ ದ್ರವ್ಯ ಸರಬರಾಜು ಆರೋಪದ ಮೇಲೆ 2017ರಲ್ಲಿಯೂ ಅಜಾಜ್‌ ಖಾನ್‌ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಬ್ಯೂಟಿಶಿಯನ್‌ ಒಬ್ಬರಿಗೆ ಅಶ್ಲೀಲ ಚಿತ್ರಗಳು ಮತ್ತು ಸಂದೇಶಗಳನ್ನು ಕಳುಹಿಸಿದ್ದ ಆರೋಪದ ಮೇಲೆ ಅಜಾಜ್‌ನನ್ನು ಬಂಧಿಸಲಾಗಿತ್ತು. ನಂತರ ಅಜಾಜ್‌ ಜಾಮೀನಿನ ಮೇಲೆ ಹೊರಬಂದಿದ್ದರು.

Comments are closed.